ಬೆಂಗಳೂರು : ಜಗತ್ತಿನಲ್ಲಿ ಕೆಲ ವಿಚಿತ್ರ ಜನರಿರುತ್ತಾರೆ. ಅವರಿಗೆ ತಾವೇನು ಮಾಡುತ್ತೇವೆ ಅನ್ನುವುದರ ಅರಿವು ಇರೋದಿಲ್ಲ.ಸಂಬಂಧಗಳ ಬೆಲೆಯೇ ತಿಳಿದಿರುವುದಿಲ್ಲ. ಪ್ರಾಣಿಗಳಿಗಾದರೂ ಬುದ್ದಿ ಹೇಳಬಹುದು. ಇಂತಹ ಕಾಮಾಂಧರನ್ನು ಸರಿ ಮಾಡೋದು ಅಸಾಧ್ಯ,
ಹೀಗೆ ತಾಳಿ ಕಟ್ಟಿದ ಪತ್ನಿಯನ್ನು ಪೋರ್ನ್ ಸ್ಟಾರ್ ಮಾಡಲು ಹೋದ ಪತಿಯೊಬ್ಬನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡನ ಕಾಮದಾಹಕ್ಕೆ ಬೆಚ್ಚಿರುವ ಮಹಿಳೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ಊರೊಂದರ ನಿವಾಸಿಯಾಗಿದ್ದ 22 ವರ್ಷದ ಯುವತಿಯನ್ನು ಕಾಡುಗೋಡಿಯ ಶೀಗೆಹಳ್ಳಿ ನಿವಾಸಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳ ಕಾಲ ಎಲ್ಲವೂ ಚೆನ್ನಾಗಿತ್ತು. ನಾಲ್ಕನೇ ತಿಂಗಳಿಗೆ ಕಾಲಿಡುತ್ತಿದ್ದಂತೆ ಗಂಡನ ರಾಕ್ಷಸ ಅವತಾರ ಪ್ರಾರಂಭವಾಗಿತ್ತು. ಸಿಕ್ಕಾಪಟ್ಟೆ ಸೆಕ್ಸ್ ಸಿಡಿಯ ಹುಚ್ಚು ಬೆಳೆಸಿಕೊಂಡಿದ್ದ ಪತಿರಾಯ, ಅವೆಲ್ಲವನ್ನೂ ತನ್ನ ಪತ್ನಿಯ ಮೇಲೆ ಪ್ರಯೋಗಿಸಲಾರಂಭಿಸಿದ್ದ. ತಾನು ನೋಡಿದ ಅಶ್ಲೀಲ ವಿಡಿಯೋಗಳನ್ನು ಹೆಂಡತಿಗೆ ತೋರಿಸಿ ಹೀಗೆ ಮಾಡು ಅನ್ನುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ನಿರಾಕರಿಸಿದ್ರೆ ಹಲ್ಲೆ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಇಡೀ ರಾತ್ರಿ ಬೆತ್ತಲೆ ಮಲಗುವಂತೆ ಒತ್ತಾಯಿಸಿ ಹೊಡೆಯುತ್ತಿದ್ದ ಪಾಪಿ ಪತಿ, ನೀಲಿ ಚಿತ್ರಗಳಲ್ಲಿ ಇರುವಂತೆ ತನ್ನ ಮೂತ್ರ ಕುಡಿಯುವಂತೆ ಒತ್ತಾಯಿಸುತ್ತಿದ್ದ.
ಸಾಕಷ್ಟು ದಿನಗಳ ಕಾಲ ಈ ಹಿಂಸೆಯನ್ನು ಅನುಭವಿಸಿದ್ದ ಪತ್ನಿ, ಅತ್ತೆಯ ಬಳಿ ಸಂಕಷ್ಟ ಹೇಳಿಕೊಂಡರೆ ಮಗ ಕೇಳಿದಂತೆ ನೀನು ಕೇಳಬೇಕು ಎಂದು ಆದೇಶಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ವಿಚಿತ್ರ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಎರಡೂ ಮನೆಯವರು ಕೂತು ಚರ್ಚಿಸಿದ್ದರು. ಆದರೆ ಅದು ತೇಪೆ ಹಾಕುವ ಕಾರ್ಯ ಆಗಿತ್ತು ಹೊರತು, ಸಮಸ್ಯೆಗೆ ಶಾಶ್ವತ ಪರಿಹಾರವಾಗಿರಲಿಲ್ಲ. ಈ ನಿಟ್ಟಿನಲ್ಲಿ ನೊಂದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪಾಪಿ ಪತಿ ಮತ್ತು ಅತ್ತೆಗೆ ಶಿಕ್ಷೆ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
Discussion about this post