300 ಕೋಟಿಯಲ್ಲೇ ಕನ್ನಡವೇ ತಂದು ಕೊಟ್ಟಿದ್ದು 150 ಕೋಟಿ ( Kantara Box Office 300 crore)
ಒಂದು ಪಂಚೆ ಒಂದು ಬೈರಾಸು ಸುತ್ತಿ ಮಾಡಿದ ಕಾಂತಾರ ( Kantara Box Office 300 crore) ಸಿನಿಮಾ ನಿರೀಕ್ಷೆಯನ್ನು ಮೀರಿ ಸದ್ದು ಮಾಡುತ್ತಿದೆ. ಕರಾವಳಿಯ ಬದುಕಿನ ಸಣ್ಣ ಎಳೆಯೊಂದನ್ನು ಹಿಡಿದು ನೇಯ್ದ ಕಥೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆಚರಣೆ, ನಂಬಿಕೆ, ದೌರ್ಜನ್ಯ ಹೀಗೆ ಎಲ್ಲವನ್ನೂ ತೋರಿಸಿದ ಸಿನಿಮಾದ ಯಶಸ್ವಿಗೆ ಕಾರಣ ಏನು ಅನ್ನೋದು ಇನ್ನೂ ನಿಗೂಢ. ಕಾಂತಾರದ ಗೆಲುವಿಗೆ ಕಾರಣ ಏನು ಅಂದ್ರೆ ಅದನ್ನು ಡಿಕೋಡ್ ಮಾಡುವ ಯಾವ ವಿಮರ್ಶಕರೂ ಇನ್ನು ಸಿಕ್ಕಿಲ್ಲ.
ಈ ನಡುವೆ 30 ದಿನಗಳಲ್ಲಿ 300 ಕೋಟಿ ಬಾಚಿರುವ ಕಾಂತಾರ 300 ಕೋಟಿರೂ ಕ್ಲಬ್ ಸೇರಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕಾಂತಾರ ಇದೀಗ ದೊಡ್ಡ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್ ಸೀಸ್ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ 150 ಕೋಟಿಯಾಗಿದೆ. ತೆಲುಗಿನಿಂದ 50 ಕೋಟಿ, ಹಿಂದಿಯಿಂದ 42.95 ಕೋಟಿ. ತಮಿಳು ಮತ್ತು ಮಲಯಾಳಂ ಕೂಡಾ ದೊಡ್ಡ ಮೊತ್ತವನ್ನೇ ಸಂಗ್ರಹಿಸಿದೆ. ( Kantara Box Office 300 crore)
Read More : Shashi Kumar BJP : ಚಿತ್ರನಟ ಶಶಿಕುಮಾರ್ ಬಿಜೆಪಿಗೆ : ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್
ತೆಲುಗಿನ ವಿಚಾರಕ್ಕೆ ಬರುವುದಾದ್ರೆ ಕನ್ನಡದ ಕಾಂತಾರ ದಾಖಲೆಯನ್ನು ಬರೆದಿದೆ. ತೆಲುಗಿಗೆ ಡಬ್ ಆಗಿ ಈ ಮೊತ್ತ ಸಂಗ್ರಹಿಸಿರುವ 6ನೇ ಸಿನಿಮಾ ಇದಾಗಿದ್ದು, ಕನ್ನಡದ ಎರಡನೇ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮೊತ್ತಕ್ಕೆ ತುಳು ಕಾಂತಾರದ ಮೊತ್ತ ಇನ್ನೂ ಸೇರಿಕೊಳ್ಳಬೇಕಷ್ಟೇ. ಈಗಾಗಲೇ ತುಳು ಡಬ್ಬಿಂಗ್ ಮುಕ್ತಾಯವಾಗಿದ್ದು, ತುಳು ಭಾಷೆಯಲ್ಲೂ ಕಾಂತಾರ ಬಿಡುಗಡೆಯಾದ ಬಳಿಕ ಮತ್ತೆ ಕಾಂತಾರದ ಕಲೆಕ್ಷನ್ ಏರಲಿದೆ.
Discussion about this post