ಪ್ರೀತಿಗಾಗಿ ಪೀಡಿಸುತ್ತಿದ್ದ ವಿವಾಹಿತನೊಬ್ಬನ ಕಿರುಕುಳ ಸಹಿಸಲಾಗದೆ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ತಲ್ಲಡಾ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕುಸುಮರಾಜು ವರ್ಷಿತಾ (17) ಎಂದು ಗುರುತಿಸಲಾಗಿದೆ. ತಂದೆಯ ಸಾವಿನ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ನೆರವಾಗುವ ಸಲುವಾಗಿ ವರ್ಷಿತಾ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತಿರವೂರ್ ಮಂಡಲದ ಮುನುಕೋಲಾ ನಿವಾಸಿ ಮಲ್ಲವರಪು ಮಧುಕುಮಾರ್ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ.
ಮಧುಕುಮಾರ್ ಕಿರುಕುಳ ಹೆಚ್ಚಾದ ಕಾರಣ ಮತ್ತೊಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಕಿರುಕುಳ ನಿಲ್ಲಲಿಲ್ಲ. ಆಸೆಗಳನ್ನು ಪೂರೈಸುವಂತೆ ಕಾಡಲಾರಂಭಿಸಿದ. ಪ್ರೀತಿಗೆ ಒಪ್ಪದೆ ಹೋದ ವೇಳೆ ನಮ್ಮಿಬ್ಬರ ನಡುವೆಯ ಮಾತುಕತೆಯ ಆಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಮನನೊಂದ ವರ್ಷಿತಾ ಆತ್ಮಹತ್ಯೆ ಶರಣಾಗಿದ್ದಾಳೆ.
Discussion about this post