ಈ ವುಹಾನ್ ವೈರಸ್ ಮಾಡಿರುವ ಅವಾಂತರ ಒಂದಲ್ಲ ಎರಡಲ್ಲ, ವಿಶ್ವದ ಬಹುತೇಕ ಬದುಕನ್ನು ಬರ್ಬಾದ್ ಮಾಡಿರುವ ಚೀನಾ ವೈರಸ್ ಇನ್ನೆಷ್ಟು ಜನರನ್ನು ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಈಗಾಗಲೇ ಕೊರೋನಾ ಕಾರಣದಿಂದ ಅನೇಕ ಮಕ್ಕಳು ತಬ್ಬಲಿಗಳಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಂಗಲಾಗಿದ್ದಾರೆ.
ಇದೇ ರೀತಿ ಬೆಂಗಳೂರಿನ ಹೊರವಲಯ ಆನೇಕಲ್ನಲ್ಲಿ ಕುಟುಂಬವೊಂದು ವುಹಾನ್ ವೈರಸ್ ನಿಂದ ಸರ್ವನಾಶವಾಗಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ಸತೀಶ್ ರೆಡ್ಡಿ ಅವರ ಪತ್ನಿ ಆಶಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆಶಾ ಮೇ 6ರಂದು ಇಹಲೋಕ ತ್ಯಜಿಸಿದ್ದರು.
ತಾಯಿಯನ್ನು ಕಳೆದುಕೊಂಡ ಮಕ್ಕಳು, ಪತ್ನಿಯನ್ನು ಕಳೆದುಕೊಂಡ ಪತಿ ಕಂಗಾಲಾಗಿ ಹೋದರು. ಸಾವಿನ ನೋವಿನಿಂದ ಇಡೀ ಮನೆ ಹೊರಬರಲೇ ಇಲ್ಲ. ಜೀವನ ನಡೆಸಬೇಕು ಎಂದು ಮನಸ್ಸು ಗಟ್ಟಿ ಮಾಡಿದರು ಸಾಧ್ಯವಾಗಲಿಲ್ಲ.
ಹೀಗಾಗಿ ಖಿನ್ನತೆಗೆ ಒಳಗಾದ ತಂದೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇಂದು ನೇಣಿಗೆ ಶರಣಾಗಿದ್ದಾರೆ.
ಮೃತರನ್ನು ಪತಿ ಸತೀಶ್ ರೆಡ್ಡಿ (45) ಹಾಗೂ ಮಕ್ಕಳಾದ ಕೀರ್ತಿ(19) , ಮೊನಿಷಾ(17) ಎಂದು ಗುರುತಿಸಲಾಗಿದೆ.
Discussion about this post