ಮಂಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯನ್ನು ನಾಗೇಶ್ ಆಚಾರ್ (46) ಎಂದು ಗುರುತಿಸಲಾಗಿದೆ. ನಾಗೇಶ್ ಆಚಾರ್ ಅವರನ್ನು ಕೊಲೆ ಮಾಡಿ ಬಳಿಕ ಮಣ್ಣಿನಡಿ ಹೂತಿಡಲಾಗಿತ್ತು. ನಾಗೇಶ್ ಆಚಾರ್ ಅವರನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಎಂಬಾತನೇ ಕೊಲೆ ಮಾಡಿ, ಮಣ್ಣಿನಡಿ ಹೂತು ಹಾಕಿದ್ದ ಅನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಇನ್ನು ಈ ಕೊಲೆ ಪ್ರಕರಣ ಸಂಬಂಧ ಕೃಷ್ಣೇಗೌಡ, ಉದಯ್, ಪ್ರದೀಪ್ ಎಂಬುವವರನ್ನು ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ
ನಾಗೇಶ್ ಆಚಾರ್ ಮೂಡಿಗೆರೆ ತಾಲೂಕಿನ ಬಾಳೂರು ಮೂಲದವರಾಗಿದ್ದು, 5 ದಿನಗಳ ಹಿಂದೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಿದರುತಳ ಕಾಡಿಗೆ ಇವರು ತೆರಳಿದ್ದರು. ಇವರ ಜೊತೆಗೆ ಕಾಡಿಗೆ ಹೋಗಿದ್ದ ಉಳಿದ ಮಂದಿ ಕಾಡಿನಿಂದ ವಾಪಾಸ್ ಬಂದಿದ್ದರು. ಆದರೆ ನಾಗೇಶ್ ಆಚಾರ್ ವಾಪಾಸ್ ಬಂದಿರಲಿಲ್ಲ. ನಾಗೇಶ್ ಆಚಾರ್ ದಾರಿ ತಪ್ಪಿರುವ ಬಗ್ಗೆ ಮಾತ್ರ ಮಾಹಿತಿ ಲಭಿಸಿತ್ತು. ಈ ಬಗ್ಗೆ ನಾಗೇಶ್ ಆಚಾರ್ ಪತ್ನಿ ಸುಮ ಬಾಳೂರು, ಗಂಡ ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಿಸಿದ್ದರು.
ಇದಾದ ಬಳಿಕ ಪೊಲೀಸರು, ಅರಣ್ಯಾಧಿಕಾರಿಗಳು, ಸಂಬಂಧಿಕರು ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಸುಳಿವು ಪತ್ತೆಯಾಗಿರಲಿಲ್ಲ. ಅಚ್ಚರಿ ಅಂದ್ರೆ ಕೃಷ್ಣೇಗೌಡ ಕೂಡಾ ಪೊಲೀಸರ ಜೊತೆಗೆ ಹುಡುಕಾಟದ ನಾಟಕ ನಡೆಸಿದ್ದ. ಕಾಡು ಪ್ರಾಣಿಗಳಿಗೆ ಅವರು ಬಲಿಯಾಗಿರಬಹೇ ಅನ್ನುವ ಅನುಮಾನ ವ್ಯಕ್ತಪಡಿಸಿದ್ದ. ಮೂರು ದಿನಗಳ ಕಾಲ ಹುಡುಕಾಟ ನಡೆಸಿದರೂ ನಾಗೇಶ್ ಆಚಾರ್ ಸುಳಿವು ಸಿಗಲಿಲ್ಲ. ಹೀಗಾಗಿ ಜೊತೆಗಿದ್ದವರನ್ನು ಠಾಣೆಗೆ ಕರೆಸಿ ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ವಿಷಯ ಬಹಿರಂಗವಾಗಿದೆ.
ಮತ್ತೆ ಏರಿದ ಗ್ಯಾಸ್ ದರ : ಹೀಗಾದ್ರೆ ಕಟ್ಟಿಗೆ ಒಲೆಯೇ ಗತಿ
ನವದೆಹಲಿ : ಈಗಾಗಲೇ ಕೊರೋನಾ ಕಾರಣದಿಂದ ತತ್ತರಿಸಿ ಹೋಗಿದ್ದ ಜನ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಜನಜೀವನವನ್ನು ಸಹಜ ಸ್ಥಿತಿಗೆ ತರಲು ಸರ್ಕಸ್ ಮಾಡುತ್ತಿದ್ದಾರೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಮಂದಿಯ ಜೀವನದ ಕಥೆಯನ್ನು ಹೇಳುವುದೇ ಬೇಡ. ಕೊರೋನಾ ಅಬ್ಬರ ಕಡಿಮೆಯಾಯ್ತು ಕೆಲಸ ಕಾರ್ಯ ಶುರುವಾಯ್ತು ಅನ್ನುವಷ್ಟು ಹೊತ್ತಿಗೆ ಆಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ.
ಇದೀಗ ಮತ್ತೆ ಅಡುಗೆ ಅನಿಲ ದರವನ್ನು ತೈಲ ಕಂಪನಿಗಳು ಏರಿಸಿದ್ದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2101 ರೂ.ಗೆ ಏರಿಕೆಯಾಗಿದೆ. ಅರೇ ಇದರಿಂದ ಜನ ಸಾಮಾನ್ಯರಿಗೇನು ಕಷ್ಟ ಅನ್ನಬೇಡಿ. ಅದ್ಯಾವುದೇ ವಸ್ತುವಿನ ದರ ಏರಿಕೆಯಾದರೂ ಮೊದಲು ಪೆಟ್ಟು ತಿನ್ನುವುದು ಬಡ ಮತ್ತು ಮಧ್ಯಮ ವರ್ಗದ ಮಂದಿ.
ಡಿಸೆಂಬರ್ 1 ರಿಂದ ಅನ್ವಯವಾಗುವಂತೆ LPG ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದ್ದು ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ನ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 103.50 ಪೈಸೆಯಷ್ಟು ಏರಿಸಿದೆ. ಹೀಗಾಗಿ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 100.50 ರೂ ಹೆಚ್ಚಳವಾಗಿದೆ. ಈ ಮೂಲಕ ಇಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 2101 ರೂಪಾಯಿ ದಾಖಲಾಗಿದೆ. ಇನ್ನು ಡೆಲಿವರಿ ಜಾರ್ಜ್ ಆಯಾ ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಯವಾಗುತ್ತದೆ.
Discussion about this post