ಅಕ್ರಮ ಸಂಬಂಧ ಅನ್ನುವುದು ತಾತ್ಕಾಲಿಕ ಸುಖ ನೀಡಬಲ್ಲುದು. ಆದರೆ ದೀರ್ಘ ಅವಧಿಯಲ್ಲಿ ಅದೊಂದು ಕಾರ್ಕೋಟಕ ವಿಷವೇ ಸರಿ (Wife murdered husband)
ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದೆ. ( Wife murdered husband ) ಗಮನಾರ್ಹ ಅಂಶ ಅಂದ್ರೆ ತಾಳಿ ಕಟ್ಟಿದ ಗಂಡನನ್ನು ಪತ್ನಿಯೇ ಕಾರು ಡಿಕ್ಕಿ ಹೊಡೆದು ಕೊಂದಿದ್ದಾಳೆ.
ಕೆಲ ದಿನಗಳ ಹಿಂದೆ ಕಮತಗಿ ಕ್ರಾಸ್ ಬಳಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣ ಪೊಲೀಸ್ ಠಾಣೆ ತಲುಪಿತು. ಸ್ಥಳ ಪರಿಸೀಲನೆ ಮಾಡಿದಾಗ ಅದೊಂದು ಹಿಟ್ ಅಂಡ್ ರನ್ ಪ್ರಕರಣದಂತೆ ಗೋಚರಿಸಿತ್ತು. ಆದರೆ ಮೃತ ವ್ಯಕ್ತಿಯ ಮೈ ಮೇಲಿನ ಗಾಯದ ಗುರುತುಗಳನ್ನು ಗಮನಿಸಿದಾಗ ಇದೊಂದು ಕೊಲೆ ಅನ್ನುವ ಸಂಶಯ ಮೂಡಿಸಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡ ಅಮೀನಗಡ ಪೊಲೀಸರು ಮೊದಲು ಮೃತ ವ್ಯಕ್ತಿ ಯಾರು ಅನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಪ್ರವೀಣ ಸೇಬಣ್ಣ ( 30 ) ಅನ್ನುವುದು ಗೊತ್ತಾಗಿದೆ.
ಇದನ್ನೂ ಓದಿ : Monkeypox : ದುಬೈನಿಂದ ಮಂಗಳೂರಿನಲ್ಲಿ ಬಂದಿಳಿದವನಿಗೆ ಮಂಕಿಪಾಕ್ಸ್ : ಕರಾವಳಿಗೆ ಢವ ಢವ
ಇದೇ ಸಂದರ್ಭದಲ್ಲಿ ಪ್ರವೀಣ ಸೇಬಣ್ಣ ಅವರ ಪತ್ನಿ ನಿತ್ಯಾ ನಡೆ ನುಡಿ ಪೊಲೀಸರಲ್ಲಿ ಅನುಮಾನ ಮೂಡಿಸಿದೆ. ಹೀಗಾಗಿ ಕರೆದು ವಿಚಾರಣೆ ನಡೆಸಿದಾಗ ನಿತ್ಯಾ ಸತ್ಯ ಬಿಚ್ಚಿಟ್ಟಿದ್ದಾಳೆ. ನಿತ್ಯಾಳಿಗೆ ರಾಘವೇಂದ್ರ ಅನ್ನುವ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧವಿತ್ತು. ಇದಕ್ಕೆ ಗಂಡ ಪ್ರವೀಣ ಅಡ್ಡಿಯಾಗಿದೆ. ಈ ಕಾರಣದಿಂದ ನಿತ್ಯಾ ಮತ್ತು ರಾಘವೇಂದ್ರ ಸೇರಿ ಪ್ರವೀಣನ ಕೊಲೆ ಮಾಡಲು ನಿರ್ಧರಿಸಿದ್ದಾರೆ.
ಅದರಂತೆ ಪ್ರವೀಣ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಿತ್ಯಾ ಮತ್ತು ರಾಘವೇಂದ್ರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ನಿತ್ಯಾಳಿಗೆ ಕರೆ ಮಾಡಿದ ಪ್ರವೀಣ ಅಪಘಾತವಾಗಿರುವ ಬಗ್ಗೆ ಹೇಳಿದ್ದಾನೆ. ಗಂಡ ಸತ್ತಿಲ್ಲ ಅನ್ನುವುದನ್ನು ಅರಿತ ನಿತ್ಯಾ ಮತ್ತೆ ರಾಘವೇಂದ್ರನ ಜೊತೆಗೆ ಬಂದು ಮತ್ತೊಂದು ಸುತ್ತು ಕಾರಿನಲ್ಲಿ ಗುದ್ದಿಸಿದ್ದಾಳೆ. ಗಂಡ ಉಸಿರು ಚೆಲ್ಲಿರುವುದು ಖಚಿತವಾದ ಬಳಿಕವೇ ಅಲ್ಲಿಂದ ಪರಾರಿಯಾಗಿದ್ದಾರೆ ಅನ್ನುವುದು ತನಿಖೆಯಿಂದ ಗೊತ್ತಾಗಿದೆ.
ಪಾಪ ಪತ್ನಿಗೆ ಕರೆ ಮಾಡುವ ಬದಲು ಬೇರೆ ಯಾರಿಗಾದ್ರೂ ಕರೆ ಮಾಡಿರುತ್ತಿದ್ರೆ ಪ್ರವೀಣ ಬದುಕಿ ಬರುವ ಸಾಧ್ಯತೆಗಳಾದ್ರು ಇತ್ತು.
Discussion about this post