ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ( Monkeypox ) ಪ್ರಕರಣ ದೃಢಪಟ್ಟಿದೆ. ( Monkeypox case reported in Kerala ) ಈ ಬಾರಿ ಕೇರಳದಲ್ಲಿ ಮಂಕಿ ಪಾಕ್ಸ್ ಪತ್ತೆಯಾಗಿರುವುದು ನೇರವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎದೆ ಬಡಿತ ಹೆಚ್ಚಿಸಿದೆ.
ಮಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು ಅನ್ನುವ ಹೊತ್ತಿಗೆ ಮಂಕಿಪಾಕ್ಸ್ ಅನ್ನುವ ಮಹಾಮಾರಿ ಅಬ್ಬರಿಸುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಸಾಕಷ್ಟು ತೊಂದರೆ ಕೊಟ್ಟಿರುವ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು.
ಇದೀಗ ಎರಡನೇ ಪ್ರಕರಣವೂ ಕೇರಳದಿಂದಲೇ ವರದಿಯಾಗಿದೆ. ಈ ಬಾರಿ ಪತ್ತೆಯಾದ ಸೋಂಕಿತ ದುಬೈನಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ದುಬೈನಿಂದ ಜುಲೈ 13 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ 31 ವರ್ಷದ ಯುವಕನಿಗೆ ಇತ್ತೀಚೆಗೆ ರೋಗಲಕ್ಷಣ ಕಾಣಿಸಿಕೊಂಡಿತ್ತು.
ಇದನ್ನೂ ಓದಿ : whatsapp message : ವಾಟ್ಸಾಪ್ ಮೆಸೇಜ್ ಮಾಡುವುದನ್ನು ನಿಲ್ಲಿಸಿದ ವಿವಾಹಿತ ಮಹಿಳೆಯ ಹತ್ಯೆಗೆ ಯತ್ನ
ಇದಾದ ಬಳಿಕ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿಗೆ ತಪಾಸಣೆಗೆಂದು ಯುವಕ ತೆರಳಿದ್ದ. ರೋಗ ಲಕ್ಷಣ ನೋಡಿದ ವೈದ್ಯರು ಮುಂಜಾಗ್ರತೆ ವಹಿಸಿದ್ದಾರೆ. ಇದೀಗ ವಿಶೇಷ ವಾರ್ಡಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ದುಬೈನಿಂದ ಆಗಮಿಸಿದ ಸೋಂಕಿತ ಯುವಕನ ಜೊತೆ 191 ಪ್ರಯಾಣಿಕರಿದ್ದರು. ಈ ಪೈಕಿ ದಕ್ಷಿಣ ಕನ್ನಡದ 15, ಉಡುಪಿ 6 ಹಾಗೂ ಕಾಸರಗೋಡಿನ 13 ಮತ್ತು ಕಣ್ಣೂರಿನ ಒಬ್ಬರಿದ್ದರು. ಜೊತೆಗೆ ವಿಮಾನ ನಿಲ್ದಾಣದ ವಿವಿಧ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಯುವಕನ ನೇರ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಇದೀಗ ಎಲ್ಲರನ್ನೂ ಐಸೋಲೇಷನ್ ಗೆ ಒಳಗಾಗುವಂತೆ ಸೂಚಿಸಲಾಗಿದೆ.
NEET 2022 : ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪು ಬಿಚ್ಚಿ ಪರಿಶೀಲನೆ
ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ NEET 2022 ಪರೀಕ್ಷೆ ವೇಳೆ ಪರೀಕ್ಷಾ ಮೇಲ್ವಿಚಾರಕರು ನಡೆದುಕೊಂಡ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ
ಭಾನುವಾರ ನಡೆದ ಮೆಡಿಕಲ್ ಪ್ರವೇಶ ಪರೀಕ್ಷೆ ( NEET 2022 ) 100ಕ್ಕೂ ಹೆಚ್ಚು ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಪರೀಕ್ಷಾ ಮೇಲ್ವಿಚಾರಕರು ಪರಿಶೀಲನೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪರೀಕ್ಷಾ ಮೇಲ್ವಿಚಾರಕರು ನಮ್ಮ ಮಕ್ಕಳನ್ನು ಅವಮಾನಿಸಿದ್ದಾರೆ ಎಂದು ಇದೀಗ ವಿದ್ಯಾರ್ಥಿನಿಯೊಬ್ಬರ ತಂದೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳನ್ನ ಮೆಟಲ್ ಡೆಟೆಕ್ಟರ್ನಲ್ಲಿ ಮೂಲಕ ಬಿಡುವಾಗ ಅಲರಾಂ ಬಂದಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳ ಒಳ ಉಡುಪುನ್ನೂ ಬಿಡದೆ ಪರೀಕ್ಷೆ ಮಾಡಲಾಗಿದೆ. ಕೆಲವು ವಿದ್ಯಾರ್ಥಿನಿಯರ ಬ್ರಾ ಹಾಗೂ ಅಂಡರ್ವೇರ್ ಬಿಚ್ಚಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅವಮಾನ ಎಸಗಲಾಗಿದೆ. NEET ಪರೀಕ್ಷೆಯ ಡ್ರೆಸ್ಕೋಡ್ ಪ್ರಕಾರವೇ ಬಂದರೂ ಪರೀಕ್ಷಾ ಕೊಠಡಿ ಪ್ರವೇಶಿಸಲು ಬಿಡದೆ ಅವಮಾನ ಮಾಡಲಾಗಿದೆ. ಬಿಚ್ಚಿಸಿದ ಬಟ್ಟೆಗಳನ್ನ ಸಾಮೂಹಿಕವಾಗಿ ಸ್ಟೋರ್ ರೂಮಿನಲ್ಲಿ ಇಡಲಾಗಿದೆ ಎಂದು ದೂರಲಾಗಿದೆ. ಈ ಅವಮಾನದಿಂದ ಪರೀಕ್ಷೆಯನ್ನ ಬರೆಯಲಿಲ್ಲ ಎಂದು ಹೇಳಲಾಗಿದೆ.
ಈ ಸಂಬಂಧ ಡಿವೈಎಸ್ಪಿ ಮಟ್ಟದ ಅಧಿಕಾರಿಗೆ ಪೋಷಕರು ದೂರು ಸಲ್ಲಿಸಿದ್ದು, ನನ್ನ ಮಗಳು ಎಂದಿಗೂ ನೀಟ್ ಪರೀಕ್ಷೆ ಬರೆಯಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಹಿಜಾಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿನಿಯನ್ನೂ ಪರೀಕ್ಷಾ ಕೊಠಡಿಯೊಳಗೆ ಬಿಟ್ಟಿಲ್ಲವಂತೆ. ಹಿಜಾಬ್ ತೆಗೆದ ನಂತರವೇ ಆಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಹಾಗೇ ನೋಡಿದರೆ ಪರೀಕ್ಷಾ ಸಂದರ್ಭದ ಡ್ರೆಸ್ ಕೋಡ್ ವಿವಾದ ಕೇರಳದಲ್ಲಿ ಹೊಸದೇನಲ್ಲ. 2017ರಲ್ಲಿ ಕಣ್ಣೂರಿನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. CBSE ಪರೀಕ್ಷೆ ವೇಳೆಯೂ ಇದೇ ರೀತಿಯ ಘಟನೆ ನಡೆದಿತ್ತು.
Discussion about this post