ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಗಳ ವಿವಿಧ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಏರಿಕೆ ಕಂಡಿದೆ. ಅಪಾರ್ಟ್ ಮೆಂಟ್, ಮನೆ, ಕಚೇರಿ ಎಂದು ಸೆಕ್ಯೂರಿಟಿ ಕೆಲಸಕ್ಕೆ ಬರುವ ಇವರು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಲಾರಂಭಿಸಿದ್ದಾರೆ. ಹೀಗಾಗಿ ಹಗಲಲ್ಲಿ ಸಲಾಂ ಸಾಬ್ ಎಂದು ಸೆಲ್ಯೂಟ್ ಹೊಡೆದು ರಾತ್ರಿಯಾದ್ರೆ ಅಪಾರ್ಟ್ ಮೆಂಟ್ ಲೂಟಿ ಮಾಡುತ್ತಿದ್ದ ಖದೀಮರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನೇಪಾಳಿ ಮೂಲದ ಕರಣ್ ಬಿಸ್ತಾ, ರಾಜು ಜೀವನ್, ಮುಂಬೈನ ಗೋರಖ್ ಕಾಲು ಮತ್ತು ಹಿಕ್ಮತ್ ಶಾಹಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 9.3 ಲಕ್ಷ ರೂಪಾಯಿ ನಗದು ಹಾಗೂ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಅನ್ನ ಹಾಕಿದ ಮನೆಗೆ ಕನ್ನ : ಉದ್ಯಮಿ ಮನೆಯಿಂದ ಲಕ್ಷ ಲಕ್ಷ ದೋಚಿದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್
ಕರಣ್ ಬಿಸ್ತಾ ಮತ್ತು ರಾಜು ದೀವನ್ ನಗರದ ಅಪಾರ್ಟ್ ಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದರು. ಅಪಾರ್ಟ್ ಮೆಂಟ್ ನ ನಿವಾಸಿಗಳು ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗ್ತಾರೆ ಎಂದು ಗೊತ್ತಾದ ತಕ್ಷಣ ಮುಂಬೈ ಹಾಗೂ ಇತರ ರಾಜ್ಯಗಳಲ್ಲಿರುವ ನೇಪಾಳಿ ಗೆಳೆಯರನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಮೊಬೈಲ್ ನೆಟ್ ವರ್ಕ್ ಸುಳಿವು ಸಿಗಬಾರದೆಂದು ಫೇಸ್ ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸುತ್ತಿದ್ದರು. ಬಳಿಕ ಅವರಿಂದಲೇ ಕಳ್ಳತನ ಮಾಡಿಸುತ್ತಿದ್ದರು,
ಇದಾದ ಬಳಿಕ ಸಹಚರರು ಸೇಫ್ ಜಾಗಕ್ಕೆ ತಲುಪಿದ ಬೆನ್ನಲ್ಲೇ ಮನೆ ಮಾಲೀಕರಿಗೆ ಕರೆ ಮಾಡಿ ಮನೆ ಕಳ್ಳತನವಾಗಿರುವ ವಿಷಯ ತಿಳಿಸುತ್ತಿದ್ದರು. ಬಳಿಕ ಅನುಮಾನ ಬಾರದಂತೆ ವರ್ತಿಸಿ ಅದೇ ಜಾಗದಲ್ಲಿ ಕೆಲಸ ಮುಂದುವರಿಸುತ್ತಿದ್ದರು. ಹೀಗೆ ನಗರದಲ್ಲಿ ಹೆಚ್ಚಾಗಿದ್ದ ಮನೆಗಳ್ಳತನ ಪೊಲೀಸರ ನಿದ್ದೆಗೆಡಿಸಿತ್ತು.
ಈ ನಡುವೆ ಕೆಲ ದಿನಗಳ ಹಿಂದೆ ಹೊರಮಾವು ಕೋಕನೆಟ್ ಗ್ರೋ ಬಡಾವಣೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ರಾಮಚಂದ್ರ ರೆಡ್ಡಿ ಅನ್ನುವವರು ತಮ್ಮ ಸಂಬಂಧಿಕರ ಸಾವಿನ ಹಿನ್ನಲೆಯಲ್ಲಿ ಆಂಧ್ರದ ನೆಲ್ಲೂರಿಗೆ ತೆರಳಿದ್ದರು. ಈ ವೇಳೆ ಇದೇ ಗ್ಯಾಂಗ್ ರಾಮಚಂದ್ರ ಅವರ ಮನೆಯನ್ನು ದೋಚಿತ್ತು. ಇದಾದ ಬಳಿಕ ಕರಣ್ ಬಿಸ್ತಾ ಮನೆ ಬಾಗಿಲು ತೆರೆದಿರುವ ಮಾಹಿತಿ ನೀಡಿದ್ದ. ಆದರೆ ಖದೀಮರ ಅದೃಷ್ಟ ಕೈ ಕೊಟ್ಟಿತ್ತು.
ಇದನ್ನೂ ಓದಿ : ಫ್ಲ್ಯಾಟ್ ನಿವಾಸಿಯನ್ನೇ ಹತ್ಯೆ ಮಾಡಿದ ಸೆಕ್ಯೂರಿಟಿ ಗಾರ್ಡ್
ಈ ವೇಳೆ ಕಾರ್ಯಾಚರಣೆಗಿಳಿದ ಪೊಲೀಸರು ಕೆ ಆರ್ ಪುರಂ ನಲ್ಲಿ ಬಸ್ ಹತ್ತಲು ಸಿದ್ದವಾಗಿದ್ದ ಕರಣ್ ಬಿಸ್ವಾ ಮತ್ತು ರಾಜುವನ್ನು ಬಂಧಿಸಿದ್ದಾರೆ. ಇವರು ನೀಡಿದ ಮಾಹಿತಿಯಂತೆ ಉಳಿದ ಮೂವರು ಆರೋಪಿಗಳನ್ನು ರೈಲಿನಲ್ಲಿ ಮುಂಬೈಗೆ ತೆರಳುತಿದ್ದ ವೇಳೆ ಬಂಧಿಸಲಾಗಿದೆ.
ಸಿಎಂ ಬೊಮ್ಮಾಯಿಗೆ ಮಂಡಿ ನೋವು : ಅಮೆರಿಕಾದಲ್ಲಿ ಚಿಕಿತ್ಸೆ : cm ಸ್ಥಾನಕ್ಕೆ ರಾಜೀನಾಮೆ ವದಂತಿ
ಬೆಂಗಳೂರು : ಸಚಿವ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಅನ್ನುವ ಈಶ್ವರಪ್ಪ ಹೇಳಿಕೆಯ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡ್ತಾರೆ ಅನ್ನುವ ವದಂತಿ ಹರಡಿದೆ. ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ಸಲುವಾಗಿ ಅಮೆರಿಕಾಗೆ ತೆರಳುತ್ತಾರೆ. ಅಮೆರಿಕಾದಲ್ಲೇ ಆಪರೇಷನ್ ಮಾಡಿಕೊಳ್ತಾರೆ ಅನ್ನುವುದು ವದಂತಿ.
ಆಪರೇಷನ್ ಬಳಿಕ 2 ರಿಂದ 3 ತಿಂಗಳ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಅನ್ನುವುದು ರಾಜಕೀಯ ಪಡಸಾಲೆಯ ಗುಸುಗುಸು. ಆದರೆ ಈ ಸುದ್ದಿಯನ್ನು ಬೊಮ್ಮಾಯಿಯವರ ಆಪ್ತಿವಲಯ ಅಲ್ಲಗಳೆದಿದೆ. ಇವೆಲ್ಲಾ ಮಂಡಿನೋವಿನ ಕಾರಣಕ್ಕೆ ಹಿತಶತ್ರುಗಳು ಕಟ್ಟಿದ ರೆಕ್ಕೆಪುಕ್ಕ ಅಂದಿದ್ದಾರೆ.
ಬೊಮ್ಮಾಯಿಯವರಿಗೆ ಮಂಡಿನೋವು ಇರುವುದು ಹೌದು. ಅದಕ್ಕೆ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದಾರೆ. ಪ್ರಸ್ತುತ ಆಪರೇಷನ್ ಅಗತ್ಯವಿಲ್ಲ ಅಂತಾ ವೈದ್ಯರು ಹೇಳಿದ್ದಾರೆ. ಒಂದು ವೇಳೆ ಆಪರೇಷನ್ ಅಗತ್ಯ ಬಂದರೂ ರಾಜ್ಯದ ಆಸ್ಪತ್ರೆಯಲ್ಲೇ ದಾಖಲಾಗುತ್ತಾರೆ. ತಪ್ಪಿದ್ರೆ ದೇಶದ ಬೇರೆ ಆಸ್ಪತ್ರೆಗಳಿಗೆ ತೆರಳಬಹುದು. ಹಾಗಂತ ವಿದೇಶಕ್ಕೆ ತೆರಳುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ. ಈ ನಡುವೆ ಮಂಡಿನೋವಿನ ಸಲುವಾಗಿ ಒಂದಿಷ್ಟು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಅನ್ನಲಾಗಿದೆ. ಆಧರೆ ಗೃಹ ಪವೇಶ, ಮದುವೆ, ಫಿಲ್ಮಂ ಟ್ರೇಲರ್ ರಿಲೀಸ್ ಹೀಗೆ ವಿವಿಧ ಕಾರ್ಯಕ್ರಮಗಳ ಒತ್ತಡದಲ್ಲಿರುವ ಸಿಎಂ ಅವರಿಗೆ ಕಾರ್ಯದ ಒತ್ತಡವಿದೆ. ಹೀಗಾಗಿ ಅಧಿವೇಶನದ ಬಳಿಕ ಅವರು ವಿಶ್ರಾಂತಿಗೆ ತೆರಳುವ ಸಾಧ್ಯತೆಗಳಿದೆ.
ಇದನ್ನೂ ಓದಿ : ಪಾಲಂ ಏರ್ ಬೇಸ್ ತಲುಪಿದ ವೀರಯೋಧರ ಪಾರ್ಥಿವ ಶರೀರ : ಪ್ರಧಾನಿ ನರೇಂದ್ರ ಮೋದಿಯವರಿಂದ ಅಂತಿಮ ನಮನ
Discussion about this post