ಬೆಂಗಳೂರು : ಕದಿರೇಶ್ ಬದುಕಿದ್ದಾಗಿನಿಂದಲೂ ಆತನಿಗೆ ಅತ್ಯಂತ ಆಪ್ತನಾಗಿದ್ದವನು ಪೀಟರ್. ಕದಿರೇಶ್ ಸತ್ತ ಬಳಿಕ ಆತನ ಪತ್ನಿ ರೇಖಾ ಕದಿರೇಶ್ ಜೊತೆಗೂ ಆಪ್ತ ಸಂಬಂಧ ಮುಂದುವರಿಸಿದ್ದ. ಆದ್ರೆ, ಕಸ ವಿಲೇವಾರಿ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ರೇಖಾ ಪೀಟರ್ ಗೆ ಸಹಾಯ ಮಾಡಿರಲಿಲ್ಲ. ಹೀಗಾಗಿ ಕಸದ ಗುತ್ತಿಗೆ ಕೈ ತಪ್ಪಿ ಪೀಟರ್ ಹಣಕಾಸು ಸಮಸ್ಯೆಗೆ ಸಿಲುಕಿದ್ದ. ಅಷ್ಟೇ ಅಲ್ಲದೆ ಪೀಟರ್ ನಡೆಸುತ್ತಿದ್ದ ಗಾಂಜಾ ವ್ಯವಹಾರ ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ರೇಖಾ ಬೆಂಬಲಿಸುತ್ತಿರಲಿಲ್ಲ. ಇದರಿಂದ ರೇಖಾ ವಿರುದ್ಧ ಪೀಟರ್ ಒಳಗೊಳಗೆ ದ್ವೇಷ ಇರಿಸಿಕೊಂಡಿದ್ದ.
ಇದನ್ನೇ ಮಾಲಾ ಮತ್ತು ಆಕೆಯ ಪುತ್ರ ಅರುಳ್ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡ್ರು, ಪೀಟರ್ ತಲೆಗೆ ಹುಳ ಬಿಟ್ಟು ಕೊಲೆ ಮಾಡಿಸುವಲ್ಲಿ ಸಕ್ಸಸ್ ಆಗಿದ್ದಾರೆ ಅನ್ನೋದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ..
ಈ ನಡುವೆ ಪೀಟರ್ ಈ ಹಿಂದೆ ರೇಖಾ ಕದಿರೇಶ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಅನ್ನುವುದು ಕೂಡಾ ಗೊತ್ತಾಗಿದೆ. ಯಾವಾಗ ಸಹೋದರನಂತೆ ನೋಡಿಕೊಳ್ಳುತ್ತಿದ್ದ ಕದಿರೇಶ್ ಕೊಲೆಯಾಯ್ತೋ ರೇಖಾ ಹಾಗೂ ಪೀಟರ್ ಸಂಬಂಧ ಹಳಸಿತ್ತು. ಇದರಿಂದ ವ್ಯಗ್ರನಾಗಿದ್ದ ಪೀಟರ್, ರೇಖಾ ಕದಿರೇಶ್ ಅವರಿಗೆ ಅಕ್ರಮ ಸಂಬಂಧವಿದೆ. ಅವರ ಪಿಎ ಜೊತೆಗೆ ಅವರು ಸುತ್ತಾಡುತ್ತಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿದ್ದ. ಈ ವಿಷಯ ಗೊತ್ತಾದ ರೇಖಾ ಒಂದ್ಸಲ ಪೀಟರ್ ಗೆ ಚಪ್ಪಲಿ ಸೇವೆ ಕೂಡಾ ಮಾಡಿದ್ದರಂತೆ.
ಯಾವಾಗ ಪೀಟರ್ ಹಾಗೂ ರೇಖಾ ಸಂಬಂಧ ಹಳಸಿದೇ ಅಂತಾ ಗೊತ್ತಾಯ್ತೋ, ತೆರೆಗೆ ಎಂಟ್ರಿ ಕೊಟ್ಟವಳು ಮಾಲಾ. ಮಗ ಅರುಳನ್ ಗಾಂಜಾ ಪ್ರಕರಣದಲ್ಲಿ ಜೈಲು ಸೇರುವಂತೆ ಮಾಡಿ, ಜೈಲಿನಲ್ಲಿ ಕದಿರೇಶ್ ಹತ್ಯೆ ಆರೋಪಿಗಳಾದ ವಿನಯ್ ಮತ್ತು ನವೀನ್ ಸ್ನೇಹ ಸಂಪಾದಿಸಿದ್ದಳು.
ಜೈಲಿನಿಂದ ಹೊರ ಬಂದವನೇ ಮೊದಲೇ ಪೀಟರ್ ಸಂಪರ್ಕ ಸಾಧಿಸಿ. ಕದಿರೇಶ್ ಹತ್ಯೆಯಲ್ಲಿ ರೇಖಾ ಕೈವಾಡವಿದೆ. ಇದೇ ಕಾರಣಕ್ಕೆ ನಿನ್ನನ್ನ ದೂರ ಮಾಡಿದ್ದಾಳೆ ಅಂತಾ ಕಥೆ ಕಟ್ಟಿ ಪೀಟರ್ ತಲೆ ಕೆಡಿಸಿದ್ದ. ಮಾಲಾ ಮತ್ತು ಅರುಳ್ ಇಬ್ಬರೂ ಸೇರಿಕೊಂಡು ಪೀಟರ್ ಮೈಂಡ್ ವಾಷ್ ಮಾಡಿ ರೇಖಾಳ ವಿರುದ್ಧ ಎತ್ತಿಕಟ್ಟಿದ್ದರೋ. ಕದಿರೇಶ್ ಆತ್ಮಕ್ಕೆ ಶಾಂತಿ ಕೊಡಿಸಲು ರೇಖಾಳ ಕೊಲೆ ಮಾಡುತ್ತೇನೆ ಎಂದು ಪೀಟರ್ ಶಪಥ ಮಾಡಿದ್ದ.
ಪೀಟರ್ ಜಾಗಕ್ಕೆ ಯಾವಾಗ ಮತ್ತೊಬ್ಬನನ್ನು ರೇಖಾ ನೇಮಿಸಿಕೊಂಡರೋ, ಮಾಲಾ ಹಾಗೂ ಆಕೆಯ ಮಗ ಹೇಳಿದ ಮಾತುಗಳು ಸತ್ಯ ಎಂದು ಪೀಟರ್ ನಂಬಿದ ಹೀಗಾಗಿಯೇ ಕದಿರೇಶ್ ಹತ್ಯೆ ರೂಮರ್ ನಿಂದ ರೇಖಾ ಹತ್ಯೆಗೆ ಸ್ಕೆಚ್ ಹಾಕಿದ ಪೀಟರ್ ಹುಡುಗರನ್ನು ಕಟ್ಟಿಕೊಂಡು ಹೊಡೆದು ಉರುಳಿಸಿದ್ದಾನೆ.
Discussion about this post