ಹನಿಟ್ರ್ಯಾಪ್ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕಿ ನವ್ಯಾಶ್ರೀ ಮಾಧ್ಯಮಗಳ ಮುಂದೆ ಬಂದಿರುವುದನ್ನು ನೋಡಿದ್ರೆ ಅಧಿಕಾರಿ ಮೇಲೆ ಅನುಮಾನ ದಟ್ಟವಾಗುತ್ತಿದೆ (belgaum honey trap).
ಬೆಳಗಾವಿ : ತೋಟಗಾರಿಕಾ ಇಲಾಖೆ ಅಧಿಕಾರಿ ಹಾದಿ ತಪ್ಪಿದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.(belgaum honey trap) ಸರ್ಕಾರಿ ಅಧಿಕಾರಿಯಿಂದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ನಾಯಕಿ ನವ್ಯಾ ರಾಮಚಂದ್ರನ್ ಮಾಧ್ಯಮಗಳ ಮುಂದೆ ಬಂದಿದ್ದು, ರಾಮಚಂದ್ರ ಟಾಕಳೆ ನನ್ನ ಗಂಡ, ಹೇಗೆ ಮದುವೆಯಾದೆವು ಅನ್ನುವುದನ್ನು ನಾಳೆ ಹೇಳ್ತಿನಿ ಅಂದಿದ್ದಾರೆ.
ನಾನು 15 ದಿನಗಳಿಂದ ದೇಶದಲ್ಲಿ ಇರಲಿಲ್ಲ. ಇಂಟರ್ ನ್ಯಾಷನಲ್ ಪೀಸ್ ಆವಾರ್ಡ್ ಸ್ವೀಕರಿಸಲು ದುಬೈಗೆ ತೆರಳಿದ್ದೆ. ಅಷ್ಟರಲ್ಲಿ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ನನ್ನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪೊಲೀಸರು ಕೂಡಾ ನನ್ನ ಸಂಪರ್ಕಿಸಿಲ್ಲ. ಒಂದು ವೇಳೆ FIR ಪ್ರತಿ ಸಿಕ್ರೆ ಕಾನೂನು ಪ್ರಕಾರ ನಾನು ಅದನ್ನು ಎದುರಿಸುತ್ತೇನೆ.
ಕಳೆದ 8 ವರ್ಷಗಳಿಂದ ಹಣ, ದೇಣಿಗೆ ಪಡೆಯದೇ ಸಮಾಜ ಸೇವೆ ಮಾಡುತ್ತಿದ್ದೇನೆ. ನವ್ಯಶ್ರೀ ಫೌಂಡೇಶನ್ ಗೆ ನನ್ನ ಸ್ವಂತ ಹಣ ಹಾಕುತ್ತಿದ್ದೇನೆ. ಮೊದಲು ನನ್ನ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹೇಗೆ ಬಂತು ಎಲ್ಲಿಂದ ಅನ್ನೋದನ್ನ ತಿಳಿದುಕೊಳ್ಳಬೇಕಿದೆ. ಹೀಗಾಗಿ ಈ ಸಂಬಂಧ ನಾನು ಪೊಲೀಸ್ ಆಯುಕ್ತರನ್ನು ಭೇಟಿಯಾಗುತ್ತೇನೆ ಎಂದು ನವ್ಯಾಶ್ರೀ ಹೇಳಿದ್ದಾರೆ.
ಇದನ್ನೂ ಓದಿ : siri vaibhava ದಿಂದ ಮಹಾವಂಚನೆ : ಬೆಂಗಳೂರಿನಲ್ಲಿ ಮುಳುಗಿದ ಮತ್ತೊಂದು ಸೌಹಾರ್ದ ಸಹಕಾರ ಬ್ಯಾಂಕ್
ಮತ್ತೊಂದು ಮಾಹಿತಿಗಳ ಪ್ರಕಾರ ರಾಜಕುಮಾರ ಟಾಕಳೆ ನನಗೆ ಮದುವೆಯೇ ಆಗಿಲ್ಲ ಎಂದು ನವ್ಯಾಶ್ರೀಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನಂತೆ. ಇದಾದ ಬಳಿಕ ಆತ ಮದುವೆಯಾಗಿರುವ ವಿಚಾರ ನವ್ಯಾಶ್ರೀಗೆ ಗೊತ್ತಾಗಿದೆ. ಈ ವೇಳೆ ಕಿರಿಕ್ ತೆಗೆದ ಕಾರಣಕ್ಕೆ ನವ್ಯಾಶ್ರೀ ಕೊರಳಿಗೆ ಟಾಕಳೆ ದೇವಸ್ಥಾನವೊಂದರಲ್ಲಿ ತಾಳಿ ಕಟ್ಟಿದ ಎಂದು ಗೊತ್ತಾಗಿದೆ. ಈ ಬಗ್ಗೆ ನಾಳೆ ನವ್ಯಾಶ್ರೀ ಮಾತನಾಡುವ ನಿರೀಕ್ಷೆಗಳಿದೆ.
ಸರ್ಕಾರಿ ಅಧಿಕಾರಿಗೆ ಕಾಂಗ್ರೆಸ್ ನಾಯಕಿಯಿಂದ ಹನಿಟ್ಯಾಪ್…?
ಬೆಳಗಾವಿ : ಹನಿಟ್ರ್ಯಾಪ್ ಮಾಡಿದ ಆರೋಪದಡಿಯಲ್ಲಿ ಕಾಂಗ್ರೆಸ್ ನಾಯಕಿ ನವಶ್ರೀ ರಾಮಚಂದ್ರರಾವ್ ವಿರುದ್ಧ ಬೆಳಗಾವಿ APMC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಆಯುಕ್ತ ಸಹಾಯ ನಿರ್ದೇಶಕ ರಾಜ್ ಕುಮಾರ್ ಟಾಕಳೆ ಅವರು ನೀಡಿದ ದೂರಿನ ಆಧಾರದಲ್ಲಿ FIR ದಾಖಲಿಸಲಾಗಿದ್ದು, ನವ್ಯಶ್ರೀ ಮತ್ತು ಆಕೆಯ ಆಪ್ತ ತಿಲಕ್ ವಿರುದ್ಧ IPC 384,448,504,506 ಮತ್ತು 34 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಟಾಕಳೆ ಕೊಟ್ಟಿರುವ ದೂರಿನ ಪ್ರಕಾರ ನವ್ಯಶ್ರೀ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನ್ನ ವಿರುದ್ಧ ಸುಳ್ಳು ಕೇಸ್ ನೀಡಿ ಮಾನನಷ್ಟ ಮಾಡಲು ಯತ್ನಿಸುತ್ತಿದ್ದಾಳೆ, ನನ್ನ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದಾಳೆ, ಜೀವ ಬೆದರಿಕೆ ಹಾಕುತ್ತಿದ್ದಾಳೆ, ಹೀಗಾಗಿ ನನ್ನ ಮತ್ತು ನನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ಬೇಕು ಎಂದು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗಳ ವರದಿ ಪ್ರಕಾರ ಶ್ರೀಮಂತ್ ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ರಾಜಕುಮಾರ್ ಟಾಕಳೆ ಪಿಎಸ್ ಆಗಿದ್ದರಂತೆ. ಈ ವೇಳೆ ಸಚಿವರನ್ನು ಭೇಟಿಯಾಗಲು ನವ್ಯಾ ಬಂದಿದ್ದ ಸಂದರ್ಭದಲ್ಲಿ ಟಾಕಳೆ ಜೊತೆಗೆ ಸ್ನೇಹ ಬೆಳೆದಿದೆ. ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಅನ್ನಲಾಗಿದೆ.
ಬಳಿಕ ಕೆಲಸ ಮನಸ್ತಾಪದ ನಂತ್ರ ಇಬ್ಬರೂ ದೂರವಾಗಿದ್ದರು. ಈ ನಡುವೆ ಟಾಕಲೆ ವಿರುದ್ಧ ನವ್ಯಾಶ್ರೀ ದೂರು ಕೊಟ್ಟಿದ್ದಳಂತ. ಈ ವೇಳೆ ಪೊಲೀಸರು ಸಂಧಾನ ಮಾತುಕತೆ ನಡೆಸಿದ್ದರು.ಇದೇ ವೇಳೆ 2 ಲಕ್ಷ ಡಿಡಿ ಹಣವನ್ನು ರಾಜಕುಮಾರ್ ಟಾಕಳೆ ಯುವ ಕಾಂಗ್ರೆಸ್ ನಾಯಕಿಗೆ ನೀಡಿದ್ದಾರಂತೆ. ಅದ್ಯಾವ ಕಾರಣಕ್ಕೆ ಈ ಹಣದ ವರ್ಗಾವಣೆ ನಡೆದಿದೆ ಅನ್ನುವುದು ಗೊತ್ತಾಗಿಲ್ಲ.
ದಿಗ್ವಿಜಯ ನ್ಯೂಸ್ ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವ್ಯಾ, ನಾನು ದೇಶದಲ್ಲಿ ಇರಲಿಲ್ಲ,ವಿದೇಶದಲ್ಲಿ ಇರಲಿಲ್ಲ. ಈಗ ನಾನು ಸೈಬರ್ ಕ್ರೈಂಗೆ ದೂರು ನೀಡಲಿದ್ದೇನೆ. ನನಗೆ ಒಂದು ದಿನ ಕಾಲಾವಕಾಶ ಕೊಡಿ ಎಲ್ಲಾ ಆರೋಪಗಳಿಗೆ ಉತ್ತರ ನೀಡಲಿದ್ದೇನೆ. ನನಗೆ ರಾಜಕುಮಾರ್ ಟಾಕಳೆ ಪರಿಚಯ ಇರೋದು ಹೌದು ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ 50 ಲಕ್ಷ ರೂಪಾಯಿ ಬೇಡಿಕೆ, ಕೊಡದಿದ್ರೆ ಹೆಂಡ್ತಿಗೆ ವಿಡಿಯೋ ಕಳುಹಿಸುವುದಾಗಿ ಹೇಳಿದ್ರಿ ಅನ್ನುವ ಚಾನೆಲ್ ಪ್ರಶ್ನೆಗೆ ನವ್ಯಾಶ್ರೀ ಉತ್ತರಿಸಿಲ್ಲ.
ಈ ನಡುವೆ ಕಾಂಗ್ರೆಸ್ ನಾಯಕರ ಜೊತೆಗೆ ನವ್ಯಾಶ್ರೀ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
Discussion about this post