ನವದೆಹಲಿ : ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಆರೋಪಿ ಹಾಗೂ ಮೃತ ಯುವತಿ ಅಕ್ಕ ಪಕ್ಕದ ಮನೆಯವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಪಾಗಲ್ ಪ್ರೇಮಿ ಅಂಕಿತ್ ಗಬ್ಬ (25) ಮೃತ ಯುವತಿ ಡಾಲಿಯನ್ನು ಪೀಡಿಸುತ್ತಿದ್ದನಂತೆ. ಆದರೆ ಯುವಕನ ವರ್ತನೆ ಸರಿ ಇಲ್ಲದ ಕಾರಣ ಯುವತಿ ಪ್ರೀತಿಗೆ ಸಮ್ಮಿತಿ ಸೂಚಿಸಿರಲಿಲ್ಲ. ಮಾತ್ರವಲ್ಲದೆ ಮತ್ತೊಬ್ಬ ಯುವಕನ ಜೊತೆಗೆ ಸಲಿಗೆಯಿಂದ ಓಡಾಡುತ್ತಿದ್ದಳು. ಇದು ಗಬ್ಬನ ನೆಮ್ಮದಿ ಕೆಡಿಸಿತ್ತು.
ಈ ನಡುವೆ ಸೋಮವಾರ ರಾತ್ರಿ 11 ಗಂಟೆಗೆ ಮನೆಯಿಂದ ಹೊರಗೆ ಬಂದ ಯುವತಿ ಡಾಲಿಯನ್ನು ಅಡ್ಡ ಹಾಕಿದ ಅಂಕಿತ್ ಗಬ್ಬ ಹಾಗೂ ಆತನ ಗ್ಯಾಂಗ್ ಪ್ರಿಯಕರನ ಎದುರು ಯುವತಿಯ ತಲೆಗೆ ಗನ್ ಇಟ್ಟು ಬೆದರಿಸಿ, 7 ಬಾರಿ ಇರಿದು ಕೊಲೆ ಮಾಡಿದೆ.
ಈ ನಡುವೆ ಪ್ರಕರಣದ ಕುರಿತಂತೆ ಪೊಲೀಸರಿಗೆ ಮತ್ತಷ್ಟು ಮಾಹಿತಿಗಳು ಲಭಿಸಿದ್ದು ಮೃತ ಹುಡುಗಿಯನ್ನು Dolly Babbar (23) ಎಂದು ಗುರುತಿಸಲಾಗಿದೆ. freelance event organiser ಕೆಲಸ ಮಾಡಿಕೊಂಡಿದ್ದ ಈಕೆ ಸೋಮವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಗೆಳತಿಯ ಹುಟ್ಟಿದ ಹಬ್ಬವಿದೆ ಎಂದು ಮನೆಯಿಂದ ಹೊರಗಡೆ ಹೋಗಿದ್ದಳು.
Watch: Woman #stabbed to death allegedly by jilted lover in #Delhi pic.twitter.com/gdXPfsQryl
— TOI Delhi (@TOIDelhi) October 20, 2021
ಇದಾದ ಕೆಲವೇ ಗಂಟೆಗಳಲ್ಲಿ ಮನೆಯಿಂದ 300 ಮೀಟರ್ ಅಡಿಯಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಮನೆಯಿಂದ ಹೊರಗೆ ಹೋದವಳನ್ನು ಹುಡುಗರ ಗ್ಯಾಂಗ್ ಅಡ್ಡ ಹಾಕಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಯ ಸಂದರ್ಭದಲ್ಲಿ ಯುವತಿಯ ಹಾಲಿ ಪ್ರಿಯತಮನೂ ಜೊತೆಗಿದ್ದ ಅನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಜೊತೆಗೆ ಡಾಲಿ ಮನೆಯವರಿಗೆ ಕರೆ ಮಾಡಿದ್ದ ಪ್ರಿಯಕರ, ಡಾಲಿ ಅಪಾಯದಲ್ಲಿರುವುದನ್ನು ಆಕೆಯ ಅಣ್ಣನಿಗೆ ತಿಳಿಸಿದ್ದಾನೆ. ಇದಾದ ಕೆಲ ಕ್ಷಣಗಳಲ್ಲಿ ಆಕೆಯ ಫೋನ್ ಸೈಲೆಂಟ್ ಆಗಿತ್ತು. ಏನಾಯ್ತು ಎಂದು ಯೋಚಿಸುವಷ್ಟರಲ್ಲಿ ಮನೆ ಬಾಗಿಲಿಗೆ ಪೊಲೀಸರು ಬಂದಿದ್ದರು.
Discussion about this post