ನವದೆಹಲಿ : ಹೆತ್ತು ಹೊತ್ತು ಸಾಕಿದ ಅಮ್ಮನನ್ನೇ ಪಾಪಿ ಪುತ್ರನೊಬ್ಬ ಗುಂಡಿಕ್ಕಿ ಕೊಂದ ಘಟನೆ ದೆಹಲಿ ಹೊರವಲಯದ ಮುಂಡಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ( ಬುಧವಾರ ) ಈ ಘಟನೆ ನಡೆದಿದ್ದು ಘಟನೆಯಲ್ಲಿ 55 ವರ್ಷದ ರೋಹಿಣಿ ಅನ್ನುವರು ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಪ್ರಸ್ತುತ ರೋಹಿಣಿ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ತಾಯಿಯನ್ನು ಗುಂಡಿಕ್ಕಿ ಕೊಲೆಗೈಯಲು ಯತ್ನಿಸಿದ ಆರೋಪಿ ಪುತ್ರ ಸಂದೀಪ್ (30) ಪರಾರಿಯಾಗಿದ್ದಾನೆ.
ರೀತು ಎನ್ನುವಾಕೆಯನ್ನು ಮದುವೆಯಾಗಿದ್ದ ಸಂದೀಪ್ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ತಾಯಿಯೊಂದಿಗೆ ಐದು ವರ್ಷದ ಮಗಳ ಜೊತೆ ವಾಸವಿದ್ದ. ನಿರುದ್ಯೋಗಿಯಾಗಿದ್ದ ಸಂದೀಪ ಬುಧವಾರ ರಾತ್ರಿ ಮನೆಗೆ ಬಂದವನೇ ತಾಯಿ ಬಳಿ ಹಣ ಕೇಳಿದ್ದ. ಈ ವಿಷಯದಲ್ಲಿ ಇಬ್ಬರ ನಡುವೆ ಹಣಕಾಸಿನ ವಿಷಯಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಸಂದೀಪ್ ತಾಯಿಗೆ ಗುಂಡು ಹೊಡೆದಿದ್ದಾನೆ.
Discussion about this post