ಆಟದ ಮೈದಾನದಲ್ಲಿ ಅನೇಕ ಸಲ ಹೀಗಾಗಿದೆ, ಗೆಲುವಿಗೆ ಸನಿಹವಿದ್ದ ಸ್ಪರ್ಧಿಗಳು Wardrobe malfunction ಕಾರಣದಿಂದ ಮುಜುಗರಕ್ಕೆ ಒಳಗಾಗಿ ಸೋತಿದ್ದಾರೆ
ಕೊಲಂಬೋದ ಕಲಿಯಲ್ಲಿ ನಡೆಯುತ್ತಿರುವ 2022 World Athletics U20 Championshipsನಲ್ಲಿ ಬೇಸರದ ಘಟನೆಯೊಂದು ನಡೆದಿದೆ. ಓಟದ ಮಧ್ಯದಲ್ಲೇ ಗುಪ್ತಾಂಗ ಹೊರ ಬಿದ್ದ ಕಾರಣ ಮೊದಲ ಸ್ಥಾನದಲ್ಲಿದ್ದ ಸ್ಪರ್ಧಿಯೊಬ್ಬರು ಕೊನೆಯ ಸ್ಥಾನಕ್ಕೆ ಜಾರಿದ್ದಾರೆ.
2022 World Athletics U20 Championships ಸ್ಪರ್ಧೆಯಲ್ಲಿ 400 ಮೀಟರ್ ಓಟದ ಕಣದಲ್ಲಿದ್ದ ಇಟಲಿಯ ಅಲ್ಭರ್ಟೋ ನೋನಿನೊ (Alberto Nonino) ಓಟ ಪ್ರಾರಂಭವಾದ ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಮುನ್ನುಗಿದ್ದರು. ಗ್ಯಾಲರಿಯಲ್ಲಿ ಕೂತವರು ಉಸಿರು ಬಿಗಿ ಹಿಡಿದು ನೋಡುವಂತೆ ನುಗ್ಗಿದ್ದರು.
ಇದನ್ನು ಓದಿ : Corona alert : ಕರ್ನಾಟಕಕ್ಕೆ ಕೇಂದ್ರದ ಕೊರೋನಾ ಎಚ್ಚರಿಕೆ
ಪ್ರಾಥಮಿಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಲ್ಭರ್ಟೋ ನೋನಿನೊ ಗೆಲುವಿನ ಗುರಿ ತಲುಪುವ ನಿರೀಕ್ಷೆ ಇತ್ತು. ಆದರೆ ಅರ್ಧ ದಾರಿ ಕ್ರಮಿಸುವ ಹೊತ್ತಿಗೆ ಅವರ ವೇಗಕ್ಕೆ ಬೇಕ್ ಬಿತ್ತು. ಪದೇ ಪದೇ ತಮ್ಮ ಗುಪ್ತಾಂಗವನ್ನು ಮುಟ್ಟಿ ನೋಡಲಾರಂಭಿಸಿದರು. ಹೀಗಾಗಿ ಅವರ ವೇಗ ನಿಧಾನವಾಗಿ ಕಡಿಮೆಯಾಯ್ತು.
ವಸ್ತ್ರ ಸರಿಪಡಿಸುವ ಗಡಿಬಿಡಿಯಲ್ಲಿ ಓಡುವ ಕಡೆಗೆ ಗಮನಕೊಡಲಾಗಲಿಲ್ಲ. ಹೀಗಾಗಿ ಉಳಿದೆಲ್ಲಾ ಸ್ಪರ್ಧಿಗಳು ಅಲ್ಭರ್ಟೋ ನೋನಿನೊ ಅವರನ್ನು ಹಿಂದಿಕ್ಕಿದರು. ಅವರು ಕೊನೆಯ ಸ್ಥಾನಕ್ಕೆ ಜಾರಿದರು.
ಈ ವೇಳೆ ಗ್ಯಾಲರಿಯಲ್ಲಿ ಕೂತವರಿಗೆ ಏನಾಗುತ್ತಿದೆ ಅನ್ನುವುದೇ ಅರ್ಥವಾಗಲಿಲ್ಲ. ಅಷ್ಟು ಹೊತ್ತಿಗೆ ಉಳಿದವರು ಗುರಿ ಮುಟ್ಟಿಯಾಗಿತ್ತು.
ನಿಜಕ್ಕೂ ಇದೊಂದು ಅತ್ಯಂತ ನೋವಿನ ಘಟನೆ, ಒಂದು ವೇಳೆ ಅಲ್ಭರ್ಟೋ ನೋನಿನೊ ಬಟ್ಟೆ ಕೈ (Wardrobe malfunction) ಕೊಡದಿರುತ್ತಿದ್ರೆ ಅವರೇ ಗೆಲುವಿನ ದಡ ಸೇರುತ್ತಿದ್ದರು.
Wardrobe malfunction : an instance of a person accidentally exposing an intimate part of their body as a result of an article of clothing slipping out of position.
Discussion about this post