ಮುಂಬೈ : ದೇಶದೆಲ್ಲೆಡೆ ಹರಡಿರುವ ಡ್ರಗ್ಸ್ ಜಾಲದಲ್ಲಿ ಸೆಲೆಬ್ರೆಟಿಗಳ ಸಂತತಿಗಳು ಪಾಲು ಪಡೆದಿವೆ ಅನ್ನುವುದು ಹಳೆಯ ಆರೋಪ. ಇದಕ್ಕೆ ಪುಷ್ಟಿ ನೀಡುವ ಅನೇಕರ ಘಟನೆಗಳು ಕೂಡಾ ನಡೆದಿದ್ದು, ದೇಶದ ವಿವಿಧ ತನಿಖಾ ಸಂಸ್ಥೆಗಳು ಸೆಲೆಬ್ರೆಟಿಗಳು ಹಾಗೂ ಅವರ ಸಂತತಿಯನ್ನು ವಿಚಾರಣೆ ಕೂಡಾ ನಡೆಸಿದೆ.
ಈ ನಡುವೆ ನಟ ಶಾರುಖ್ ಖಾನ್ ಪುತ್ರ ಡ್ರಗ್ಸ್ ದಂಧೆಯಲ್ಲಿದ್ದಾನೆ ಅನ್ನುವ ಆರೋಪಕ್ಕೆ ಪುಷ್ಟಿ ಸಿಕ್ಕಿದ್ದು, ಮುಂಬೈ ಡ್ರಗ್ ಬಸ್ಟ್ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಪ್ರಶ್ನಿಸಿತ್ತಿದ್ದಾರೆ.
ಖಚಿತ ಮಾಹಿತಿ ಹಿನ್ನಲೆಯಲ್ಲಿ ಮುಂಬೈನ ಕರಾವಳಿಯ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ರೇವ್ ಪಾರ್ಟಿಗೆ ನಡೆಸುತ್ತಿದ್ದ ಆರ್ಯನ್ ಖಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದುವರೆಗೂ ಖಾನ್ ಪುತ್ರನ ವಿರುದ್ಧ ದೂರು ದಾಖಲಾಗಿಲ್ಲ. ಕೇವಲ ವಿಚಾರಣೆ ನಡೆಯುತ್ತಿದ್ದು, ಸೂಕ್ತ ಸಾಕ್ಷಿಗಳು ಸಿಕ್ಕ ಬಳಿಕ ಮುಂದಿನ ಕ್ರಮ ಎಂದು ಎಂದು ಎನ್ ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಆರ್ಯನ್ ಖಾನ್ ಜೊತೆಗೆ ಅವನ ಸಂಗಾತಿಗಳಾದ ಅರ್ಬಾಜ್ , ಮುನ್ಮೂನ್, ನೂಪುರ್ ಸಾರಿಕಾ, ಇಸ್ಮೀತ್, ಜಸ್ವಾಲ್, ವಿಕ್ರಾಂತ್ ಚೋಕರ್ ಹಾಗೂ ಗೋಮಿತ್ ಚೋಪ್ರಾ ಎಂಬವರನ್ನು ಪ್ರಶ್ನಿಸಲಾಗುತ್ತಿದೆ. ಈ ಕ್ರೂಸ್ ನಲ್ಲಿ ರೇವ್ ಪಾರ್ಟಿಯನ್ನು FTV ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಾಶಿಫ್ ಖಾನ್ ಆಯೋಜಿಸಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿದೆ. ಈ ನಡುವೆ ಮಗನ ಬೆಳವಣಿಗೆ ಹಿನ್ನಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಿರುವ ಶಾರೂಖ್ ಖಾನ್ ಮನೆಗೆ ದೌಡಾಯಿಸಿದ್ದಾರೆ.
It was reported on October 2 that the NCB had conducted a surprise raid on a party being held on a cruise ship off the coast of Mumbai. It was also speculated that a big Bollywood actor’s son was detained in this matter.
Discussion about this post