ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಮಹಿಳೆಯರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮೋಸ ಹೋಗುತ್ತಿರುವವರು ವಿದ್ಯಾವಂತ ಮಹಿಳೆಯರೇ ಅನ್ನುವುದು ಆತಂಕದ ಸಂಗತಿ.
ಹೀಗೆ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡ ವಂಚಕರು 4 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ.
HSR lay out ನ 35 ವರ್ಷದ ಮಹಿಳೆಯೊಬ್ಬರು ನಿಗದಿತ ಶುಲ್ಕ ಪಾವತಿಸಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗೆ ತಮ್ಮ ಸ್ವಯಂ ವಿವರಗಳನ್ನು ಅಪ್ ಲೋಡ್ ಮಾಡಿದ್ದರು. ಇದನ್ನೇ ಕಾಯುತ್ತಿದ್ದ ವಂಚಕನೊಬ್ಬ ಅವರ ಸ್ನೇಹ ಬೆಳೆಸಿದ್ದಾನೆ. ಲಂಡನ್ ನ ಕಂಪನಿಯೊಂದರಲ್ಲಿ ಕೆಲಸಕ್ಕಿರುವ ನಾನು ನಿಮ್ಮನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಪುಂಗಿ ಊದಿದ್ದಾನೆ. ಇದನ್ನು ನಂಬಿದ ಮಹಿಳೆ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ವ್ಟಾಟ್ಸಾಪ್ ನಲ್ಲಿ ಚ್ಯಾಟ್ ಪ್ರಾರಂಭಿಸಿದ್ದಾರೆ.
ಅದೊಂದು ದಿನ ನಿಮಗೊಂದು ಪ್ರೀತಿಯ ಉಡುಗೊರೆ ಕಳುಹಿಸಿದ್ದೇನೆ ಎಂದು ಯವಕ ಹೇಳಿದ್ದ. ಮರು ದಿನ ಬಂದ ಕರೆಯೊಂದು “ ನಾವು ಡೆಲ್ಲಿ ಏರ್ ಪೋರ್ಟ್ ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಹೆಸರಿಗೆ ಗಿಫ್ಟ್ ಬಂದಿದೆ. ಆದರೆ gst ಕಟ್ಟಬೇಕು ಅಂದಿದ್ದಾರೆ. ಲಂಡನ್ ವ್ಯಕ್ತಿಯೇ ಗಿಫ್ಟ್ ಕಳುಹಿಸಿದ್ದಾನೆ ಎಂದು ಯುವತಿ ಹೇಳಿದ ಬ್ಯಾಂಕ್ ಖಾತೆ ಕಾಸು ತುಂಬಿದ್ದಾರೆ. ಮತ್ತೆ ಕರೆ ಮಾಡಿ ಈ ಮೊತ್ತ ಸಾಕಾಗುವುದಿಲ್ಲ ಎಂದು ಹಂತ ಹಂತವಾಗಿ 3.25 ಲಕ್ಷ ಪೀಕಿಸಿದ್ದಾರೆ. ಮತ್ತೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್. ಗಿಫ್ಟ್ ಕಳುಹಿಸಿದ್ದೇನೆ ಅಂದ ವಿಕ್ರಮ್ ಮೊಬೈಲ್ ಕಥೆಯೂ ಇದೇ ಆಗಿತ್ತು.
ಕೊನೆಗೆ ಮೋಸ ಹೋಗಿದ್ದೇನೆ ಎಂದು ಅರಿವಾದ ಮಹಿಳೆ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.
Actress Harshika Poonacha at Tomorrowland Music Festival Belgium
ಇದು HSR lay outನ ಮಹಿಳೆಯ ಕಥೆಯಾದರೆ, ಇತ್ತ ವಿಜಯನಗರದ 34 ವರ್ಷದ ಮಹಿಳೆಯೊಂದಿಗೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸಂಪರ್ಕ ಸಾಧಿಸಿದ ರಾಹುಲ್ ಎಂಬಾತ ನಾನು ಅಮೆರಿಕಾದಲ್ಲಿದ್ದೇನೆ ಎಂದು ಸಲುಗೆ ಬೆಳೆಸಿದ್ದ.
Magalu Janaki Kannada serial Actor Ganavi Laxman Rare pic
ಬಳಿಕ ನಿಮಗೊಂದು ಗಿಫ್ಠ್ ಕಳುಹಿಸಿದ್ದೇನೆ ಎಂದು 65 ಸಾವಿರ ರೂಪಾಯಿ ಖಾತೆ ಹಾಕಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಇವರು ಕೂಡಾ ಇದೀಗ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.
Discussion about this post