ಬೆಂಗಳೂರು : ಪ್ರಿಯತಮನ ಮಾತು ನಂಬಿ ತನ್ನದೇ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ ಎಂದು ಆರೋಪಿಸಿ ಮಗಳ ವಿರುದ್ಧವೇ ತಾಯಿಯೊಬ್ಬರು ಭಾರತೀನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಂತೆ ವಿಚಾರಣೆ ನಡೆಸಿರುವ ಪೊಲೀಸರು ಆರೋಪಿ ಅಯೇಷಾ ಹಾಗೂ ಆಕೆಯ ಪ್ರಿಯತಮೆ ಅಮೀನುಲ್ ಇಸ್ಲಾಂ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಕೆಲ ವಾರಗಳ ಹಿಂದೆ ಆಯೇಷಾ ತಂದೆ ಆರೋಗ್ಯ ಸರಿ ಇಲ್ಲದ ಕಾರಣ ಚಿಕಿತ್ಸೆ ಸಲುವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತಂದೆ ನೋಡಿಕೊಳ್ಳಲು ಆಸ್ಪತ್ರೆಗೆ ಹೋದ ಆಯೇಷಾಗೆ ಅದೇ ಆಸ್ಪತ್ರೆಯ ಸೆಕ್ಯೂರಿಟಿ ಅಮೀನುಲ್ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿದೆ.
ಈ ನಡುವೆ ನನಗೊಂದು ಒಳ್ಳೆಯ ಕೆಲಸ ರೆಡಿ ಇದೆ. ಆದರೆ ಅದನ್ನು ಪಡೆಯಲು ಸ್ವಲ್ಪ ಹಣದ ಅವಶ್ಯಕತೆ ಇದೆ. ಹೀಗಾಗಿ ನಿನ್ನ ಮನೆಯಿಂದ ಒಡವೆ ತಂದುಕೊಟ್ಟರೆ ಅದನ್ನು ಅಡವಿಡುತ್ತೇನೆ. ಸಂಬಳ ಬಂದ ಬಳಿಕ ಅದನ್ನು ಬಿಡಿಸಿ ಮರಳಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ.
ಅಮೀನುಲ್ ಮಾತು ನಂಬಿದ ಆಯೇಷಾ ಪೋಷಕರ ಕಣ್ಣು ತಪ್ಪಿಸಿ ಮನೆಯಲ್ಲಿದ್ದ ಒಡವೆ ಕದ್ದು ಇನಿಯನಿಗೆ ಕೊಟ್ಟಿದ್ದಾಳೆ. ಈ ನಡುವೆ ಬೀರುವಿನಲ್ಲಿಟ್ಟ ಆಭರಣದ ಬಾಕ್ಸ್ ಅನ್ನು ಆಯೇಷಾ ತಾಯಿ ಭಾನು ಅವರಿಗೆ ಆಭರಣ ಕಳ್ಳತನವಾಗಿರುವ ವಿಷಯ ಗೊತ್ತಾಗಿದೆ. 430 ಗ್ರಾಂ ಬಂಗಾರದ ನಾಪತ್ತೆಯ ಬಗ್ಗೆ ಪರಿಶೀಲನೆ ನಡೆಸಿದಾಗ ಮಗಳ ಕೈವಾಡದ ಅನುಮಾನ ಬಂದಿದೆ. ಆದರೆ ಆಭರಣ ಸಿಗುವ ಲಕ್ಷಣ ಕಾಣಿಸಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದೀಗ ಅಮೀನುಲ್ ಆಭರಣಗಳನ್ನು ಅಡವಿಟ್ಟು ಕಾಸು ಪಡೆದಿರುವುದು ಗೊತ್ತಾಗಿದೆ.
Discussion about this post