ಬೆಂಗಳೂರು : ಕೊರೊನೋ ಸೋಂಕಿನ ಸಂದರ್ಭದಲ್ಲಿ ಸಾವಿರಾರು ಮಂದಿ ಮಾನವೀಯತೆ ತೋರಿದ್ದಾರೆ. ದುರಂತ ಅಂದ್ರೆ ಅದಕ್ಕಿಂತ ಹೆಚ್ಚು ಮಂದಿ ಅಮಾನವೀಯವಾಗಿಯೂ ವರ್ತಿಸಿದ್ದಾರೆ. ಅದರಲ್ಲೂ ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿದವರು ಮೃತಪಟ್ಟರೆ ಆಸ್ಪತ್ರೆ ಸಿಬ್ಬಂದಿಯೇ ನಗ ನಗದು ಕದಿಯುತ್ತಿರುವುದು ವಿಪರ್ಯಾಸ
ಇದೀಗ ಇಂತಹುದೇ ದೂರು ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಟ್ಟಿಗೇನಹಳ್ಳಿಯ ಭಾಗ್ಯಮ್ಮ ಅನ್ನುವವರು ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಬಾಗಲೂರು ಕ್ರಾಸ್ ನಲ್ಲಿರುವ ಸೈಟ್ ಕೇರ್ ಆಸ್ಪತ್ರೆಗೆ ಮೇ 11 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೇ 25 ರಂದು ಅವರು ಮೃತಪಟ್ಟಿದ್ದಾರೆ.
ಮೃತಪಟ್ಟ ಮರುದಿನ ಆಸ್ಪತ್ರೆಯವರು ಪಾರ್ಥಿವ ಶರೀರವನ್ನು ನಮಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಭಾಗ್ಯಮ್ಮ ಮೈ ಮೇಲಿದ್ದ ಆಭರಣಗಳನ್ನು ಎಗರಿಸಿದ್ದಾರೆ ಅನ್ನುವುದು ಅವರ ಸಂಬಂಧಿಕರ ಆರೋಪ.
ಈ ಸಂಬಂಧ ಭಾಗ್ಯಮ್ಮ ಪತಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ಧರಿಸಿದ್ದ ಚಿನ್ನದ ಓಲೆ, ಉಂಗುರ, ಹಾಗೂ ಎರಡು ಚಿನ್ನದ ಬಲೆಗಳನ್ನು ಟಿಶ್ಯೂ ಪೇಪರ್ ನಲ್ಲಿ ಸುತ್ತಿ ಆಸ್ಪತ್ರೆ ಸಿಬ್ಬಂದಿ ನಮಗೆ ಕೊಟ್ಟಿದ್ದರು ಮನೆಗೆ ಬಂದು ನೋಡಿದರೆ ಅವರ ಕೊಟ್ಟ ಒಡವೆಗಳು ನನ್ನ ಪತ್ನಿಗೆ ಸೇರಿದಲ್ಲ. ಮಾತ್ರವಲ್ಲದೆ ಆ ಪೈಕಿ ಚಿನ್ನದ ಬಲೆಗಳು ನಕಲಿ ಎಂದು ಗೊತ್ತಾಗಿದೆ ಎಂದು ಭಾಗ್ಯಮ್ಮ ಪತಿ ಬಿ ಕೃಷ್ಣಪ್ಪ ದೂರಿದ್ದಾರೆ.
Discussion about this post