ಬೆಂಗಳೂರು ಗ್ರಾಮಾಂತರ : ಕಿರುತೆರೆ ನಟಿ ಸವಿ ಮಾದಪ್ಪ ಯಾನೆ ಸೌಜನ್ಯ ಸಾವಿನ ಪ್ರಕರಣ ಇನ್ನೂ ನಿಗೂಢವಾಗಿದೆ. ಮೇಲ್ನೊಟಕ್ಕೆ ಇದೊಂದು ಆತ್ಮಹತ್ಯೆಯಾಗಿ ಕಂಡರೂ, ಇದೊಂದು ಕೊಲೆ ಅನ್ನುವ ಮಾತುಗಳು ಕೇಳಿ ಬಂದಿದೆ. ಈ ಸಾವಿನ ಕುರಿತಂತೆ ಹಲವು ಅನುಮಾನಗಳಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಸವಿ ಮಾದಪ್ಪ ಅವರ ಪಾರ್ಥಿವ ಶರೀರದ ಪೋಸ್ಟ್ ಮಾರ್ಟಂ ಇಂದು ನಡೆಯಲಿದ್ದು, ಬಳಿಕ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ. ನಿನ್ನೆ ರಾತ್ರಿ ಸವಿ ಮಾದಪ್ಪ ಸಾವಿಗೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಮಗಳ ಸಾವಿನ ಕುರಿತಂತೆ ಪೋಷಕರು ನಟನೊಬ್ಬನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಸೌಜನ್ಯ ತಂದೆ ಪ್ರಭು ಮಾದಪ್ಪ, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗಳ ಸಾವಿನ ಆ ನಟ ಹಾಗೂ ಮಗಳ ಪಿಎ ಮಹೇಶ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪ್ರಭು ಮಾದಪ್ಪ ದೂರಿರುವ ಆ ನಟ ಕನ್ನಡ ಮತ್ತು ತೆಲುಗು ಕಿರು ತೆರೆಯಲ್ಲಿ ಹೆಸರು ಮಾಡಿದ್ದಾನೆ. ಆ ನಟ ಮಗಳನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ. ಹೀಗಾಗಿ ಆತನೇ ಮನೆಗೆ ಬಂದು ಮತ್ತೆ ಪೀಡಿಸಿರಬೇಕು ಹೀಗಾಗಿ ಮಗಳು ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಅನ್ನಲಾಗಿದೆ.
Sounjanya’s suicide has sent shockwaves in the Kannada television industry. She was 25 years old. She was a resident of Kushalnagar in the Kodagu district. However, Sounjanya moved to Bengaluru for work.
Discussion about this post