ಚೆನೈ : ಬಟ್ಟೆ ತೊಳೆಯಲು ಹೋದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಬಾಲಕಿಯರು ಸೇರಿ ಐದು ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುವಳ್ಳುರ್ನಲ್ಲಿ ನಡೆದಿದೆ. ದೇವಸ್ಥಾನದ ಕಲ್ಯಾಣಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಿರುವಳ್ಳುರ್ನ ನ್ಯೂ ಗುಮ್ಮಿಡಿಪೂಂದಿಯ ಸೀತಾಮ್ಮಾಳ್ ರಸ್ತೆಯಲ್ಲಿರುವ ದೇವಾಲಯದ ಕಲ್ಯಾಣಿಗೆ ಜೀವಿತಾ (14), ನರ್ಮದಾ (11) ಹಾಗೂ ಅಶ್ವಿತಾ(15) ಎಂಬ ಬಾಲಕಿಯರು ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಆಯಾ ತಪ್ಪಿ ಬಿದ್ದ ಮೂವರು ಕಲ್ಯಾಣಿ ಪಾಲಾಗಿದ್ದಾರೆ.
ಈ ವೇಳೆ ಅವರ ಜೊತೆಗಿದ್ದ ಜ್ಯೋತಿಲಕ್ಷ್ಮಿ(30) ಮತ್ತು ಸುಮತಿ (35) ಬಾಲಕಿಯರ ರಕ್ಷಣೆ ಸಲುವಾಗಿ ಕಲ್ಯಾಣಿಗೆ ಇಳಿದಿದ್ದಾರೆ. ಆದರೆ ರಕ್ಷಣೆ ಸಾಧ್ಯವಾಗದೆ ಐವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳಕ್ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರ ಮೃತದೇಹಗಳನ್ನು ಕಲ್ಯಾಣಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊನ್ನೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
Discussion about this post