ಮಾಡ್ರನ್ ಲೈಫ್ ಸ್ಟೈಲ್ ಗೆ ಮಾರು ಹೋಗಿ ವಿಲಾಸಿ ಜೀವನ ನಡೆಯುತ್ತಿದ್ದ 25 ವರ್ಷದ ಸುಪ್ರೀಯಾ ಜೈನ್ ಎಂಬಾಕೆಯನ್ನು ಆಕೆಯ ಪ್ರಿಯಕರ ಕಮಲೇಶ್ ಸಾಹು ಎಂಬಾತ ಕುಡುಗೋಲಿನಿಂದ 38 ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 25ರ ಹರೆಯದ ಸುಪ್ರೀಯಾ ಜೈನ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲೇಶ್ ಸಾಹು ಎಂಬಾತನೊಂದಿಗೆ ಫೇಸ್ ಬುಕ್ ನಲ್ಲಿ ಸಂಬಂಧ ಬೆಳೆಸಿದ್ದಳು.
ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲೇಶ್ ಸಾಹು ಸುಪ್ರಿಯಾ ಜೈನ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಇದಕ್ಕೆ ಸುಪ್ರಿಯಾ ತನಗೆ ಒಂದು ಕೆಲಸ ಸಿಕ್ಕ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.
ಇದನ್ನೇ ಸತ್ಯ ಎಂದು ಆತ ನಂಬಿದ್ದ. ಆದರೆ ದಿನ ಕಳೆದಂತೆ ಪತ್ರಕರ್ತೆಯ ಅಸಲಿ ಬಣ್ಣ ಬಯಲಾಗಿದೆ. ಸಾಹುಗೆ ಆಕೆ ವಿಲಾಸಿ ಜೀವನ ನಡೆಸುತ್ತಿದ್ದು ಸಿಕ್ಕಾಪಟ್ಟೆ ಬಾಯ್ ಫ್ರೆಂಡ್ಸ್ ಹೊಂದಿದ್ದಾಳೆ ಅನ್ನುವದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಸಾಹು ಆಕೆಯನ್ನು ಕೊಲ್ಲಬೇಕು ಎಂದು ತೀರ್ಮಾನಕ್ಕೆ ಬಂದಿದ್ದ.
ಅದರಂತೆ ಕಳೆದ ಗುರುವಾರ ಸುಪ್ರೀಯಾ ಊಟಕ್ಕೆಂದು ಕಚೇರಿಯಿಂದ ಹೊರಗೆ ಬರುತ್ತಿದ್ದ ವೇಳೆ ದಾಳಿ ನಡೆಸಿದ ಸಾಹು ಆಕೆಯ ಜಡೆಯನ್ನು ಹಿಡಿದು ಏಳೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಮುಂದಾದ ಇಬ್ಬರಿಗೆ ಹತ್ತಿರ ಬಂದರೆ ಕೊಲ್ಲುವುದಾಗಿ ಬೆದರಿಸಿದ್ದಾನೆ.
ಪ್ರಯಾಣಿಕನೇ ಊಬರ್ ಚಾಲಕನಾದ ಕಥೆ…..
ಬೆದರಿದ ಸಹೋದ್ಯೋಗಿಗಳು ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಸಾಹು ಸುಪ್ರೀಯಾಳನ್ನು ಕೊಚ್ಚಿ ರಕ್ತದ ಮಡುವಿನಲ್ಲಿ ಕುಳಿತ್ತಿದ್ದ. ಆತನ ಆಕ್ರೋಶ ಅದೆಷ್ಟಿತ್ತು ಅಂದರೆ 38 ಬಾರಿ ಸುಪ್ರೀಯಾಳ ದೇಹಕ್ಕೆ ಚುಚ್ಚಿದ್ದ.
ಬಳಿಕ ಪೊಲೀಸರು ಸಾಹುವನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಪ್ರೀಯಾಳ ಮೇಲೆ ಆರೋಪಗಳ ಸುರಿಮಳೆಗೈದಿದ್ದಾನೆ. ಇದೀಗ ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discussion about this post