ಪತ್ನಿಯ ಶೀಲದ ಬಗ್ಗೆ ಶಂಕೆ ಹೊಂದಿದ್ದ ಗಂಡ ಕೊನೆಗೆ ಕುತ್ತಿಗೆ ಕಡಿದು ರುಂಡ ಹಿಡಿದು ಪೊಲೀಸ್ ಸ್ಟೇಷನ್ ಬಂದಿದ್ದಾನೆ ಎಂಥಾ ಕ್ರೂರಿ ಇರಬೇಕು ಗಂಡ
ಒಡಿಶಾ : ಪತ್ನಿಯ ಶೀಲ ಶಂಕಿಸಿದ ಗಂಡನೊಬ್ಬ ಹೆಂಡತಿಯ ತಲೆ ಕಡಿದು ರುಂಡದೊಂದಿಗೆ ಪೊಲೀಸ್ ಸ್ಟೇಷನ್ ಗೆ ಬಂದ ಘಟನೆ ಒಡಿಶಾದ ಧೆಂಕನಲ್ ಎಂಬಲ್ಲಿ ನಡೆದಿದೆ. ಪತ್ನಿಯ ತಲೆ ಕಡಿದ ಗಂಡ ಪೊಲೀಸ್ ಠಾಣೆಗೆ ಶರಣಾಗುವ ಸಲುವಾಗಿ 12 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದ.
ಚಂದ್ರಸೇಕರಪುರ್ ಗ್ರಾಮದ ಆರೋಪಿ 55 ವರ್ಷದ ನಕಪೋದಿ ಮಾಜಿ 25 ವರ್ಷಗಳ ಹಿಂದೆ ಸಚಲ ಮಾಜಿ ( 45 ) ಅನ್ನುವವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬನಿಗೆ ಮದುವೆಯೂ ಆಗಿದೆ. ಇತ್ತೀಚಿನ ದಿನಗಳಲ್ಲಿ ನಕಪೋದಿಗೆ ಹೆಂಡತಿಯ ಶೀಲದ ಬಗ್ಗೆ ಶಂಕೆ ಬಂದಿದೆ. ಹೀಗಾಗಿ ಪತ್ನಿಯೊಂದಿಗೆ ನಿತ್ಯ ಜಗಳ ತೆಗೆಯುತ್ತಿದ್ದ. ಹೀಗಾಗಿ ಮನೆ ನಿತ್ಯ ರಣರಂಗವಾಗುತ್ತಿತ್ತು.
ಇದನ್ನೂ ಓದಿ : prathap pothen : ಬಹುಭಾಷಾ ನಟ ಪ್ರತಾಪ್ ಪೋತನ್ ಇನ್ನಿಲ್ಲ : ಬೆಡ್ ರೂಮ್ ನಲ್ಲಿ ಶವವಾಗಿ ಪತ್ತೆ
ಶುಕ್ರವಾರ ಮುಂಜಾನೆ 3.30 ರಿಂದ 4 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದ ನಕಪೋದಿ ಮಾಜಿ ಹರಿತವಾದ ಕತ್ತಿಯಿಂದ ಪತ್ನಿ ಶಿರಚ್ಛೇದನ ಮಾಡಿದ್ದಾನೆ. ಬಳಿಕ ತಲೆಯನ್ನು ಪೊಲೀಸರಿಗೆ ತಲುಪಿಸಲೆಂದು ವಾಕಿಂಗ್ ಪ್ರಾರಂಭಿಸಿದ್ದಾನೆ. ಈ ವೇಳೆ ರಕ್ತಸಿಕ್ತ ರಂಡುದೊಂದಿಗೆ ನಕಪೋದಿ ನಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಮಕ್ಕಳು 7 ಗಂಟೆಗೆ ಶಾಲೆಗೆ ಹೋಗುವುದಾದ್ರೆ ಕೋರ್ಟ್ 9ಗಂಟೆಗೆ ತೆರೆಯಬಾರದ್ಯಾಕೆ : ನ್ಯಾ.ಲಲಿತ್
ಸುಪ್ರೀಂಕೋರ್ಟ್ ನಡೆ ನಿಜಕ್ಕೂ ಶ್ಲಾಘನೀಯ. ಹೀಗೆ ಸರ್ಕಾರಿ ಅಧಿಕಾರಿಗಳು ಕರೆಕ್ಟ್ ಆಗಿ 10 ಗಂಟೆಗೆ ಕಚೇರಿಗೆ ಬಂದ್ರೆ ಚೆನ್ನಾಗಿತ್ತು
ನವದೆಹಲಿ : ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ, ಕೋರ್ಟ್ 9 ಗಂಟೆಗೆ ತನ್ನ ಕೆಲಸ ಪ್ರಾರಂಭಿಸಬಹುದಲ್ಲವೇ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು ಲಲಿತ್ ಹೇಳಿದ್ದಾರೆ. ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಅವರು ಮಕ್ಕಳು ಅಷ್ಟು ಬೇಗ ಶಾಲೆಗೆ ಹೋಗುವುದಾದ್ರೆ ನಾವು ಯಾಕೆ ಬೆಳಗ್ಗೆ 9 ಗಂಟೆಗೆ ಕೋರ್ಟ್ ಕಲಾಪ ಆರಂಭಿಸಬಾರದು ಅಂದರು.
ಶುಕ್ರವಾರವಾದ ಇಂದು ಕೋರ್ಟ್ ಕಲಾಪ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಅಂದ್ರೆ 9.30ಕ್ಕೆ ಪ್ರಾರಂಭವಾಗಿತ್ತು. ಈ ವೇಳೆ ಜಾಮೀನು ಅರ್ಜಿಯೊಂದರ ಕುರಿತಂತೆ ವಿಚಾರಣೆಗೆ ಹಾಜರಾದ ಅಟಾರ್ನಿ ಜನರ್ ಮುಕುಲ್ ರೋಸ್ಟಗಿ, ಬೇಗ ಕಲಾಪ ಪ್ರಾರಂಭಿಸಿರುವುದಕ್ಕೆ ನ್ಯಾಯಾಲಯವನ್ನು ಅಭಿನಂದಿಸಿದರು.
ಇದನ್ನೂ ಓದಿ : Roopa Hadagali : ಕಸದ ಲಾರಿಗೆ ದಂಪತಿ ಬಲಿ : ಹೆಣ್ಣು ಮಕ್ಕಳ ನೆರವಿಗೆ ಪಿಎಸ್ಐ ರೂಪಾ ಹಡಗಲಿ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತ್, ಕಲಾಪ ಬೇಗ ಪ್ರಾರಂಭವಾಗಬೇಕು ಅನ್ನುವುದು ನನ್ನ ನಿಲುವು. 9 ಗಂಟೆಗೆ ಕಲಾಪ ಪ್ರಾರಂಭಿಸಬೇಕು. ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ ನಾವು ಯಾಕೆ 9 ಗಂಟೆಗೆ ಕೋರ್ಟ್ ಕಲಾಪ ಪ್ರಾರಂಭಿಸಬಾರದು.
ಸುಪ್ರೀಂಕೋರ್ಟ್ ಕಲಾಪ 9 ಗಂಟೆಗೆ ಪ್ರಾರಂಭವಾಗಬೇಕು. ಮಧ್ಯಾಹ್ನ 11.30ಕ್ಕೆ ಅರ್ಧ ಗಂಟೆ ವಿರಾಮ. 12 ಗಂಟೆಗೆ ಮತ್ತೆ ಕಲಾಪ ಪ್ರಾರಂಭವಾಗಿ 2 ಗಂಟೆಗೆ ಮುಗಿಸಬೇಕು. ಇದರಿಂದ ನಮಗೆ ಹೆಚ್ಚು ಸಮಯ ಸಿಗುತ್ತದೆ. ಇದರಿಂದ ಹೊಸ ವಿಚಾರಣೆಗೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ ಅಂದಿದ್ದಾರೆ.
Discussion about this post