ಬೆಂಗಳೂರು : ಮಗ ಗಲಾಟೆ ಮಾಡಿದ ಅನ್ನುವ ಕಾರಣಕ್ಕೆ ಮಲತಂದೆಯೊಬ್ಬ ಬೆಲ್ಟ್ ನಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಿನ್ನಮಂಗಲದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಕೊಲೆಗಾರ ಮಲತಂದೆಯನ್ನು ಕಾರ್ತಿಕ್ (23) ಎಂದು ಗುರುತಿಸಲಾಗಿದೆ.
ಬಾಲಕ ಹರ್ಷವರ್ಧನ್ ತಾಯಿ ನೇತ್ರಾ ಮೊದಲ ಗಂಡನನ್ನು ತೊರೆದು ಒಂದೂವರೆ ವರ್ಷವಾಗಿತ್ತು. ಬಳಿಕ ಪರಿಚಯವಾದ ಕಾರ್ತಿಕ್ ನನ್ನು ನೇತ್ರಾ ವಿವಾಹವಾಗಿ ಸಂಸಾರ ಪ್ರಾರಂಭಿಸಿದ್ದಳು.
ಈ ನಡುವೆ ಬಾಲಕ ಹರ್ಷವರ್ಧನ್ ಕಂಡ್ರೆ ಮಲತಂದೆ ಕಾರ್ತಿಕ್ ಉರಿದು ಬೀಳುತ್ತಿದ್ದನಂತೆ. ಶುಕ್ರವಾರ ಹರ್ಷವರ್ಧನ್ ಗಲಾಟೆ ಮಾಡುತ್ತಿದ್ದ. ಈ ಕಾರಣಕ್ಕೆ ಬೆಲ್ಟ್ ನಿಂದ ಕಾರ್ತಿಕ್ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದೀಗ ಆರೋಪಿಯನ್ನು ನೆಲಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Discussion about this post