ಬೆಂಗಳೂರು : ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಹಾಗಿದ್ದರೂ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈ ನಡುವೆ ಮನೆಯಲ್ಲೇ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.
ಸೋಲದೇವನಹಳ್ಳಿಯ ತರಬನಹಳ್ಳಿಯಲ್ಲಿ ವಾಸವಿದ್ದ ನೈಜೀರಿಯಾ ಮೂಲದ ರಿಚರ್ಡ್ ಮತ್ತು ಆತಮ ಸೋದರ ಈ ದಂಧೆಯಲ್ಲಿ ತೊಡಗಿದ್ದರು. 2019ರಲ್ಲಿ ಬಿಸಿನೆಸ್ ವೀಸಾದಲ್ಲಿ ದೆಹಲಿಗೆ ಬಂದ ಸೋದರರು ಇದಾದ ಬಳಿಕ ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಾಯಿಸಿದ್ದರು.
ಹೀಗೆ ರಾಮಮೂರ್ತಿ ನಗರದಲ್ಲಿ ಮೊದಲು ಮನೆ ಮಾಡಿದ್ದ ಖದೀಮರು ಬಳಿರ ಸೋಲದೇವನಹಳ್ಳಿಗೆ ನೆಲೆ ಬದಲಾಯಿಸಿದ್ದರು. ಇಲ್ಲಿ ಬಾಡಿಗೆ ಮನೆ ಪಡೆದ ಇವರು ಮಾಲೀಕರಿಗೆ ಗೊತ್ತಾಗದಂತೆ ಮನೆಯನ್ನೇ ಡ್ರಗ್ಸ್ ಫ್ಯಾಕ್ಟರಿ ಮಾಡಿಕೊಂಡಿದ್ದರು. ಡ್ರಗ್ಸ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಮನೆಗೆ ತರಿಸಿಕೊಳ್ಳುತ್ತಿದ್ದ ಸಹೋದರರು ಕುಕ್ಕರ್ ಬಳಸಿ MDM ಡ್ರಗ್ಸ್ ತಯಾರಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 50 ಲಕ್ಷ ಮೌಲ್ಯದ ಕೊಕೇನ್, 50 ಗ್ರಾಮ್ ಎಂಡಿಎಂ ಕ್ರಿಸ್ಟೆಲ್, ಎಂಡಿಎಂ ತಯಾರು ಮಾಡಲು ಬಳಸುತ್ತಿದ್ದ ರಾಸಾಯನಿಕ ಹಾಗೂ 10 ಲೀಟರ್ ಕುಕ್ಕರ್ ಅನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಓರ್ವ ಸಹೋದರ ತಲೆಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ಮುಂದುವರಿದಿದೆ.
You cook, we book!
The Anti-Narcotics Wing of @CCBBangalore has arrested a foreign national for drug peddling. The accused used to prepare synthetic drugs in a pressure cooker and peddle them in domestic & international markets. Cocaine, MDMA, and chemical substances worth ₹50 lakh have been seized. Further investigation is underway.
Discussion about this post