ಬೆಂಗಳೂರು : ಒಡವೆ ಖರೀದಿ ವಿಚಾರದಲ್ಲಿ ಪತಿ ಹಾಗೂ ಪತ್ನಿಯ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ದಯಾನಂದನಗರದಲ್ಲಿ ನಡೆದಿದೆ. ಮೃತಳನ್ನು ನಾಜಿಯಾ ಎಂದು ಗುರುತಿಸಲಾಗಿದೆ.
ಪತಿ ಫಾರೂಕ್ ಈ ತಿಂಗಳ ಮನೆ ಬಾಡಿಗೆ ಹಣ ನೀಡಲು 6,500 ರೂ. ಎತ್ತಿಟ್ಟಿದ್ದರು. ಇದೇ ಹಣದಿಂದ ನಾಜಿಯಾ ಒನ್ ಗ್ರಾಮ್ ಗೋಲ್ಡ್ ಖರೀದಿಸಿದ್ದರು. ಈ ವಿಚಾರವಾಗಿ ಫಾರೂಕ್ ಹಾಗೂ ನಾಜಿಯಾ ನಡುವೆ ಜಗಳ ನಡೆದಿತ್ತು. ಈ ಸಂದರ್ಭದಲ್ಲಿ ಪತ್ನಿಯ ಮೇಲಿನ ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ.
ಇನ್ನು ಘಟನೆ ಬಗ್ಗೆ ಮಾತನಾಡಿರುವ ನಾಜಿಯಾ ಪುತ್ರಿ, ಅಪ್ಪ ಆಟೋ ಚಾಲಕನಾಗಿದ್ದು, ಅಮ್ಮನಿಗೆ ಅಪ್ಪ ಹೊಡೆದಾಗ ಅಮ್ಮನ ತಲೆ ಗೋಡೆಗೆ ತಾಗಿತ್ತು. ತಲೆಗೆ ಪೆಟ್ಟು ಬಿದ್ದಿದರಿಂದ ಬ್ರೈನ್ ಡ್ಯಾಮೇಜ್ ಆಗಿತ್ತು. ಹೀಗಾಗಿ ಬೆಂಗಳೂರಿನ ನಾಲ್ಕೈದು ಆಸ್ಪತ್ರೆ ಸುತ್ತಾಡಿದ್ರೂ ಅಮ್ಮ ಬದುಕಲಿಲ್ಲ ಅಂದಿದ್ದಾಳೆ.
ಇನ್ನು ಈ ಬಗ್ಗೆ ನಾಜಿಯಾ ಪೋಷಕರು ಮಾತನಾಡಿದ್ದು, ನಮಗೆ ವಿಷಯವೇ ಗೊತ್ತಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಬಂದ ಬಳಿಕ ವಿಷಯ ಗೊತ್ತಾಗಿದೆ. ಅವರ ಮನೆಯಲ್ಲಿ ಏನು ನಡೆದಿದೆ ಅಂತಾ ಗೊತ್ತಿಲ್ಲ. ಪೊಲೀಸರು ತನಿಖೆ ನಡೆಸುತ್ತಾರೆ ಅಂದಿದ್ದಾರೆ. ಇದೀಗ ಅಳಿಯನ ವಿರುದ್ಧ ನಾಜಿಯಾ ಪೋಷಕರು ದೂರು ದಾಖಲಿಸಿದ್ದಾರೆ.
Discussion about this post