Chamundi ropeway project ಅನ್ನು ಕೈ ಬಿಡಬೇಕು ಅನ್ನುವ ಪರಿಸರ ಪ್ರಿಯರ ಹೋರಾಟಕ್ಕೆ ರಾಜಮಾತೆ ಪ್ರಮೋದಾ ದೇವಿ, ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ಜಿ.ಟಿ,ದೇವೇಗೌಡ ಸೇರಿದಂತೆ ಅನೇಕರು ದನಿ ಗೂಡಿಸಿದ್ದರು. ಮೊದಲು ಯೋಜನೆ ಸ್ವಾಗತಿಸಿದ ಪ್ರತಾಪ್ ಸಿಂಹ ಬಳಿಕ ಯೋಜನೆ ಬೇಡ ಅಂದಿದ್ದರು
ಮೈಸೂರು : ಸಾಂಸ್ಕೃತಿಕ ನಗರಿಯ ಜನರ ಹೋರಾಟಕ್ಕೆ ಮಣಿದಿರುವ ಸರ್ಕಾರ ಇದೀಗ Chamundi ropeway project ಅನ್ನು ಕೈ ಬಿಟ್ಟಿದೆ. ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಿಪಿ ಯೋಗೀಶ್ವರ್, ಯಾರೇ ವಿರೋಧಿಸಿದರೂ ಯೋಜನೆ ಜಾರಿಯಾಗಲಿದೆ ಅಂದಿದ್ದರು. 2021ರ ಜುಲೈ 21 ರಂದು ಮಾತನಾಡಿದ ಅವರು ಈ ಯೋಜನೆಗೆ ಡಿಪಿಆರ್ ಸಿದ್ದವಾಗಿದೆ ಅಂದಿದ್ದರು. ಚಾಮುಂಡಿ ಬೆಟ್ಟದ ರೋಪ್ ವೇ ಯೋಜನೆಗೆ ಸಚಿವರಾದ ಆನಂದ್ ಸಿಂಗ್, ವಿ.ಸೋಮಣ್ಣ ಕೂಡಾ ಬೆಂಬಲಿಸಿದ್ದರು.
ಆದರೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಸರ ಪ್ರಿಯರು, ಯೋಜನೆ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಿದರು. ಯೋಜನೆ ಬಂದರೆ ಆಗುವ ಅನಾಹುತಗಳನ್ನು ತಿಳಿಸಿದರು. ಈ ಕಾಮಗಾರಿಯಿಂದ ಮೈಸೂರಿನ ಜೀವ ವೈವಿಧ್ಯದ ಮೇಲೆ ಪರಿಣಾಮ ಬೀರಲಿದೆ. ಮುಂದಿನ ತಲೆಮಾರು ಸಂಕಷ್ಟಕ್ಕೆ ಸಿಲುಕಲಿದೆ ಅನ್ನುವುದನ್ನು ಸಾರಿದರು.
ಇದನ್ನೂ ಓದಿ : ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡಿತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ
ಇದರ ಫಲವಾಗಿ ಸಾಹಿತಿ ಎಸ್ ಎಲ್ ಭೈರಪ್ಪ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಪ್ರವಾಸೋದ್ಯಮ ಇಲಾಖೆ ವಿರುದ್ಧ ಕಿಡಿಕಾರಿದ್ದರು. ನೆಮ್ಮದಿ ಹಾಗೂ ಆಧ್ಯಾತ್ಮಿಕತೆ ಬಯಸಿ ಬರುವ ಭಕ್ತರಿಗೆ ಪೂರಕವಾದ ವಾತಾವರಣ ಬೆಟ್ಟದಲ್ಲಿ ನಿರ್ಮಾಣವಾಗಬೇಕು. ಅಲ್ಲಿ ಯಾವುದೇ ಆಧುನಿಕ ಶೈಲಿಯ ಕಟ್ಟಡ ಕಟ್ಟಬಾರದು. ಅಲ್ಲಿನ ನೈಸರ್ಗಿಕ ಸೌಂದರ್ಯ ಉಳಿಯಬೇಕು. ಹೀಗಾಗಿ ರೋಪ್ ವೇ ಯೋಜನೆ ಕೈ ಬಿಡಿ ಎಂದು ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ರೋಪ್ ವೇ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದ ರಾಜಮಾತೆ ಪ್ರಮೋದಾ ದೇವಿ, ಚಾಮುಂಡಿ ಬೆಟ್ಟದ 20 ನಿಮಿಷದ ಜರ್ನಿಗೆ ರೋಪ್ ವೇ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದರು. ಹೀಗೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ರೋಪ್ ವೇ ಯೋಜನೆಯನ್ನು ಕೈ ಬಿಡಲು ನಿರ್ಧರಿಸಿದೆ.
ಮೈಸೂರಿನಲ್ಲಿ ಈ ಸಂಬಂಧ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್,ಟಿ. ಸೋಮಶೇಖರ್, ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಅಳವಡಿಕೆ ಕೈ ಬಿಟ್ಟಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡಲಿದೆ ಅಂದರು. ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳವಾಗುವುದಕ್ಕಿಂತ, ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಬೆಟ್ಟಕ್ಕೆ ಧಾರ್ಮಿಕ ಭಾವನೆಗಳಿಂದ ಜನ ಬರುತ್ತಾರೆ. ಹೀಗಾಗಿ ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬೇಡಿ ಅನ್ನುವುದು ಜನರ ಅಭಿಪ್ರಾಯ ಇದಕ್ಕೆ ಗೌರವ ನೀಡಿ ಯೋಜನೆಯಿಂದ ಹಿಂದೆ ಸರಿದಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.
ಒಟ್ಟಿನಲ್ಲಿ ಪರಿಸರ ಪ್ರಿಯರ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಒಟ್ಟಾಗಿ ಹೋರಾಡಿದರೆ ಸರ್ಕಾರವನ್ನು ಮಣಿಸಬಹುದು ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ
ಕಾಲೇಜುಗಳಲ್ಲಿ ಅಗ್ನಿಪಥ್ ಬಗ್ಗೆ ಪ್ರಚಾರಕ್ಕೆ ಸರ್ಕಾರ ಸೂಚನೆ
ಬೆಂಗಳೂರು : ದೇಶದ ಸೈನ್ಯವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ( Agneepath) ಯೋಜನೆ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಅಗ್ನಿಪಥ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆ.
ಈ ಸಂಬಂಧ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಮಿತಿ ಸೂಚನೆಯೊಂದನ್ನು ರವಾನಿಸಿದ್ದು, ಎಲ್ಲಾ ಕಾಲೇಜುಗಳಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಅಂದಿದೆ. ಈ ಸಂಬಂಧ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು, ಹೆಚ್ಚೆಚ್ಚು ವಿದ್ಯಾರ್ಥಿಗಳಲ್ಲಿ ಸೇನೆಯ ಬಗ್ಗೆ ಅರಿವು ಮೂಡಲಿ ಅಂದಿದೆ.
ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ,ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಆಸಕ್ತ ವಿದ್ಯಾರ್ಥಿಗಳು ಭಾರತೀಯ ಭೂಸೇನೆ ಮತ್ತು ಭಾರತೀಯ ವಾಯುಸೇನಾ ನೇಮಕಾತಿಯ ಉಪಯೋಗ ಪಡೆಯಬೇಕು. ಈ ಸಂಬಂಧ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಇಲಾಖೆಯ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
Discussion about this post