ಪೊಲೀಸರ ಧನದಾಹ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಮೊನ್ನೆ ಮೊನ್ನೆ ಪವರ್ ಟಿವಿ ಮಾಡಿದ ಸ್ಟಿಂಗ್ ಆಪರೇಷನ್ ನಲ್ಲಿ ಟ್ರಾಫಿಕ್ ಪೊಲೀಸರ ಅಸಲಿ ಮುಖ ಬಯಲಾಗಿತ್ತು. ರಸ್ತೆಯಲ್ಲಿ ಓಡಾಡುವ ಮಂದಿ ಸತ್ತರೂ ಪರವಾಗಿಲ್ಲ ಅನ್ನುವುದು ಇವರ ಧೋರಣೆ. ಈ ನಡುವೆ ಇಂದು BMTF ಪೊಲೀಸ್ ಸಬ್ ಇನ್ಸ್ ಪೆಕ್ಟರ್ Acb Raid ವೇಳೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು : ಕರ್ನಾಟಕದ ಪೊಲೀಸ್ ಅಂದ್ರೆ ರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ಆದರೆ ಇತ್ತೀಚಿನ ದಿನಗಳ ಕರ್ನಾಟಕ ಪೊಲೀಸರ ಮಾನ ಹರಾಜುಗೊಳ್ಳುತ್ತಿದೆ. ಪೊಲೀಸ್ ನೇಮಕಾತಿ ವಿಚಾರದಲ್ಲಿ ಭ್ರಷ್ಟಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ರೆ, ಎಸಿಬಿ ( Acb Raid )ಕೈಗೆ ಅನೇಕ ಪೊಲೀಸ್ ಅಧಿಕಾರಿಗಳು ಸಿಕ್ಕಿ ಬೀಳುತ್ತಿದ್ದಾರೆ.
ಪವರ್ ಟಿವಿ ಮಾಡಿದ ಸ್ಟಿಂಗ್ ಆಪರೇಷನ್ ನೋಡಿದ್ರೆ ರಸ್ತೆಯಲ್ಲಿ ಓಡಾಡುವುದೇ ಕಷ್ಟ ಅನ್ನುವಂತಾಗಿದೆ. ದೊಡ್ಡ ದೊಡ್ಡ ಲಾರಿಗಳ ಓಡಾಟಕ್ಕೆ, ಟಿಪ್ಪರ್ ಗಳ ಸಂಚಾರಕ್ಕೆ ಲಂಚ ಬಾಚುವ ಪರಿ ನೋಡಿದ್ರೆ, ಬೆಂಗಳೂರಿನ ರಸ್ತೆಗಳನ್ನು ಈ ಅಧಿಕಾರಿಗಳು ಮಾರುವುದು ಗ್ಯಾರಂಟಿ. ಒಟ್ಟಿನಲ್ಲಿ ಶಿಸ್ತಿನ ಇಲಾಖೆಗೆ ಮಸಿ ಬಳಿಯುವ ಹೆಸರನ್ನು ಖಾಕಿಗಳೇ ಮಾಡುತ್ತಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ ನುಸುಳಿದ ಪಾಕ್ ಮೀನುಗಾರರು : 10 ದೋಣಿಗಳನ್ನು ವಶಪಡಿಸಿಕೊಂಡ BSF
ಈ ನಡುವೆ ಮಾಜಿ ಕಾರ್ಪೋರೇಟರ್ ಬಳಿಯೇ ಲಂಚಕ್ಕಾಗಿ ಕೈಯೊಡ್ಡಿದ ಬಿಎಂಟಿಎಫ್ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಎಸಿಬಿ ( Acb Raid) ಅಧಿಕಾರಿಗಳು ಬಂಧಿಸಿದ್ದಾರೆ. ಬಿಬಿಎಂಪಿ ಮುಖ್ಯ ಕಚೇರಿಯಲ್ಲೇ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ PSI ಬೇಬಿ ವಾಲೇಕಾರ್ ಎಂಬವರನ್ನು ಎಸಿಬಿ ಬಂಧಿಸಿದೆ.
ಹೊರಮಾವು ಅಗರದ ಭೂವ್ಯಾಜ್ಯ ಸಂಬಂಧ ಮಾಜಿ ಕಾರ್ಪೋರೇಟರ್ ಲಕ್ಷ್ಮಿ ನಾರಾಯಣ್ ಬಳಿ 3 ಲಕ್ಷಕ್ಕೆ ಬೇಬಿ ಬೇಡಿಕೆ ಇಟ್ಟಿದ್ದರು. ಇಂದು 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಈ ಮಹಿಳಾ ಸಬ್ ಇನ್ಸ್ ಪೆಕ್ಟರ್ ಈ ಹಿಂದೆಯೂ ಸಾಕಷ್ಟು ಕಾರಣಕ್ಕೆ ಸುದ್ದಿಯಲ್ಲಿದ್ದರು.
ಅಕ್ರಮ ಸಂಬಂಧಕ್ಕಾಗಿ ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದ ಪಾಪಿ ಪತಿ
ಮಂಡ್ಯ : ಪರಸ್ತ್ರೀಯರ ಹುಚ್ಚಿಗೆ ಬಿದ್ದ ಪಾಪಿಯೊಬ್ಬ ತನ್ನ ಇಬ್ಬರ ಮಕ್ಕಳ ಎದುರೇ ತಾಳಿ ಕಟ್ಟಿದವಳನ್ನೇ ಕೊಲೆ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆಯ ಕ್ರೌರ್ಯದ ದೃಶ್ಯವನ್ನು ನೋಡಿದ ಮಕ್ಕಳೇ ಬೆಚ್ಚಿ ಬಿದ್ದಿದ್ದಾರೆ. ಮೃತಳನ್ನು ಯೋಗಿತಾ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಪಾಪಿಯನ್ನು ರವಿ ಗೌಡ ಎಂದು ಗುರುತಿಸಲಾಗಿದೆ. 9 ವರ್ಷಗಳ ಹಿಂದೆ ಕೆ.ಆರ್.ಪೇಟೆ ಮೂಡನಹಳ್ಳಿಯ ಯೋಗಿತಾಳನ್ನು ಮಂಡ್ಯದ ಶ್ರೀರಂಗಪಟ್ಟಣದ ಗೆಂಡೆಹೊಸಹಳ್ಳಿ ಗ್ರಾಮದ ರವಿ ಗೌಡನಿಗೆ ವಿವಾಹ ಮಾಡಿಕೊಡಲಾಗಿತ್ತು. ಇದಾದ ಬಳಿಕ ಯೋಗಿತಾ ಇಬ್ಬರು ಮಕ್ಕಳಿಗೆ ಜನ್ಮವನ್ನೂ ನೀಡಿದ್ದಳು.
ಮದುವೆಯಾದ ಕೆಲ ವರ್ಷಗಳ ಕಾಲ ಎಲ್ಲವೂ ಚೆನ್ನಾಗಿತ್ತು. ಆದರೆ ವರ್ಷ ಕಳೆದಂತೆ ರವಿಗೆ ಪರಸ್ತ್ರೀಯರ ವ್ಯಾಮೋಹ ಶುರುವಾಗಿದೆ. ಹೀಗಾಗಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಯಾವಾಗ ಯೋಗಿತಾಳಿಗೆ ಗಂಡ ಬೇಲಿ ಹಾರುವ ವಿಚಾರ ಗೊತ್ತಾಯಿತೋ, ರವಿಯನ್ನು ಪ್ರಶ್ನಿಸಿದ್ದಾಳೆ. ಈ ಕಾರಣದಿಂದ ರವಿ ಗೌಡ ಯೋಗಿತಾಗೆ ಹೊಡೆಯುವುದು, ಬೈಯುವುದು ಪ್ರಾರಂಭಿಸಿದ. ಈ ನಡುವೆ ರವಿ ಗೌಡ ಪರಸ್ತ್ರೀಯೊಬ್ಬಳ ಜೊತೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಯೋಗಿತಾ ತವರಿಗೆ ವಿಷಯ ಮುಟ್ಟಿಸಿದ್ದಳು. ಇದಾದ ಬಳಿಕ ರಾಜಿ ಪಂಚಾಯತಿ ನಡೆಸಿ ಎಲ್ಲವನ್ನೂ ಸರಿ ಮಾಡಲಾಗಿತ್ತು. ಆದರೆ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತಾರಲ್ಲ ರವಿ ಗೌಡ ತನ್ನ ಚಾಳಿ ಮುಂದುವರಿಸಿದ್ದ.
ಈ ನಡುವೆ ಬುಧವಾರ ರವಿ ಗೌಡ ಮಕ್ಕಳಿಗೆ ಪಾನಿ ತಂದು ಕೊಟ್ಟಿದ್ದ. ಅದನ್ನು ತಿನ್ನಬೇಡಿ ಎಂದು ಯೋಗಿತಾ ಮಕ್ಕಳಿಗೆ ಹೇಳಿದ್ದಾಳೆ. ಅಷ್ಟಕ್ಕೆ ಕೋಪಗೊಂಡ ರವಿ ಗೌಡ ಕೋಣೆಯೊಳಗೆ ಕರೆದುಕೊಂಡು ಹೋಗಿ ವೈರ್ ಅನ್ನು ಯೋಗಿತಾ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾನೆ. ತಂದೆಯ ಕೃತ್ಯ ನೋಡಿದ ಮಕ್ಕಳು ಗಾಬರಿಯಾಗಿ ಮನೆ ದ ಹೊರಗೆ ಕಿರುಚುತ್ತಾ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕ ಪಕ್ಕದವರು ಬರುವ ಹೊತ್ತಿಗೆ ಯೋಗಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನೆರೆಹೊರೆಯವರು ಬರುವುದನ್ನು ಗಮನಿಸಿದ ರವಿ ಪರಾರಿಯಾಗಿದ್ದಾನೆ.
ಇದೀಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
Discussion about this post