ಮಳೆಗಾಲದಲ್ಲಿ ವಾಹನ ಓಡಿಸಲು ಭಯ. ಒಂದು ಕಡೆ ಕೆಲವರ ನಿರ್ಲಕ್ಷ್ಯದ ಚಾಲನೆ ಮತ್ತೊಂದು ಕಡೆ ರಸ್ತೆಯ ಬದಿಯ ಮಕ ಉರುಳಿ ಬೀಳುವ ಆತಂಕ. ಹೀಗೆ ಮರ ಬಿದ್ದು ನಡೆದ ಅಪಘಾತದ ( Car Accident) ವಿಡಿಯೋ ಇಲ್ಲಿದೆ
ಚಿಕ್ಕಮಗಳೂರು : ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಕಾರಿನಲ್ಲಿದ್ದವರು ( Car Accident ) ಅಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆ ಮೂಡಿಗೆರೆ ರಸ್ತೆಯಲ್ಲಿ ನಡೆದಿದೆ.
ಎರಡು ಕಾರುಗಳು ಜೊತೆ ಜೊತೆಗೆ ಸಾಗಿ ಬರುತ್ತದೆ. ಮೊದಲ ಕಾರು ಪಾಸಾಗುತ್ತಿದ್ದಂತೆ ಕೊಂಬೆಯೊಂದು ಮುರಿದು ( Car Tree Fall) ಬೀಳುತ್ತದೆ. ಆದಾದ ಕೆಲವೇ ಕ್ಷಣದಲ್ಲಿ ಮರದ ದೊಡ್ಡ ಕೊಂಬೆ ಕಾರಿನ ಬಾನೆಲ್ ಮೇಲೆ ಬೀಳುತ್ತದೆ. ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಒಂದು ಸೆಕೆಂಡ್ ಮುಂದೆ ಸಾಗಿದ್ದರೂ ದೊಡ್ಡದೊಂದು ಅನಾಹುತಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಬೇಕಾಗಿತ್ತು.
ಇದನ್ನೂ ಓದಿ : ಮೈಸೂರಿಗರ ಹೋರಾಟಕ್ಕೆ ಮಣಿದ ಸರ್ಕಾರ : ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆ ರದ್ದು
ಇನ್ನು ಕಾರಿನಲ್ಲಿದ್ದವರನ್ನು ಮಾಜಿ ಸಚಿವೆ ಮೋಟಮ್ಮ ಸಹೋದರ ಎಂ.ಎಸ್ ಅನಂತು ಎಂದು ಗುರುತಿಸಲಾಗಿದೆ. ಅನಂತರು ಅವರು ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಇದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಸೇಫ್ ಆಗಿ ಹೊರ ಬಂದಿದ್ದಾರೆ.
ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಬೃಹತ್ ಕೊಂಬೆ; ಇಲ್ಲಿದೆ ಬೆಚ್ಚಿ ಬೀಳಿಸುವಂಥ ದೃಶ್ಯ..
— Vijayavani (@VVani4U) July 6, 2022
ವಿವರಗಳಿಗೆ https://t.co/YaFZZchf1J ನೋಡಿ pic.twitter.com/mYSbgkuaqV
ಚಾಮರಾಜಪೇಟೆ ಬಂದ್ ಮಾಡಿಸಿದ್ರೆ ಕಠಿಣ ಕ್ರಮ : ಪೊಲೀಸರ ವಾರ್ನಿಂಗ್
ಚಾಮರಾಜನಗರ ಆಟದ ಮೈದಾನ ವಿವಾದ ಇದೀಗ ರಾಜಕೀಯವಾಗಿದೆ. ಈ ನಡುವೆ ಕೆಲ ಸಂಘಟನೆಗಳು ಜುಲೈ 12 ರಂದು ಚಾಮರಾಜಪೇಟೆ ಬಂದ್ ( Chamarajpet bandh) ಮಾಡಲು ಕರೆ ಕೊಟ್ಟಿದೆ. ಇದೀಗ ಈ ಬಗ್ಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರು : ಚಾಮರಾಜಪೇಟೆಯ ಆಟದ ಮೈದಾನವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದರ ವಿರುದ್ಧ ಹೋರಾಟ ತೀವ್ರಗೊಂಡಿದೆ. ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಬಿಡಿ ಅನ್ನು ಒತ್ತಾಯ ತೀವ್ರವಾಗಿದೆ. ( Chamarajpet bandh) ಕೆಲ ದಿನಗಳ ಹಿಂದೆ ಹಲವು ಸಂಘಟನೆಗಳು ಸಭೆಯೊಂದನ್ನು ನಡೆಸಿದ್ದು, ಜಮೀರ್ ವಿರುದ್ಧ ಆಕ್ರೋಶವನ್ನು ಹೊರ ಹಾಕುವುದರ ಜೊತೆಗೆ ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಿ ಎಂದು ಆಗ್ರಹಿಸಿತ್ತು.
ಚಾಮರಾಜಪೇಟೆ ಆಟದ ಮೈದಾನವನ್ನು ವಕ್ಫ್ ಗೆ ಕೊಡುವ ಪ್ರಯತ್ನವನ್ನು ಖಂಡಿಸಿದ್ದ ಈ ಸಭೆ ಜುಲೈ 12 ರಂದು ಚಾಮರಾಜಪೇಟೆ ( Chamarajpet) ಬಂದ್ ನಡೆಸಲು ತೀರ್ಮಾನಿಸಿತ್ತು. ಅಂದು ದೊಡ್ಡ ಮಟ್ಟದಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು.
ಈಗ ಬಂದ್ ಕುರಿತಂತೆ ಪೊಲೀಸರು ಹೋರಾಟಗಾರರಿಗೆ ಎಚ್ಚರಿಕೆ ನೀಡಿದ್ದು, ಜುಲೈ 12 ರಂದು ಬಂದ್ ಮಾಡಲು ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ತಿಳುವಳಿಕೆ ಪತ್ರ ಹೊರಡಿಸಿದ್ದಾರೆ.
Discussion about this post