congress leader navyashree honey trap
ಬೆಳಗಾವಿ : ಹನಿಟ್ರ್ಯಾಪ್ ಮಾಡಿದ ಆರೋಪದಡಿಯಲ್ಲಿ ಕಾಂಗ್ರೆಸ್ ನಾಯಕಿ ನವಶ್ರೀ ರಾಮಚಂದ್ರರಾವ್ ವಿರುದ್ಧ ಬೆಳಗಾವಿ APMC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಆಯುಕ್ತ ಸಹಾಯ ನಿರ್ದೇಶಕ ರಾಜ್ ಕುಮಾರ್ ಟಾಕಳೆ ಅವರು ನೀಡಿದ ದೂರಿನ ಆಧಾರದಲ್ಲಿ FIR ದಾಖಲಿಸಲಾಗಿದ್ದು, ( congress leader navyashree honey trap ) ನವ್ಯಶ್ರೀ ಮತ್ತು ಆಕೆಯ ಆಪ್ತ ತಿಲಕ್ ವಿರುದ್ಧ IPC 384,448,504,506 ಮತ್ತು 34 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಟಾಕಳೆ ಕೊಟ್ಟಿರುವ ದೂರಿನ ಪ್ರಕಾರ ನವ್ಯಶ್ರೀ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನ್ನ ವಿರುದ್ಧ ಸುಳ್ಳು ಕೇಸ್ ನೀಡಿ ಮಾನನಷ್ಟ ಮಾಡಲು ಯತ್ನಿಸುತ್ತಿದ್ದಾಳೆ, ನನ್ನ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದಾಳೆ, ಜೀವ ಬೆದರಿಕೆ ಹಾಕುತ್ತಿದ್ದಾಳೆ, ಹೀಗಾಗಿ ನನ್ನ ಮತ್ತು ನನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ಬೇಕು ಎಂದು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : siri vaibhava ದಿಂದ ಮಹಾವಂಚನೆ : ಬೆಂಗಳೂರಿನಲ್ಲಿ ಮುಳುಗಿದ ಮತ್ತೊಂದು ಸೌಹಾರ್ದ ಸಹಕಾರ ಬ್ಯಾಂಕ್
ಖಾಸಗಿ ಸುದ್ದಿ ವಾಹಿನಿಗಳ ವರದಿ ಪ್ರಕಾರ ಶ್ರೀಮಂತ್ ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ರಾಜಕುಮಾರ್ ಟಾಕಳೆ ಪಿಎಸ್ ಆಗಿದ್ದರಂತೆ. ಈ ವೇಳೆ ಸಚಿವರನ್ನು ಭೇಟಿಯಾಗಲು ನವ್ಯಾ ಬಂದಿದ್ದ ಸಂದರ್ಭದಲ್ಲಿ ಟಾಕಳೆ ಜೊತೆಗೆ ಸ್ನೇಹ ಬೆಳೆದಿದೆ. ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಅನ್ನಲಾಗಿದೆ.
ಬಳಿಕ ಕೆಲಸ ಮನಸ್ತಾಪದ ನಂತ್ರ ಇಬ್ಬರೂ ದೂರವಾಗಿದ್ದರು. ಈ ನಡುವೆ ಟಾಕಲೆ ವಿರುದ್ಧ ನವ್ಯಾಶ್ರೀ ದೂರು ಕೊಟ್ಟಿದ್ದಳಂತ. ಈ ವೇಳೆ ಪೊಲೀಸರು ಸಂಧಾನ ಮಾತುಕತೆ ನಡೆಸಿದ್ದರು.ಇದೇ ವೇಳೆ 2 ಲಕ್ಷ ಡಿಡಿ ಹಣವನ್ನು ರಾಜಕುಮಾರ್ ಟಾಕಳೆ ಯುವ ಕಾಂಗ್ರೆಸ್ ನಾಯಕಿಗೆ ನೀಡಿದ್ದಾರಂತೆ. ಅದ್ಯಾವ ಕಾರಣಕ್ಕೆ ಈ ಹಣದ ವರ್ಗಾವಣೆ ನಡೆದಿದೆ ಅನ್ನುವುದು ಗೊತ್ತಾಗಿಲ್ಲ.
ದಿಗ್ವಿಜಯ ನ್ಯೂಸ್ ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವ್ಯಾ, ನಾನು ದೇಶದಲ್ಲಿ ಇರಲಿಲ್ಲ,ವಿದೇಶದಲ್ಲಿ ಇರಲಿಲ್ಲ. ಈಗ ನಾನು ಸೈಬರ್ ಕ್ರೈಂಗೆ ದೂರು ನೀಡಲಿದ್ದೇನೆ. ನನಗೆ ಒಂದು ದಿನ ಕಾಲಾವಕಾಶ ಕೊಡಿ ಎಲ್ಲಾ ಆರೋಪಗಳಿಗೆ ಉತ್ತರ ನೀಡಲಿದ್ದೇನೆ. ನನಗೆ ರಾಜಕುಮಾರ್ ಟಾಕಳೆ ಪರಿಚಯ ಇರೋದು ಹೌದು ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ 50 ಲಕ್ಷ ರೂಪಾಯಿ ಬೇಡಿಕೆ, ಕೊಡದಿದ್ರೆ ಹೆಂಡ್ತಿಗೆ ವಿಡಿಯೋ ಕಳುಹಿಸುವುದಾಗಿ ಹೇಳಿದ್ರಿ ಅನ್ನುವ ಚಾನೆಲ್ ಪ್ರಶ್ನೆಗೆ ನವ್ಯಾಶ್ರೀ ಉತ್ತರಿಸಿಲ್ಲ.
ಆದರೆ ವೈರಲ್ ಆಗಿರುವ ವಿಡಿಯೋ ಗಮನಿಸಿದ್ರೆ ಇಲ್ಲಿ ಕಾಂಗ್ರೆಸ್ ನಾಯಕಿಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಯೇ ಹನಿ ಟ್ರ್ಯಾಪ್ ಮಾಡಿದಂತಿದೆ. ಇನ್ನು ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಈ ವಿಡಿಯೋ ಕುಮಾರಕೃಪಾ ಗೆಸ್ಟ್ ಹೌಸ್ಟ್ ನಲ್ಲಿ ರೆಕಾರ್ಡ್ ಮಾಡಿದ್ದು ಎಂದು ನವ್ಯಾಶ್ರೀಯವರೇ ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕರ ಜೊತೆಗೆ ನವ್ಯಾಶ್ರೀ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೆಲಸಕ್ಕಿಂದ ಅಂಗಡಿಯಿಂದ 25 ಲಕ್ಷ ಮೌಲ್ಯದ ಚಿನ್ನ ಕದ್ದ ನೌಕರ
ಅನ್ನ ಹಾಕಿದ ಮಾಲೀಕನ ಅಂಗಡಿಗೆ ಕನ್ನ ( Gold theft ) ಹಾಕಿದ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು : ಕೆಲಸ ಮಾಡುವ ಚಿನ್ನದಂಗಡಿಯಿಂದ ಕಳೆದ ಒಂದು ವರ್ಷದಿಂದ ಚಿನ್ನ ಕಳುವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈತನ ಕೃತ್ಯಕ್ಕೆ ಸಾಥ್ ಕೊಟ್ಟಿದ್ದ ಮತ್ತೊಬ್ಬ ಸ್ನೇಹಿತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಶವಂತಪುರದ ಚೇತನ್ ನಾಯ್ಡು ( 22) ದಿ ಬೆಸ್ಟ್ ಜ್ಯುವೆಲ್ಲರಿ ಅನ್ನುವ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ. 4 ವರ್ಷಗಳಿಂದ ಇಲ್ಲೇ ಕೆಲಸ ಮಾಡುತ್ತಿದ್ದ ಕಾರಣ ಮಾಲೀಕರ ವಿಶ್ವಾಸವನ್ನೂ ಗಳಿಸಿದ್ದ. ಈ ನಡುವೆ ಗ್ರಾಹಕರೊಬ್ಬರು ಚಿನ್ನದರ ಸರಕ್ಕೆ ಆರ್ಡರ್ ಕೊಟ್ಟು ಹೋಗಿದ್ದರು. ಚಿನ್ನದ ಸರವನ್ನು ತಯಾರಿಸಿ ಅಂಗಡಿಯ ಡಿಸ್ ಪ್ಲೇ ಬೋರ್ಡ್ ನಲ್ಲಿ ಹಾಕಲಾಗಿತ್ತು.
ಗ್ರಾಹಕರು ಅಂಗಡಿಗೆ ಬಂದು ಚಿನ್ನದ ಸರ ಕೇಳಿದಾಗ ತೆಗೆದುಕೊಡಲು ಡಿಸ್ ಪ್ಲೇ ಬೋರ್ಡ್ ನೋಡಿದ್ರೆ ಚಿನ್ನದ ರ ನಾಪತ್ತೆಯಾಗಿತ್ತು. ಈ ವೇಳೆ ಅಂಗಡಿ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸೇಲ್ಸ್ ಮ್ಯಾನ್ ಚೇತನ್ ಚಿನ್ನದ ಸರ ಎಗರಿಸಿರುವುದು ಗೊತ್ತಾಗಿದೆ.
ಹೀಗಾಗಿ ಅಂಗಡಿ ಮಾಲೀಕರು ಯಶವಂತಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇದೇ ವೇಳೆ ಅಂಗಡಿ ಮಾಲೀರು ಸಂಪೂರ್ಣ ಚಿನ್ನದ ಸ್ಟಾಕ್ ಪರಿಶೀಲನೆ ನಡೆಸಿದಾಗ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮತ್ತಷ್ಟು ಸಿಸಿಟಿವಿ ದೃಶ್ಯಗಳನ್ನು ನೋಡಿದ್ರೆ ಕಳೆದ ಒಂದು ವರ್ಷದಿಂದ ಚೇತನ್ ಚಿನ್ನ ಎಗರಿಸಿರುವುದು ಬೆಳಕಿಗೆ ಬಂದಿದೆ. ಎನ್ನಿಲ್ಲ ಅಂದರೂ 25 ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳನ್ನು ಈತ ಎಗರಿಸಿದ್ದ.
ಮೊದ ಮೊದಲು ಈ ಚೇತನ್ ಸಣ್ಣ ಪ್ರಮಾಣದ ಚಿನ್ನದ ಆಭರಣ ಎಗರಿಸುತ್ತಿದ್ದ. ಬಳಿಕ ಅದನ್ನು ಮಾರಾಟವಾಗಿದೆ ಎಂದು ಪುಸ್ತಕದಲ್ಲಿ ನಮೂದಿಸುತ್ತಿದ್ದ. ಬಳಿಕ ಕದ್ದ ಚಿನ್ನವನ್ನು ಸ್ನೇಹಿತ ವಿಜಯ್ ಗೆ ತಲುಪಿಸುತ್ತಿದ್ದ. ಈ ವಿಜಯ್ ಚಿನ್ನವನ್ನು ಕೆಲವೊಮ್ಮೆ ವಿಜಯ್ ಅಡವಿಡುತ್ತಿದ್ದ, ಕೆಲವೊಮ್ಮೆ ಮಾರಾಟ ಮಾಡುತ್ತಿದ್ದ. ಬಳಿಕ ಇಬ್ಬರೂ ಹಣವನ್ನು ಹಂಚಿಕೊಳ್ಳುತ್ತಿದ್ದರು. ಹೀಗೆ ಬಂದ ಹಣದಲ್ಲಿ ಕಾರು ಬೈಕ್ ಖರೀದಿಸಿದ್ದ ಚೇತನ್ ಐಷರಾಮಿ ಜೀವನ ನಡೆಸುತ್ತಿದ್ದ ಎಂದು ಗೊತ್ತಾಗಿದೆ.
Discussion about this post