ರಾಜ್ಯ ಗೃಹ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 55 ಉದ್ಯೋಗಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬರು 1.62 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ರಾಧಾ ಉಮೇಶ್, ಗ್ರಾಮಾಂತರ ಎಸ್ಪಿ ಕಚೇರಿಯ ದ್ವೀತಿಯ ದರ್ಜೆ ಸಹಾಯಕಿ ಶ್ರೀಲೇಖಾ ಹಾಗೂ ಸಂಪತ್ ಕುಮಾರ್ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಕುಮಾರಸ್ವಾಮಿ ಬಡಾವಣೆ ನಿವಾಸಿ ಕೆಜಿ ಮಂಜುನಾಥ್ ಅನ್ನುವವರು ಈ ಸಂಬಂಧ ದೂರು ಸಲ್ಲಿಸಿದ್ದು, ವಂಚನೆ ಪ್ರಕರಣದಡಿ ಪೊಲೀಸರು FIR ದಾಖಲಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮಂಜುನಾಥ್ ಗೆ, ರಾಧಾ ಉಮೇಶ್ ನಾನು ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದಳು. ವಿಧಾನಸೌಧದರಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ, ಹೀಗಾಗಿ ದಿನಗೂಲಿ ನೌಕರರ ಏಜೆನ್ಸಿ ಕೊಡಿಸುತ್ತೇನೆ ಎಂದು ನಂಬಿಸಿದ್ದಳು.
ಅದೇ ರೀತಿ 4 ಕಂತುಗಳಲ್ಲಿ 15 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದಳು. ಇದಾದ ಬಳಿಕ ಗೃಹ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದಳು. ಆದರೆ ಅದ್ಯಾಕೋ ರಾಧಾ ನಡವಳಿಕೆ ನೋಡಿದ ಮಂಜುನಾಥ್, ವಿಧಾನಸೌಧದ ಆರ್ಥಿಕ ಇಲಾಖೆಗೆ ಹೋದರೆ ನಿಜ ಬಣ್ಣ ಬಯಲಾಗಿದೆ. ಈಗ ನೋಡಿದರೆ ಈ ಮೂವರು ಸೇರಿಕೊಂಡು 55ಕ್ಕೂ ಅಧಿಕ ಮಂದಿಗೆ 1.61 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
Discussion about this post