ಕಾಸಿನಾಸೆಗೆ ಬಿದ್ದು ಕೆಲಸಕ್ಕಿದ್ದ ಮನೆಯ ಮಾಲೀಕನ ಪುತ್ರನನ್ನು ಅಪಹರಿಸಿದ ( Bengaluru kidnap) ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಏಕಾಏಕಿ ಶ್ರೀಮಂತರಾಗುವ ಆಸೆಗೆ ಬಿದ್ದ ದಂಪತಿ ಮನೆ ಮಾಲೀಕನ ಮಗನನ್ನೇ ಅಪಹರಿಸಿ ( Bengaluru kidnap ) ಕಾಸಿಗೆ ಬೇಡಿಕೆ ಇಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರನ್ನು ಶಕ್ತಿವೇಲು ಮತ್ತು ಸುನೀತಾ ಎಂದು ಗುರುತಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಿತ್ತಗನೂರಿನ ಹ್ಯಾಪಿ ಲೇ ಜೌಟ್ ( Happy Lay out ) ನಲ್ಲಿ ಈ ಘಟನೆ ನಡೆದಿದ್ದು, ಕೆ ಆರ್ ಪುರಂ ( KR Puram ) ನಿವಾಸಿಗಳಾದ ಶಕ್ತಿವೇಲು ಮತ್ತು ಸುನೀತಾ ಮನೋಜ್ ಕುಮಾರ್ ( Manoj Kumar ) ಅನ್ನುವವರ ಮನೆಯಲ್ಲಿ ಕೆಲಸಕ್ಕಿದ್ದರು. ಈ ವೇಳೆ ದಿಢೀರ್ ಶ್ರೀಮಂತರಾಗುವ ಆಸೆಗೆ ಬಿದ್ದ ದಂಪತಿ, ಮನೆ ಮಾಲೀಕನ ಬಳಿಯೇ ಕಾಸು ವಸೂಲಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಸೋಮವಾರ ಮತ್ತೆ ಮಂಗಳೂರು ಮುಳುಗಲಿದೆಯೇ…. ಅಲರ್ಟ್ ಕೊಟ್ಟ ಹವಮಾನ ಇಲಾಖೆ
ಮನೋಜ್ ಅವರ 6 ವರ್ಷದ ಮಗ ಶಾಲೆಯಿಂದ ಬರುವ ವ್ಯಾನ್ ಅಡ್ಡ ಹಾಕಿ Kidnap ಮಾಜಲು ಮುಂದಾಗಿದ್ದಾರೆ. ಈ ವೇಳೆ ವ್ಯಾನ್ ಚಾಲಕ ಬಾಲಕನನ್ನು ಕಳುಹಿಸಿಕೊಡಲು ನಿರಾಕರಿಸಿದ್ದಾನೆ. ಪೋಷಕರನ್ನು ತೋರಿಸಿದ್ರೆ ಮಾತ್ರ ಬಾಲಕನನ್ನು ಕಳುಹಿಸಿಕೊಡುವುದಾಗಿ ಹೇಳಿದ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಆದರೆ ಚಾಲಕ ಅದಕ್ಕೆ ಬಗ್ಗಲಿಲ್ಲ. ಹೀಗಾಗಿ ಕೆಲಸ ಕೆಟ್ಟಿತ್ತು ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆ ಮೇಲಾದ್ರು ಸುಮ್ಮನಾದ್ರ, ಇಲ್ಲ ಬದಲಿಗೆ ಮನೆ ಮಾಲೀಕನಿಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದೇವೆ 5 ಲಕ್ಷ ಕೊಡಿ, ತಪ್ಪಿದ್ರೆ ಮಗನನ್ನು ಕೊಲೆ ಮಾಡುತ್ತೇವೆ ಅಂದಿದ್ದಾರೆ.
ಇದನ್ನೂ ಓದಿ : ಬಕ್ರೀದ್ ಹಬ್ಬಕ್ಕೆ ರಾಜಸ್ಥಾನದಿಂದ ಬೆಂಗಳೂರಿಗೆ ತಂದಿದ್ದ 18 ಒಂಟೆಗಳ ರಕ್ಷಣೆ
ಇದರ ಬೆನ್ನಲ್ಲೇ ಮನೋಜ್ ಕುಮಾರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ನರೇಶನ ಜಾತಕ ಬಿಚ್ಚಿಡ್ತೀವಿ : ಪವರ್ ಟಿವಿಯಲ್ಲಿ ರಮ್ಯ ರಘುಪತಿ ಘೋಷಣೆ
ಬೆಂಗಳೂರು : ಮೈಸೂರಿನ ಹೋಟೆಲ್ ಒಂದರ ಒಂದೇ ಕೊಠಡಿಯಲ್ಲಿ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ( Pavithra lokesh ) ನರೇಶ್ ಪತ್ನಿ ರಮ್ಯಾ ರಘುಪತಿ ಕೈಗೆ ರೆಡ್ ಹ್ಯಾಂಡ್ ಹಾಕಿ ಸಿಕ್ಕಿ ಬಿದ್ದಿದ್ದಾರೆ. ಈಗಾಗಲೇ ನರೇಶ್ ಮತ್ತು ಪವಿತ್ರಾ ಸಂಬಂಧ ಏನು ಅನ್ನುವುದನ್ನು ಅವರಿಬ್ಬರು ಬೇರೆ ಬೇರೆ ಟಿವಿ ಚಾನೆಲ್ ಗಳಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ ಹೋಟೇಲ್ ನಿಂದ ಪವಿತ್ರಾ ಲೋಕೇಶ್ ಜೊತೆ ಪರಾರಿಯಾಗುವ ಸಂದರ್ಭದಲ್ಲಿ ನರೇಶ್ ಆಡಿದ ಮಾತುಗಳು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು ಮೂಲಕ, ಕುಟುಂಬ ವ್ಯವಸ್ಥೆಯ ಮೂಲಕ ಪರಿಹರಿಸಬಹುದಿತ್ತು. ಆದರೆ ನರೇಶ್ ಅವರ ಇತ್ತೀಚಿನ ವರ್ತನೆ ಗಮನಿಸಿದರೆ ಕಾಸಿನ ಮೂಲಕ ಎಲ್ಲವನ್ನೂ ನಿಭಾಯಿಸಬಲ್ಲೆ ಅನ್ನುವಂತಿತ್ತು. ಕರ್ನಾಟಕ ವಿವಿಧ ಸುದ್ದಿ ವಾಹಿನಿಗಳಲ್ಲಿ ನರೇಶ್ ಕೊಟ್ಟ ಸಂದರ್ಶನಗಳೇ ಈ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಪೂರ್ತಿ ಘಟನೆ ಬಗ್ಗೆ ಪವರ್ ಟಿವಿಯಲ್ಲಿ ಸುದೀರ್ಘ ಚರ್ಚೆ ಪ್ರಸಾರವಾಗಿದ್ದು, ಇದೇ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ, ತಾವು ಒಬ್ಬ ಅಣ್ಣನಾಗಿ ರಮ್ಯ ರಘುಪತಿ ಜೊತೆಗೆ ನಿಂತಿದ್ದೇನೆ. ಆದರೆ ನರೇಶ್ ಕೆಲವು ಕೆಟ್ಟ ಮಾತುಗಳನ್ನು ಆಡಿದ್ದಾರೆ. ಸಂಬಂಧ ಕಲ್ಪಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ರಮ್ಯ ಅವರ ಶೀಲದ ಬಗ್ಗೆ ಮಾತನಾಡಿದ ನೀಚನ ಬಗ್ಗೆ ಹೈದರಬಾದ್ ನಲ್ಲಿ ಜಾತಕ ಬಿಚ್ಚಿಡುವುದಾಗಿ ಘೋಷಿಸಿದ್ದಾರೆ. ತೆಲುಗಿನ ಜನ ಈ ನಟನ ಅಸಲಿ ಮುಖವನ್ನು ನೋಡಲಿ. ಮಾಡಿದ ಅನ್ಯಾಯ ಅವರಿಗೆ ಅರ್ಥವಾಗಲಿ ಅಂದಿದ್ದಾರೆ.
Discussion about this post