ಕೊಚ್ಚಿ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಪ್ರವೀಣ್ 2019ರಲ್ಲಿ ಆತ ಕೇರಳದ ಚೊಟ್ಟನಿಕ್ಕರ ದೇವಾಲಯದಲ್ಲಿ ಕೆಲಸಕ್ಕಿದ್ದ. ಆ ಸಂದರ್ಭದಲ್ಲಿ ಓರ್ವ ಯುವತಿಯೊಂದಿಗೆ ಆತ ಪ್ರೀತಿಯಲ್ಲಿ ಬಿದ್ದಿದ್ದ. ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಆಕೆಯನ್ನು ನಂಬಿ, ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಇದ್ದಿದ್ದು ಕೆಲ ಕಾಲ ಒಂದೇ ಮನೆಯಲ್ಲಿ ವಾಸವಿದ್ದರು.
ಒಂದಿಷ್ಟು ದಿನಗಳ ಬಳಿಕ ಆಕೆ ವೈದ್ಯಯಲ್ಲ, ನಿರುದ್ಯೋಗಿ ಅನ್ನುವುದು ಪ್ರವೀಣನಿಗೆ ಗೊತ್ತಾಗಿದೆ. ಹೀಗಾಗಿ ಇಬ್ಬರ ನಡುವೆ ಜಗಳವಾಗಿದೆ. ಆದರೆ ಅಷ್ಟು ಹೊತ್ತಿಗೆ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಇದಾದ ಬಳಿಕ ಪ್ರವೀಣ ಕೇರಳದಿಂದ ಕಾಲ್ಕಿತ್ತಿದ್ದ. ಈ ನಡುವೆ ಪ್ರವೀಣನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಕ್ಕನಾಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಪ್ರವೀಣನ ಪತ್ತೆಯಿರಲಿಲ್ಲ.
ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಬಲೆ ಬೀಸಿದ್ದರೂ ಸಾಧ್ಯವಾಗಿರಲಿಲ್ಲ. ಈ ನಡುವೆ ಆರೋಪಿ ಪ್ರವೀಣ ತನ್ನ ಕಾರನ್ನು OLX ನಲ್ಲಿ ಮಾರಾಟಕ್ಕಿಟ್ಟಿದ್ದಾನೆ ಅನ್ನುವ ಸಂಗತಿ ಪೊಲೀಸರಿಗೆ ಗೊತ್ತಾಗಿದೆ. ಗ್ರಾಹಕರ ಸೋಗಿನಲ್ಲಿ ವ್ಯವಹಾರ ಕುದುರಿಸಿದ ಪೊಲೀಸರು, ಮಫ್ತಿಯಲ್ಲಿ ಕಾರು ಕೊಳ್ಳುವ ನೆಪದಲ್ಲಿ ಆರೋಪಿ ಹೇಳಿದ್ದ ಸ್ಥಳಕ್ಕೆ ಬಂದು ಪ್ರವೀಣನನ್ನು ಬಂಧಿಸಿದ್ದಾರೆ.
ಅಂದ ಹಾಗೇ ಪ್ರವೀಣನನ ವಿರುದ್ಧ ದೂರು ನೀಡಿದ ಮಹಿಳೆ ಇದೀಗ ಎರಡು ಮಕ್ಕಳ ತಾಯಿಯಂತೆ.
Discussion about this post