ಮಂಗಳೂರು : ಕಾಡು ಹಂದಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೂಡಬಿದರೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಡಬಿದರೆ ತಾಲೂಕು ಮಿತ್ತಬೈಲ್ ನಿವಾಸಿ ಜಾನ್.ಸಿ. ಮೆನೇಜಸ್, ಕಲ್ಲಮುಂಡೂರು ಗ್ರಾಮದ ಶ್ರೀನಿವಾಸ, ಗುರುಪ್ರಸಾದ್, ಅಜೇಯ್, ಸನತ್, ಗಣೇಶ್ ಹಾಗೂ ಬೆಳುವಾಯಿ ಗ್ರಾಮದ ಜೋಯೆಲ್ ಅನಿಲ್ ಡಿ ಸೋಜಾ, ಪಾಲಡ್ಕ ಗ್ರಾಮದ ಹರೀಶ್ ಪೂಜಾರಿ, ನೋಣಯ್ಯ, ಕಡಂದಲೆ ಗ್ರಾಮದ ಮೋಹನ್ ಗೌಡ, ರಮೇಶ್, ಕಾರ್ಕಳ ತಾಲೂಕು ಬೋಳ ಗ್ರಾಮದ ವಿನಯ್ ಪೂಜಾರಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸಾಯಿಸಿದ 2 ಹಂದಿ, 4 ಸಿಂಗಲ್ ಬ್ಯಾರೇಲ್ ಗನ್, 2 ಬಂದೂಕಿನ ತೋಟೆ, ಹಂದಿ ಹಿಡಿಯಲು ಉಪಯೋಗಿಸಿದ ನಾಲ್ಕು ಬಲೆ, 1 ಕಬ್ಬಿಣ ಚಯರ್, 3 ಕತ್ತಿ, 3 ದೊಡ್ಡ ಚೂರಿ, 1 ಗ್ಯಾಸ್ ಸಿಡಿಂಡರ್, ಹಂದಿ ಚರ್ಮ ಸುಡಲು ಬಳಸಿದ ಗ್ಯಾಸ್ ಬರ್ನರ್, 2 ಮರದ ತುಂಡು, 1 ಕಬ್ಬಿಣದ ಟೇಬಲ್, 2 ಒಮಿನಿ ಕಾರು ಹಾಗೂ 12 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಕೃಷಿ ನಾಶ ಮಾಡುವ ಕಾಡು ಪ್ರಾಣಿಗಳನ್ನು ಓಡಿಸಲು ಇವರು ಬಂದೂಕು ಪರವಾನಿಗೆ ಪಡೆದಿದ್ದರು. ಆದರೆ ಇದನ್ನೇ ಬಳಸಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂದು ಗೊತ್ತಾಗಿದೆ.
ಈ ನಡುವೆ ಈ ಕಂಡ ಮಾರಕಾಯುಧಗಳನ್ನು ಹೊಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಡಬಿದರೆ – ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಇವರ ಕೈವಾಡ ಇದೆಯೇ ಅನ್ನುವ ಕುರಿತಂತೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discussion about this post