ಬೆಂಗಳೂರು : ನಾಟಿ ಮದ್ದು ಪಡೆಯಲು ಬಂದ ಮಹಿಳೆಯನ್ನೇ ನಾಟಿ ವೈದ್ಯನೊಬ್ಬ ಹತ್ಯೆ ಮಾಡಿದ ಘಟನೆ ಬೆಂಗಳೂರು ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಿದ್ದಮ್ಮ ( 50) ಎಂದು ಗುರುತಿಸಲಾಗಿದೆ. ಕೊಲೆಗಾರ ಆರೋಪಿ ಸಲೀಂ ( 50) ಸರದೊಂದಿಗೆ ಪರಾರಿಯಾಗಿದ್ದಾನೆ.
ಬಿಹಾರ ಮೂಲದ ಸಲೀಂ ಕಳೆದ ಹಲವು ವರ್ಷಗಳಿಂದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ಗಾರೆ ಕೆಲಸ ಮಾಡುತ್ತಿದ್ದ ಈತ ಕಳೆದ 5 ವರ್ಷದಿಂದ ಮಧುಮೇಹ ರೋಗಕ್ಕೆ ಮದ್ದು ನೀಡಲು ಪ್ರಾರಂಭಿಸಿದ್ದ. ಈ ನಡುವೆ ಮಧುಮೇಹದಿಂದ ಬಳಲುತ್ತಿದ್ದ ಸಿದ್ದಮ್ಮ ಸಲೀಂ ಬಳಿ ನಾಟಿ ಮದ್ದು ಪಡೆಯಲು ಹೋಗಿದ್ದರು.
ಸಿದ್ದಮ್ಮ ಬಳಿಯ ಚಿನ್ನಾಭರಣ ಕಂಡ ಸಲೀಂ, ಆಕೆಯನ್ನು ಕೊಲೆ ಮಾಡಿ ಚಿನ್ನದ ಸರ, ಓಲೆ ಸೇರಿ ವಿವಿಧ ಆಭರಣಗಳೊಂದಿಗೆ ಪರಾರಿಯಾದ್ದಾನೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post