ಬೆಂಗಳೂರು ಮತ್ತು ತೆಲಂಗಾಣದಲ್ಲಿ ವಿದ್ವಂಸಕರ ಕೃತ್ಯ ಎಸಗಲು ಅಲ್ಖೈದಾ ಸಂಚು ನಡೆಸಿತ್ತು(Bengaluru terror) ಎಂದು ಹೇಳಲಾಗುತ್ತಿದೆ
ಬೆಂಗಳೂರು : ರಾಜಧಾನಿಯ ತಿಲಕನಗರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನ ಕರಾಳ ಮುಖಗಳು ಇದೀಗ ಬಯಲಾಗಲಾರಂಭಿಸಿದೆ. ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡಿದ್ದ ಈತ ಫುಡ್ ಡೆಲಿವರಿ ಕೆಲಸದೊಂದಿಗೆ ಬೆಂಗಳೂರಿನ ಮೂಲೆ ಮೂಲೆಯನ್ನು ಪರಿಚಯಿಸಿಕೊಳ್ಳುತ್ತಿದ್ದ Bengaluru terror) ಎಂದು ಗೊತ್ತಾಗಿದೆ.
ಸ್ಪಷ್ಟ ಮಾಹಿತಿ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಖ್ತರ್ ಹುಸೇನ್ ನನ್ನು (Bengaluru terror) ಫಾಲೋ ಮಾಡುತ್ತಿದ್ದ ಸಿಸಿಬಿ ತಂಡ ಸಾಕಷ್ಟು ತಾಂತ್ರಿಕ ಮಾಹಿತಿಗಳನ್ನು ಕೂಡಾ ಕಲೆ ಹಾಕಿತ್ತು. ಹೀಗಾಗಿ ಸೋಮವಾರ ಮುಂಜಾನೆ 5 ಗಂಟೆಗೆ ಅಖ್ತರ್ ವಾಸವಿದ್ದ ಮನೆಯನ್ನು ಸುಮಾರು 30 ಜನರ ಪೊಲೀಸ್ ಟೀಂ ಸುತ್ತುವರಿದಿತ್ತು. ಈ ಹೊತ್ತಿನಲ್ಲಿ ಶಂಕಿತ ಉಗ್ರ ಮನೆಯಲ್ಲಿ ಇರಲಿಲ್ಲ. 7 ಗಂಟೆ ಸುಮಾರಿಗೆ ಆತ ಮನೆಗೆ ಬರುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದ ಪೊಲೀಸ್ ತಂಡ ಶಂಕಿತನನ್ನು ವಶಕ್ಕೆ ಪಡೆದಿತ್ತು. ಬೆಳಗ್ಗೆ ಈತ ಮನೆಯೊಳಗಡೆ ಸೇರಿದ್ರೆ ಹಗಲು ಹೊತ್ತಿನಲ್ಲಿ ಹೊರಗೆ ಬರುತ್ತಿರಲಿಲ್ಲ. ಮತ್ತೆ ಸಂಜೆಯೇ ಮನೆ ಬಿಡುತ್ತಿದ್ದ. ಹೀಗಾಗಿ ಈತನ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರಲಿಲ್ಲ.
ಇದನ್ನೂ ಓದಿ : siri vaibhava ದಿಂದ ಮಹಾವಂಚನೆ : ಬೆಂಗಳೂರಿನಲ್ಲಿ ಮುಳುಗಿದ ಮತ್ತೊಂದು ಸೌಹಾರ್ದ ಸಹಕಾರ ಬ್ಯಾಂಕ್
ಇದೀಗ ಈತನ ಹಲವು ಮಾಹಿತಿಗಳು ಹೊರ ಬಿದ್ದಿದ್ದು, ಕಳೆದ 1 ವರ್ಷದಿಂದ ಅಲ್ ಖೈದಾ (Bengaluru terror) ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಈತ ಟೆಲಿಗ್ರಾಮ್ ಮತ್ತು ಫೇಸ್ ಬುಕ್ ಮೂಲಕ ಉಗ್ರರ ಸಂಪರ್ಕ ಬೆಳೆಸಿದ್ದ. ಜಿಹಾದ್ ಸಲುವಾಗಿ ಹೋರಾಟಕ್ಕೆ ತಯಾರಾಗಿದ್ದ ಈತ ಮುಂದಿನ ಹದಿನೈದು ದಿನಗಳ ಒಳಗಾಗಿ ಕಾಶ್ಮೀರ ಮಾರ್ಗವಾಗಿ ಅಲ್ ಖೈದಾ ಸೇರುವವನಿದ್ದನಂತೆ.
ಮತ್ತೊಂದು ಮಾಹಿತಿಗಳ ಪ್ರಕಾರ ಬೆಂಗಳೂರು ಮತ್ತು ತೆಲಂಗಾಣದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಲಾಗುತ್ತಿತ್ತು. ಈ ಕೆಲಸಕ್ಕಾಗಿ ಅಖ್ತರ್ ನ ಬಳಕೆ ಮಾಡಲಾಗುತ್ತಿತ್ತು. ಸ್ಫೋಟಕ ಸೂಕ್ತ ಸ್ಥಳವನ್ನು ಈತ ಹುಡುಕಾಡುತ್ತಿದ್ದ ಅನ್ನಲಾಗಿದೆ.
ಕಳೆದ ತಿಂಗಳಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್ ನನ್ನು ಬಂಧಿಸಲಾಗಿತ್ತು.ಶ್ರೀ ನಗರದಿಂದ ಬಂದು ಶ್ರೀರಾಮಪುರದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿ ತನಿಖೆಯನ್ನು ಕೈಗೊಂಡ ಬೆನ್ನಲ್ಲೇ ಸಿಸಿಬಿ ಪೊಲೀಸರು ತಮ್ಮದೇ ಮಾಹಿತಿಯನ್ನು ಕಲೆಹಾಕಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ :bbmp high court : ಜ್ಯೋತಿಷ್ಯ ಕೇಂದ್ರ ಮುಚ್ಚುವಂತೆ ಆದೇಶಿಸಿದ್ದ ಬಿಬಿಎಂಪಿಗೆ ಮುಖಭಂಗ
Discussion about this post