Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Roopa Hadagali : ಕಸದ ಲಾರಿಗೆ ದಂಪತಿ ಬಲಿ : ಹೆಣ್ಣು ಮಕ್ಕಳ ನೆರವಿಗೆ ಪಿಎಸ್ಐ ರೂಪಾ ಹಡಗಲಿ

ಪವರ್ ಟಿವಿ ಮಾಡಿದ ಸ್ಟಿಂಗ್ ಆಪರೇಷನ್ ನಲ್ಲಿ ಇದೇ ರೂಪಾ ಹಡಗಲಿಯವರು ಲಂಚ ಕೇಳಿರುವ ಆರೋಪ ಕೇಳಿ ಬಂದಿತ್ತು

Radhakrishna Anegundi by Radhakrishna Anegundi
July 15, 2022
in ಟಾಪ್ ನ್ಯೂಸ್
Roopa Hadagali bbmp-lorry-accident-couple-death-byatarayanapura traffic police station psi help
Share on FacebookShare on TwitterWhatsAppTelegram

ಪೊಲೀಸ್ ಇಲಾಖೆ ಸರಿ ಇಲ್ಲ ಕೆಟ್ಟು ಹೋಗಿದೆ ಅನ್ನುವ ಆರೋಪದ ನಡುವೆ ಅಪರೂಪಕ್ಕೆ ಒಳ್ಳೆಯ ಅಧಿಕಾರಿಗಳು ( Roopa Hadagali ) ಯಂತವರು ಸಿಗ್ತಾರೆ

ಬೆಂಗಳೂರು : ಬಿಬಿಎಂಪಿ ಕಸದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಜುಲೈ 9 ರಂದು ಬೆಂಗಳೂರಿನಲ್ಲಿ ನಡೆದಿತ್ತು. ಯಮಸ್ವರೂಪಿ ಲಾರಿಯ ರಕ್ಕಸ ಕೃತ್ಯದಿಂದ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದರು. ಇದೀಗ ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ರೂಪಾ ಹಡಗಲಿ ( Roopa Hadagali ) ಮಾನವೀಯತೆ ಮೆರೆದಿದ್ದಾರೆ.

ಜುಲೈ 9 ರಂದು ನಾಗರಬಾವಿ ರಿಂಗ್ ರೋಡ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ನಿಲ್ದಾಣ ಕಡೆಯಿಂದ ಚಂದ್ರ ಲೇಜೌಟ್ ಕಡೆಗೆ ತೆರಳುತ್ತಿದ್ದ ಕಸದ ಲಾರಿ, ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಇಬ್ಬರ ಬಲಿ ಪಡೆದಿತ್ತು. ಘಟನೆಯಲ್ಲಿ ಮರಿಯಪ್ಪನಪಾಳ್ಯದ ವಿಜಯಕಲಾ (37) ಚಿಕಿತ್ಸೆ ಫಲಕಾರಿಯಾದೇ ಅಂದೇ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಅವರ ಪತಿ ಯೋಗೇಂದ್ರ ( 41 ) ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

bbmp lorry accident death

ಈ ದಂಪತಿಗೆ 2 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಪ್ಪ ಅಮ್ಮನ ಚಿಕಿತ್ಸೆಗೆ ವೆಚ್ಚವಾಗಿದ್ದ 5.72 ಲಕ್ಷ ಬಿಲ್ ಪಾವತಿ ಮಾಡಲಾಗದೇ ಮಕ್ಕಳು ಕಂಗಾಲಾಗಿದ್ದರು. ಅಪಘಾತ ನಡೆದ ದಿನವೇ ಆಸ್ಪತ್ರೆಯ ವೆಚ್ಚವಾಗಿ 40 ಸಾವಿರ ಕಟ್ಟಿದ್ದ ಇನ್ಸ್ ಪೆಕ್ಟರ್ ರೂಪಾ ಹಡಗಲಿ, ಯೋಗೇಂದ್ರ ಮೃತಪಟ್ಟ ವಿಷಯವನ್ನು ಡಿಸಿಪಿ ಕುಲದೀಪ್ ಜೈನ್ ಗಮನಕ್ಕೆ ತಂದಿದ್ದಾರೆ. ಜೊತೆಗೆ ಮಕ್ಕಳ ಸಂಕಷ್ಟವನ್ನೂ ವಿವರಿಸಿದ್ದಾರೆ. ತಕ್ಷಣ ರೂಪಾ ಹಡಗಲಿ ಜೊತೆಗೆ ಆಸ್ಪತ್ರೆಗೆ ಭೇಟಿ ಕೊಟ್ಟ ಕುಲದೀಪ್ ಜೈನ್ ಆಸ್ಪತ್ರೆ ಆಡಳಿತ ಮಂಡಳಿಯ ಮನವೊಲಿಸಿ ಅಷ್ಟೂ ಹಣವನ್ನು ಮನ್ನಾ ಮಾಡಿದ್ದಾರೆ. ಪೊಲೀಸರ ಪುಣ್ಯ ಕಾರ್ಯದಲ್ಲಿ ನಾಗರಬಾವಿ ಜಿಎಂ ಆಸ್ಪತ್ರೆ ಕೂಡಾ ಪಾಲು ಪಡೆಯುವ ಮೂಲಕ ಮಾನವೀಯತೆ ಮರೆದಿದೆ.

ಇದನ್ನೂ ಓದಿ : parappana agrahara jail : ಮಹಿಳೆಯರ ಗುಪ್ತಾಂಗದ ಮೂಲಕ ಜೈಲಿಗೆ ಡ್ರಗ್ಸ್ :  ಗುಪ್ತಾಂಗಕ್ಕೆ 50 ML ಕೊಬ್ಬರಿ ಎಣ್ಣೆ ಬಾಟಲಿ ತುರುಕಿದ್ದ ಕಿಲಾಡಿ

ದಕ್ಷಿಣ ಕನ್ನಡ ಕುಡುಕರ ಜಿಲ್ಲೆಯಾಗುತ್ತಿದೆಯೇ…. ಮದ್ಯ ಮಾರಾಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನ

ಇದೊಂದು ಆತಂಕಕಾರಿ ಮತ್ತು ಕಳವಳಕಾರಿ ವಿಚಾರ. ಮದ್ಯಪಾನದಿಂದ ಅನೇಕ ಆಪತ್ತುಗಳಿದೆ. ಹಾಗಿದ್ದರೂ ಬುದ್ದಿವಂತರ ಜಿಲ್ಲೆಯಲ್ಲಿ ಮದ್ಯಪಾನಿಗಳ ಸಂಖ್ಯೆ ಏರುತ್ತಿರುವುದು ಅಪಾಯಕಾರಿ ಬೆಳವಣಿಗೆ

ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದೇ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಮದ್ಯ ಮಾರಾಟದಲ್ಲಿ ನಂಬರ್ 1 ಪಟ್ಟಕ್ಕೆ ಏರುವ ಮೂಲಕ ದೇಶದ ಮುಂದೆ ತಲೆ ತಗ್ಗಿಸಿ ನಿಂತಿದೆ. ಹಿಂದೆಲ್ಲಾ SSLCಯಲ್ಲಿ ಟಾಪ್, PUCಯಲ್ಲಿ ಟಾಪ್ ಅನ್ನಿಸಿಕೊಂಡಿದ್ದ ಜಿಲ್ಲೆ ಮದ್ಯ ಮಾರಾಟದಲ್ಲಿ ಟಾಪ್ ಅನ್ನಿಸಿಕೊಂಡಿದೆ.

ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯ ಕುಡುಕರ ಸಂಖ್ಯೆ ಹೆಚ್ಚಾಗಿದೆ. ವರ್ಷದಲ್ಲಿ 2.2 ಕೋಟಿ ಲೀಟರ್ ಹಾರ್ಡ್ ಲಿಕ್ಕರ್ ಹಾಗೂ 1.4 ಕೋಟಿ ಲೀಟರ್ ಬಿಯರ್ ಅನ್ನು ಜಿಲ್ಲೆ ತನ್ನ ಹೊಟ್ಟೆಗಿಳಿಸಿಕೊಂಡಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಲಕ್ಷ ಹಾರ್ಡ್ ಡ್ರಿಂಕ್ಸ್ ಮದ್ಯವನ್ನು ಸೇವಿಸಲಾಗಿದ್ದು. ಸರಾಸರಿ 18 ಲಕ್ಷ ಬಾಕ್ಯ್ ಬಿಯರ್ ಅನ್ನು ಕರಾವಳಿ ಮಂದಿ ಹೊಟ್ಟೆಗಿಳಿಸಿದ್ದಾರೆ. ಹೀಗಾಗಿಯೇ ಈ ಆರ್ಥಿಕ ವರ್ಷದಲ್ಲಿ 370 ಕೋಟಿ ಆದಾಯವನ್ನು ಕರಾವಳಿಯವರೇ ಕೊಟ್ಟಿದ್ದಾರೆ.

ಇದನ್ನೂ ಓದಿ : LuLu mall namaz : ಲುಲು ಮಾಲ್ ನಲ್ಲಿ ನಮಾಜ್ : ಚಾಲೀಸಾ ಪಠಿಸಲು ಕೋರಿಕೆ

ಇನ್ನು ಟೈಮ್ಸ್ ಇಂಡಿಯಾ ವರದಿಯ ಪ್ರಕಾರ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 463 ಮದ್ಯದಂಗಡಿಗಳಿತ್ತು, ಆ ಸಂಖ್ಯೆ ಈಗ 520ಕ್ಕೆ ಏರಿದೆ. ಹಾಗಾದ್ರೆ ಬುದ್ದಿವಂತರ ಜಿಲ್ಲೆಯ ಜನ ದಡ್ಡರಾದ್ರ, ಮದ್ಯದಂಗಡಿ ಸಂಖ್ಯೆ ಏರುತ್ತಿರುವುದನ್ನು ನೋಡಿದ್ರೆ ಹೌದು ಅನ್ನಿಸುತ್ತದೆ. ಹೀಗೆ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಾ ಹೋದ್ರೆ ನಾಳೆ ಜಿಲ್ಲೆಯ ಕಥೆ ಏನಾಗಬೇಡ, ಯೋಚಿಸಬೇಕಾದ ವಿಚಾರ.

ಹಾಗಾದ್ರೆ ಇಷ್ಟೆಲ್ಲಾ ಎಣ್ಣೆ ಮಾರಾಟವಾದ ಕಾರಣಕ್ಕೆ ಕರಾವಳಿಯನ್ನು ಕುಡುಕರ ಜಿಲ್ಲೆ ಅನ್ನುವುದು ಸರಿಯೇ ಖಂಡಿತಾ ತಪ್ಪಾಗುತ್ತದೆ. ದಕ್ಷಿಣ ಕನ್ನಡದ ಮದ್ಯದಂಗಡಿಯಲ್ಲಿ ಎಣ್ಣೆ ಖರೀದಿಸಿದವರೆಲ್ಲಾ ಕರಾವಳಿಯವರಲ್ಲ. ಹೇಳಿ ಕೇಳಿ ದಕ್ಷಿಣ ಕನ್ನಡ ಪ್ರವಾಸೋದ್ಯಮ ತಾಣ. ಇಲ್ಲಿಗೆ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಬರುತ್ತಾರೆ. ಬರುವವರೆಲ್ಲಾ ಮದ್ಯವನ್ನು ಜಿಲ್ಲೆಯಲ್ಲೇ ಖರೀದಿಸುತ್ತಾರೆ. ಪ್ರವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮದ್ಯ ಮಾರಾಟ ಕೂಡಾ ಹೆಚ್ಚಾಗುತ್ತದೆ. ಇನ್ನು ದಕ್ಷಿಣ ಕನ್ನಡ ಪಕ್ಕದ ಕೇರಳಕ್ಕೆ ಹೆಗಲು ಕೊಟ್ಟು ನಿಂತಿರುವ ಜಿಲ್ಲೆ. ಕೇರಳದ ಗಡಿ ಭಾಗದ ಮಂದಿ ಮದ್ಯ ಸೇವನೆಗೆ ಕರ್ನಾಟಕವನ್ನೇ ಅವಲಂಭಿಸಿದ್ದಾರೆ. ಇದು ಕೂಡಾ ಮದ್ಯ ಮಾರಾಟ ಹೆಚ್ಚಾಗಲು ಕಾರಣ.

ಅಷ್ಟು ಮಾತ್ರವಲ್ಲದ ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ ಮಾರಾಟವಾದ ಮದ್ಯದ ಪೈಕಿ ಅಗ್ಗದ ಮದ್ಯವೇ ಹೆಚ್ಚು. ಶೇ 85ರಷ್ಟು ಅಗ್ಗದ ಮದ್ಯ ಮಾರಾಟವಾಗಿದೆ. ಶೇ3ರಷ್ಟು ಮಂದಿ ಮಾತ್ರ ಡಿಲಕ್ಸ್, ಸ್ಕಾಚ್, ಸಿಂಗಲ್ ಮಾಲ್ಟ್ , ಪ್ರೀಮಿಯಂ ಖರೀದಿಸಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಕಂಪನಿಗಳಿದೆ, ಅನೇಕ ಕಾಮಗಾರಿ ನಡೆಯುತ್ತಿದೆ. ಈ ಎಲ್ಲಾ ಸ್ಥಳಗಳಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕಾರ್ಮಿಕರು ಬಂದಿದ್ದಾರೆ. ಬಂದ ಕಾರ್ಮಿಕರ ಪೈಕಿ ಅನೇಕರು ಅಗ್ಗದ ಮದ್ಯದ ಮೊರೆ ಹೋಗುತ್ತಾರೆ. ಇದು ಮದ್ಯ ಮಾರಾಟ ಹೆಚ್ಚಾಗಲು ಕಾರಣ ಅನ್ನುವುದನ್ನು ಮರೆಯುವಂತಿಲ್ಲ.

Tags: MAIN
ShareTweetSendShare

Discussion about this post

Related News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್