ಮಧ್ಯಪ್ರದೇಶ : ತಂದೆಯೇ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ನ ರಾತಿಬಾದ್ನಲ್ಲಿ ನಡೆದಿದೆ.
ಕೆಲ ವಾರಗಳ ಹಿಂದೆ ಯುವತಿ ತನ್ನ ತವರು ಮನೆಗೆ ಬಂದಿದ್ದಳು ಈ ವೇಳೆ ಆಕೆಯ 8 ತಿಂಗಳ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ವೇಳೆ ಮೊಮ್ಮಗನ ಅಂತ್ಯಕ್ರಿಯೆಗೆ ಮಗಳನ್ನು ಮನೆ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿದ್ದ ತಂದೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದ. ಅಂತ್ಯಸಂಸ್ಕಾರದ ಬಳಿಕ 55 ವರ್ಷದ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಅನ್ಯ ಜಾತಿ ಯುವಕನ ಪ್ರೀತಿ ಮಾಡಿದ ಪ್ರತೀಕಾರ ತೀರಿಸಲು ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಹೇಳಲಾಗಿದೆ. ಆದರೆ ಕೊಲೆಯ ನಿಜವಾದ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.
ಕಳೆದ ಎರಡು ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ಮಗುವಿನ ಮತ್ತು ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಈ ವೇಳೆ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಈ ಪ್ರಕರಣದಲ್ಲಿ ಮೃತ ಮಹಿಳೆಯ ಸಹೋದರ ಪಾತ್ರವೂ ಇದೆ ಎಂದು ಗೊತ್ತಾಗಿದೆ. ಮಗುವಿನ ಅಂತ್ಯ ಸಂಸ್ಕಾರಕ್ಕೆ ಹೋದ ವೇಳೆ ತಂದೆ ಮತ್ತು ಮಗಳು ಕಾಡಿನೊಳಗೆ ಹೋದರೆ ಸಹೋದರ ರಸ್ತೆಯಲ್ಲಿ ನಿಂತಿದ್ದ. ಬಳಿಕ ತಂದೆ ತಾನು ಕೊಲೆ ಮಾಡಿದ ವಿಚಾರವನ್ನು ಮಗನಿಗೆ ತಿಳಿಸಿದ್ದ ಎನ್ನಲಾಗಿದೆ.ಆದರೆ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಂದೆ ಮತ್ತು ಮಗ ಪೊಲೀಸರನ್ನೇ ದಿಕ್ಕು ತಪ್ಪಿಸಿದ್ದರು.
Discussion about this post