ಮೈಸೂರು : ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ತಂದೆ ಕೊಚ್ಚಿ ಕೊಂದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಮಗಳು ಗಾಯತ್ರಿ (18)ಯನ್ನು ತಂದೆ ಜಯಣ್ಣ ಕೊಲೆ ಮಾಡಿದ್ದಾನೆ.
ಮಾರಕಾಸ್ತ್ರಗಳಿಂದ ಮಗಳನ್ನು ಕೊಚ್ಚಿ ಕೊಂದಿದ್ದರಿಂದ ಗಾಯತ್ರಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದು, ಮಗಳನ್ನು ಕೊಂದ ನಂತರ ಜಯಣ್ಣ ಪೊಲೀಸರಿಗೆ ಶರಣಾಗಿದ್ದಾನೆ.
ಮಗಳು ಗಾಯತ್ರಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿರುವುದನ್ನು ತಿಳಿಸಿದ ಜಯರಾಮ್ ಮಗಳಿಗೆ ಬುದ್ದಿ ಮಾತು ಹೇಳಿದ್ದಾರೆ. ಮುಂದೆ ಆಗಬಹುದಾದ ಅನಾಹುತವನ್ನು ವಿವರಿಸಿದ್ದಾರೆ. ಹಿಂದೆ ಹೀಗೆ ದಾರಿ ತಪ್ಪಿದ ಮಂದಿ ಅನುಭವಿಸಿದ ಸಂಕಷ್ಟದ ಉದಾಹರಣೆ ಕೊಟ್ಟಿದ್ದಾರೆ. ಆದರೆ ತಂದೆಯ ಕಾಳಜಿ ಅರ್ಥಮಾಡಿಕೊಳ್ಳದ ಗಾಯತ್ರಿ ಮದುವೆಯಾದರೆ ಅನ್ಯಕೋಮಿನ ಯುವಕನನ್ನೇ ಎಂದು ಪಟ್ಟು ಹಿಡಿದಿದ್ದಾಳೆ
ಮನೆಯವರ ಮಾನ ಹೋಗುತ್ತದೆ ಬೇಡ ಅಂದರೂ ಕೇಳದ ಗಾಯತ್ರಿ ಆತನನ್ನು ಮದುವೆಯಾಗುತ್ತೇನೆ ಅನ್ನುತ್ತಿದ್ದಳು ಇಂದು ಜಯರಾಮ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಊಟ ಕೊಡಲು ಬಂದ ಮಗಳೊಂದಿಗೆ ಮತ್ತೆ ಪ್ರೀತಿಯ ವಿಚಾರ ಪ್ರಸ್ತಾಪಿಸಿ ಮನಪರಿವರ್ತನೆಗೆ ಯತ್ನಿಸಿದ್ದಾನೆ. ಆದರೆ ಮಗಳು ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇದರಿಂದ ಕೋಪಗೊಂಡ ಜಯರಾಮ್ ಮಗಳ ಮೇಲೆ ಮಚ್ಚು ಬೀಸಿದ್ದಾರೆ. ಆಗ ಗಾಯತ್ರಿ ಕೈ ಅಡ್ಡ ಕೊಟ್ಟಿದ್ದಾಳೆ. ಆಗ್ಲೂ ಕೋಪ ಇಳಿದಿರಲಿಲ್ಲ. ಹೀಗೆ ನೇರವಾಗಿ ಮಗಳ ಕುತ್ತಿಗೆಗೆ ಮಚ್ಚು ಬೀಸಿದ್ದಾರೆ. ಬಳಿಕ ಪಿರಿಯಾಪಟ್ಟಣ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಜಯರಾಮ್ ಗೆ ಮೂವರು ಹೆಣ್ಣು ಮಕ್ಕಳಿದ್ದು, ಮೊದಲನೆ ಮಗಳನ್ನು ಈಗಾಗಲೇ ಮದುವೆ ಮಾಡಿಕೊಡಲಾಗಿದೆ. ಎರಡೆನೆ ಮಗಳು ಮೈಸೂರಿನ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂರನೆಯವಳಾದ ಗಾಯತ್ರಿ ಪಿಯುಸಿ ವ್ಯಾಸಂಗವನ್ನು ಮಾಡುತ್ತಿದ್ದಾಗ ತಾಯಿ ಅನಾರೋಗ್ಯಕ್ಕೆ ಬಿದ್ದ ನಂತರ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲೀಯೇ ನಿಲ್ಲಿಸಿ ಮನೆಯಲ್ಲಿಯೇ ತಂದೆತಾಯಿಗಳೊಂದಿಗೆ ವಾಸವಾಗಿದ್ದಳು. ಇದರ ನಡುವೆ ಗಾಯತ್ರಿ ಒಂದುವರೆ ವರ್ಷದಿಂದ ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು.
Discussion about this post