ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಿಂತಿರುಗುತ್ತಿದ್ದ ವೇಳೆ ಈ (Accident) ದುರ್ಘಟನೆ ಸಂಭವಿಸಿದೆ
ಹುಬ್ಬಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಕಾರು ದರ್ಗಾಗೆ ಡಿಕ್ಕಿಯಾಗಿ (Accident) ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿ – ಪುಣೆ ಹೆದ್ದಾರಿಯ ಜಿಗಳೂರ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಹನಮಂತಪ್ಪ ಬೇವಿನಕಟ್ಟ, ಪತ್ನಿ ರೇಣುಕಾ ಬೇವುನಕಟ್ಟಿ ಮತ್ತು ಅವರ ಅಳಿಯ ರವೀಂದ್ರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿದೆ.( Accident)
ಬೆಂಗಳೂರಿನಲ್ಲಿ ಸಂಬಂಧಿಗಳ ಗೃಹ ಪ್ರವೇಶ ಮುಗಿಸಿ ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯದಿಂದ ಕಾರು ದರ್ಗಾಗೆ ಡಿಕ್ಕಿಯಾಗಿದೆ ಅನ್ನಲಾಗಿದೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : Wardrobe malfunction : ವಸ್ತ್ರ ದೋಷದಿಂದ ಗುಪ್ತಾಂಗ ಹೊರ ಬಿದ್ದು ಸೋತ ಅಥ್ಲೀಟ್
Discussion about this post