ಅಚ್ಚರಿ ಅಂದ್ರೆ ಆಂಧ್ರ ಸರ್ಕಾರ ನಮ್ಮದೇನು ತಕಾರಾರು ಇಲ್ಲ ಅಂದಿದೆ ( janardhana reddy)
ಬಳ್ಳಾರಿ : ಗಣಿಗಾರಿಕೆಯ ಕಾರಣದಿಂದಲೇ ಜೈಲು ಸೇರಿದ್ದ ಜನಾರ್ಧನ ರೆಡ್ಡಿ ( janardhana reddy) ಇದೀಗ ಮತ್ತೊಂದು ಸುತ್ತಿನ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ. ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿರುವ ಅವರು ಗಣಿಗಾರಿಕೆ ನಡೆಸಲು ಅನುಮತಿ ಕೊಡಿ ಅಂದಿದ್ದಾರೆ.
ಜನಾರ್ಧನ ರೆಡ್ಡಿ ಮಾಲೀಕತ್ವದ ಓಬಾಳಪುರಂ ಮೈನಿಂಗ್ ಕಂಪನಿ ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಹಿಂದೆ ಆಂಧ್ರ ಮತ್ತು ಕರ್ನಾಟಕದ ಗಡಿ ಸಮಸ್ಯೆಯಿಂಗ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಇದೀಗ ಗಡಿ ವಿವಾದ ಬಗೆ ಹರಿದಿದೆ. ಹೀಗಾಗಿ ಗಣಿಗಾರಿಕೆ ನಡೆಸಲು ಆನುಮತಿ ಕೊಡಿ ಅಂದಿದೆ.
ಇನ್ನು ಓಎಂಸಿಯ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ನಮ್ಮದೇನು ತಕರಾರು ಇಲ್ಲ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ಗಡಿ ರೇಖೆಯನ್ನು ಗುರುತಿಸಿದೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದೇನು ತೊಂದರೆ ಇಲ್ಲ ಅಂದಿದೆ.
ಈ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂಕೋರ್ಟ್ ಮುಂದೆ ಬರಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದರೆ ಹನ್ನೊಂದು ವರ್ಷಗಳ ಬಳಿಕ ರೆಡ್ಡಿ ಸಹೋದರರು ಗಣಿ ಧೂಳೆಬ್ಬಿಸಲಿದ್ದಾರೆ.
ಇದನ್ನು ಓದಿ : Vitla skeleton : ವಿಟ್ಲದ ಕಾಡಿನಲ್ಲಿ ತಲೆ ಬುರುಡೆ ಪತ್ತೆ : ಪ್ರಕರಣ ಭೇದಿಸಿದ ಪೊಲೀಸರು
Discussion about this post