ಪಂಚೆ ಕಟ್ಟಿ ಇಲ್ಲದ ಕರ್ಮಕ್ಕೆ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಜನ ಎಚ್ಚೆತ್ತುಕೊಳ್ಳೋದಿಲ್ಲ ( Honey trap)
ಬೆಂಗಳೂರು : ಮೊಬೈಲ್ ಫೋನ್ ಮೂಲಕ ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ( Honey trap ) ಖೆಡ್ಡಾಗೆ ಬೀಳಿಸಿದ್ದ ಖದೀಮರ ತಂಡವನ್ನು ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಟಿಎಂ ಬಡಾವಣೆ ನಿವಾಸಿಗಳಾದ ಹಲಿಮಾ ಆಲಿಯಾಸ್ ಪ್ರಿಯಾ, ಜಾಹೀದ್, ಮುಕ್ತಿಹಾರ್, ಫಾರನ್ ಮತ್ತು ಅಸ್ಲಾಂ ಎಂದು ಗುರುತಿಸಲಾಗಿದೆ. ( Honey trap)
ಇದನ್ನು ಓದಿ : Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ
ಅಕ್ಟೋಬರ್ ಕೊನೆಯ ವಾರದಲ್ಲಿ ತಮಿಳುನಾಡು ಕೃಷ್ಣಗಿರಿಯ ಹೊಸೂರು ತಾಲೂಕಿನ ತೆರುಪೇಟೆಯ ದಿಲೀಪ್ (32) ಅನ್ನುವವರಿಗೆ ಹಾಯ್ ಅನ್ನುವ ಸಂದೇಶ ಮೊಬೈಲ್ ಗೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ವೇಳೆ ತನ್ನನ್ನು ಪ್ರಿಯ ಎಂದು ಪರಿಚಯಿಸಿಕೊಂಡ ಯುವತಿ ಮಾತಿಗೆ ಮಾತು ಬೆಳೆಸಿ ಮರಳು ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಮನೆಯಲ್ಲಿ ಒಬ್ಬಳೇ ಇದ್ದೇನೆ ಭೇಟಿಯಾಗೋಣ ಬಾ ಎಂದು ಆಹ್ವಾನ ಬೇರೆ ಕೊಟ್ಟಿದ್ದಾಳೆ. ದಿಲೀಪ್ ಬೇರೆ ಕಡೆ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಅಂದು ಭೇಟಿ ಸಾಧ್ಯವಾಗಿಲ್ಲ. ಅಕ್ಟೋಬರ್ 28 ರಂದು ಮತ್ತೆ ಕರೆ ಮಾಡಿದ ಪ್ರಿಯಾ, ಮನೆಯಲ್ಲಿ ನಾನು ಏಕಾಂಗಿ ಎಂದು ಲೋಕೇಶನ್ ಕಳುಹಿಸಿದ್ದಾಳೆ. ಮಾತು ನಂಬಿದ ದಿಲೀಪ್ ಗೂಗಲ್ ಮ್ಯಾಪ್ ಸೂಚನೆಯಂತೆ ಮನೆ ಬಾಗಿಲು ತಟ್ಟಿದ್ದಾನೆ.
ಇದನ್ನು ಓದಿ : Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್
ಇತ್ತ ಗೂಗಲ್ ಮ್ಯಾಪ್ ಆಫ್ ಮಾಡಿ ಮನೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ನಾಲ್ವರು ಪುರುಷರು ಮನೆಗೆ ನುಗ್ಗಿದ್ದಾರೆ. ದಿಲೀಪ್ ನನ್ನು ಥಳಿಸಿ, ಐಫೋನ್, ಕಾರು ಕೀ ಮತ್ತು 26 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಇದಾದ ನಂತರ ದಿಲೀಪ್ ಮತ್ತು ಪ್ರಿಯಾಳನ್ನು ಅಕ್ಕ ಪಕ್ಕ ನಿಲ್ಲಿಸಿ ಅರೆ ನಗ್ನ ವಿಡಿಯೋ ಸೆರೆ ಹಿಡಿದು 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.ಕಾಸು ಕೊಡದಿದ್ರೆ ವಿಡಿಯೋವನ್ನು ಹೆಂಡ್ತಿಗೆ ಕಳುಹಿಸೋದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಸ್ನೇಹಿತ ಮತ್ತು ಸಹೋದರನಿಗೆ ಕರೆ ಮಾಡಿ ತಲಾ 25 ಸಾವಿರ ರೂಪಾಯಿ ಅನ್ ಲೈನ್ ನಲ್ಲಿ ಹಣ ಹಾಕಿಸಿ ಆರೋಪಿಗಳಿಗೆ ಕೊಟ್ಟಿದ್ದಾನೆ.
ಉಳಿದ ಹಣ ತಂದ ಮೇಲೆ ಕಾರು ಕೀ ಕೊಡ್ತೀವಿ ಎಂದು ಹೊರ ದಬ್ಬಿದ್ದಾರೆ. ಮಾರನೇ ದಿನ ಕರೆ ಮಾಡಿದ ಆರೋಪಿಗಳು 60 ಸಾವಿರ ಕೊಟ್ರೆ ಕಾರು ವಾಪಾಸ್ ಅಂದಿದ್ದಾರೆ. ಕೊನೆಗೆ ಸ್ನೇಹಿತನ ಸಲಹೆ ಮೇರೆಗೆ ದಿಲೀಪ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಆರೋಪಿಗಳ ಪೈಕಿ ಜಾಹೀದ್ ಮತ್ತು ಹಲೀಮಾ ಪರಸ್ಪರ ಪ್ರೀತಿಸುತ್ತಿದ್ದರು. ದಿಢೀರ್ ಶ್ರೀಮಂತರಾಗೋ ಸಲುವಾಗಿ ಪ್ರೇಯಸಿಯನ್ನೇ ದಂಧೆಗೆ ಬಿಟ್ಟಿದ್ದ. ಹಲೀಮಾಳನ್ನು ಬಳಸಿ ಹನಿಟ್ರ್ಯಾಪ್ ಸಂಚು ರೂಪಿಸಿದ್ದ. ಇದೀಗ ಇದೇ ಗ್ಯಾಂಗ್ ಹಲವಾರು ಮಂದಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿರೋದು ಗೊತ್ತಾಗಿದೆ. ಮರ್ಯಾದೆಗೆ ಅಂಜಿದವರು ಕಾಸು ಕೊಟ್ಟು ಸುಮ್ಮನಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Discussion about this post