ಗುಜರಾತ್ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ BSF ಈ ಕಾರ್ಯಾಚರಣೆಯನ್ನು ನಡೆಸಿದೆ
ನವದೆಹಲಿ : ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಭಾರತದ ಗಡಿಯನ್ನು ನುಸುಳುತ್ತಿದ್ದ ನಾಲ್ವರು ಪಾಕಿಸ್ತಾನ ಮೀನುಗಾರರನ್ನು BSF ಪಡೆ ಬಂಧಿಸಿದೆ. ಈ ವೇಳೆ ಅವರ ಬಳಿ ಇದ್ದ 10 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡೋ ಪಾಕ್ ನ ಗಡಿಭಾಗವಾಗಿರುವ ಗುಜರಾತ್ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ ಈ ಕಾರ್ಯಾಚರಣೆ ನಡೆದಿದ್ದು, ಪಾಕಿಸ್ತಾನಿ ಮೀನುಗಾರರು ದೋಣಿಗಳೊಂದಿಗೆ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ BSF ಪಡೆ ಸೂಕ್ತ ಎಚ್ಚರಿಕೆಯನ್ನು ನೀಡಿದೆ.
ಆದರೆ ಅವರು ಯೋಧರು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ತಕ್ಷಣ ನಾಲ್ವು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ.
30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ
ತಮಿಳುನಾಡು : ಮಗನಿಗೆ ಮದುವೆ ಮಾಡಲು ಹೋದ ತಾಯಿಯೊಬ್ಬಳು ಮದುವೆ ವಿಚಾರದಲ್ಲಿ ( marriage cheating) ಮೋಸ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇಂದ್ರಾಣಿ ಎಂಬ 65 ವರ್ಷದ ಮಹಿಳೆ 35 ವರ್ಷದ ಪುತ್ರನೊಂದಿಗೆ ತಮಿಳುನಾಡಿನ ತಿರುವಲ್ಲೂರಿನ ಪುದುಪೇಟೆ ಎಂಬಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುತ್ರ ಡಿವೋರ್ಸ್ ಆಗಿದ್ದ ಕಾರಣ ಮಗನ ಎರಡನೇ ಮದುವೆಗಾಗಿ ಹುಡುಗಿಯ ಹುಡುಕಾಟದಲ್ಲಿದ್ದರು.
ಈ ಸಂದರ್ಭದಲ್ಲಿ ಬ್ರೋಕರ್ ಮೂಲಕ ಆಂಧ್ರ ಪ್ರದೇಶದ ತಿರುಪತಿ ಪುತ್ತೂರು ನಿವಾಸಿ ಶರಣ್ಯ ಅನ್ನುವವರ ಪರಿಚಯವಾಗಿದೆ. ಹೀಗಾಗಿ ಮಗನ ಜೊತೆಗೆ ಇಂದ್ರಾಣಿಯವರು ಶರಣ್ಯಾ ಭೇಟಿಗೆ ಹೋಗಿದ್ದಾರೆ. ಈ ವೇಳೆ 54 ವರ್ಷದ ಶರಣ್ಯ ಬ್ಯೂಟಿ ಪಾರ್ಲರ್ ಗೆ ಹೋಗಿ 30ರ ತರುಣಿಯಂತೆ ಮೇಕಪ್ ಮಾಡಿಸಿಕೊಂಡಿದ್ದಾಳೆ ಆ ಬ್ಯೂಟಿಷಿಯನ್ ಅದೇನು ಜಾದೂ ಮಾಡಿದ್ರೋ ಗೊತ್ತಿಲ್ಲ. ಇದೆಲ್ಲಾ ನಡೆದದ್ದು ಕಳೆದ ವರ್ಷ.
ಹೆಣ್ಣು ನೋಡುವ ಶಾಸ್ತ್ರ ಮುಗಿದ ಬೆನ್ನಲ್ಲೇ ತಿರುವಲ್ಲೂರಿನಲ್ಲಿ ಇಂದ್ರಾಣಿಯ ಪುತ್ರ ಹಾಗೂ ಶರಣ್ಯಾ ಮದುವೆ ಅದ್ದೂರಿಯಾಗಿ ನಡೆದಿದೆ. 25 ಪವನ್ ಚಿನ್ನವನ್ನು ಶರಣ್ಯಾಳಿಗೆ ಈ ವೇಳೆ ಕೊಡಲಾಗಿತ್ತು.
ಇದಾದ ಬಳಿಕ ಪ್ರಾರಂಭವಾಗಿದ್ದು ಆಂಟಿಯ ಅಸಲಿ ಆಟ. ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡಬೇಕು ಎಂದು ಕಾಟ ಪ್ರಾರಂಭಿಸಿದ ಶರಣ್ಯಾ ಅತ್ತೆ ಹಾಗೂ ಗಂಡನೊಂದಿಗೆ ತಗಾದೆ ಪ್ರಾರಂಭಿಸಿದ್ದಾಳೆ. ಒಂದು ಹಂತದಲ್ಲಿ ಇಂದ್ರಾಣಿಯನ್ನು ಮನೆಯಿಂದ ಹೊರ ಹಾಕಲಾಗಿದೆ. ಪತ್ನಿಯ ಕಾಟ ತಡೆಯಲಾಗದ ಪತಿ ಈ ವೇಳೆ ಆಸ್ತಿಯನ್ನು ವರ್ಗಾಯಿಸಿ ಕೊಡುತ್ತೇವೆ ಆಧಾರ್ ಕಾರ್ಡ್ ಕೊಡು ಅಂದಿದ್ದಾನೆ.
ಆಧಾರ್ ಕಾರ್ಡ್ ಪಡೆದು ನೋಡಿದ್ರೆ ಅದರಲ್ಲಿ ಕೇರ್ ಆಫ್ ( C/O ) ಜಾಗದಲ್ಲಿ ರವಿ ಅನ್ನುವ ಹೆಸರಿತ್ತು. ಹೀಗಾಗಿ ಅನುಮಾನಗೊಂಡ ತಾಯಿ ಮಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸರು ತನಿಖೆ ನಡೆಸಿದ ಬಳಿಕ ಇಂದ್ರಾಣಿ ಹಾಗೂ ಆಕೆಯ ಮಗ ಶಾಕ್ ಆಗಿದ್ದಾರೆ. ಶರಣ್ಯಾ 30ರ ಯುವತಿಯಾಗಿರಲಿಲ್ಲ, ಬದಲಾಗಿ ಆಕೆ 54ರ ಆಂಟಿಯಾಗಿದ್ದಳು. ಅಷ್ಟು ಮಾತ್ರವಲ್ಲದೆ ಆಕೆಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದು, ಆ ಹೆಣ್ಣು ಮಕ್ಕಳಿಗೆ ಮದುವೆಯೂ ಆಗಿದೆ.
ಇನ್ನು ಆಕೆಯ ನಿಜವಾದ ಹೆಸರು ಶರಣ್ಯ ಅಲ್ಲ. ಹೋದ ಕಡೆಯೆಲ್ಲಾ ಬೇರೆ ಬೇರೆ ಹೆಸರು ಇಟ್ಟುಕೊಂಡಿದ್ದ ಆಕೆ ಶರಣ್ಯಾ ಆಲಿಯಾಸ್ ಸುಕನ್ಯ ಆಲಿಯಾಸ್ ಸಂಧ್ಯಾ ಎಂದೆಲ್ಲಾ ಕರೆಸಿಕೊಂಡಿದ್ದಳು.
ಹಲವು ವರ್ಷಗಳ ಹಿಂದೆ ರವಿ ಅನ್ನುವವರನ್ನು ಮದುವೆಯಾಗಿದ್ದ ಈಕೆ ಎರಡು ಹೆಣ್ಣು ಮಕ್ಕಳನ್ನು ಪಡೆದಿದ್ದಳು. ಇದಾದ ಬಳಿಕ ರವಿಯೊಂದಿಗೆ ಮನಸ್ತಾಪಗೊಂಡು ತಾಯಿ ಮನೆಗೆ ಬಂದಿದ್ದ ಈಕೆ ಎರಡನೇ ಮದುವೆಗೆ ಮನಸ್ಸು ಮಾಡಿದ್ದಳು.
ಈ ವೇಳೆ ಸುಬ್ರಮಣಿ ಅನ್ನುವವನನ್ನು ಮದುವೆಯಾಗಿ 11 ವರ್ಷ ಸಂಸಾರ ನಡೆಸಿದ್ದಳು. ಕೊರೋನಾ ಕಾಲದಲ್ಲಿ ಆತನನ್ನು ತೊರೆದು ತಾಯಿ ಮನೆಗೆ ಹಿಂತಿರುಗಿದ ಶರಣ್ಯಾ ಇಂದ್ರಾಣಿಯನ್ನು ಬುಟ್ಟಿಗೆ ಬೀಳಿಸಿ ಆಸ್ತಿಗೆ ಬಲೆ ಬೀಸಿದ್ದಾಳೆ.
ಈ ನಡುವೆ ಇದೇ ಶರಣ್ಯಾ ತನ್ನ ಗಂಡ ರವಿ ಮೇಲೆ ಪೊಲೀಸ್ ದೂರು ದಾಖಲಿಸಿ, ಆತನಿಂದ 10 ಲಕ್ಷ ಹಣ ವಸೂಲಿ ಮಾಡಿದ್ದಾಳೆ ಅನ್ನುವ ಆರೋಪ ಕೂಡಾ ಇದೆ.
Discussion about this post