ಬೆಂಗಳೂರು : ಅಪಾರ್ಟ್ ಮೆಂಟ್ ಕಾವಲುಗಾರನೊಬ್ಬ, ಅಪಾರ್ಟ್ ಮೆಂಟ್ ನಿವಾಸಿಯನ್ನೇ ಹತ್ಯೆ ಮಾಡಿದ ಘಟನೆ HAL ನ ACS layout ಪದ್ಮಾ ಆಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 65 ವರ್ಷದ ಭಾಸ್ಕರ ರೆಡ್ಡಿ ಎಂದು ಗುರುತಿಸಲಾಗಿದೆ.
ಪದ್ಮಾ ಆಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಬಸಂತ್ ಮದ್ಯ ಸೇವಿಸಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಭಾಸ್ಕರ್ ರೆಡ್ಡಿ ಬುದ್ದಿ ಮಾತು ಹೇಳಿದ್ದರು. ಆದರೆ ಬಸಂತ್ ಬಾಗಿರಲಿಲ್ಲ. ಹೀಗಾಗಿ ಬುಧವಾರ ಮತ್ತೆ ಬಸಂತ್ ಗೆ ಎಚ್ಚರಿಕೆ ನೀಡಿದ ಭಾಸ್ಕರ್ ರೆಡ್ಡಿ, ಹೀಗೆ ಕುಡಿದು ಕೆಲಸ ಮಾಡುವುದಾದ್ರೆ ನಿನ್ನ ಕೆಲಸದಿಂದ ತೆಗೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡೆದು, ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ರೆಡ್ಡಿ ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ರೆಡ್ಡಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ತೀವ್ರ ರಕಸ್ತಸ್ರಾವದ ಕಾರಣ ಅಷ್ಟು ಹೊತ್ತಿಗೆ ಅವರು ಮೃತಪಟ್ಟಿದ್ದರು. ಇದೀಗ ಆರೋಪಿಯನ್ನು HAL ಪೊಲೀಸರು ಬಂಧಿಸಿದ್ದಾರೆ.
ಭಾಸ್ಕರ ರೆಡ್ಡಿಯವರು ಕಳೆದ 2 ವರ್ಷಗಳಿಂದ ತಮ್ಮ ಪುತ್ರನ ಕುಟುಂಬದ ಜೊತೆ ಈ ಆಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರೆ. ಪದ್ಮಾ ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 9 ಫ್ಲ್ಯಾಟ್ ಗಳಿದ್ದು, ಎರಡನೇ ಮಹಡಿಯಲ್ಲಿ ಭಾಸ್ಕರ್ ರೆಡ್ಡಿ ವಾಸವಾಗಿದ್ದರು.
Discussion about this post