ತುಮಕೂರು : ಖದೀಮರು ಕಾರು, ಬೈಕ್, ಹಣ, ಆಭರಣ ಮನೆ ಕಳ್ಳತನ ಮಾಡುವುದು ಗೊತ್ತು. ಆದರೆ ಸರ್ಕಾರಿ ಬಸ್ ಗಳನ್ನು ಕದಿಯುತ್ತಿದ್ದಾರೆ ಅಂದ್ರೆ ಕಾಲ ಎಷ್ಟು ಕೆಟ್ಟಿರಬೇಕು. ಅಷ್ಟೇ ಅಲ್ಲದೆ ಬಸ್ ಕದಿಯಲು ಕಳ್ಳರಿಗೆ ಅವಕಾಶವಿದೆ ಅಂದ್ರೆ KSRTC ಅಧಿಕಾರಿಗಳು ಅದೆಷ್ಟರ ಮಟ್ಟಿಗೆ ನಿದ್ದೆ ಹೋಗಿರಬೇಕು.
ಅಂದ ಹಾಗೇ ಈ ಘಟನೆ ನಡೆದಿರುವುದು ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ. ಇಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ನಿನ್ನೆ ಕಳ್ಳರು ಕದ್ದೊಯ್ದಿದ್ದಾರೆ. ಊರೆಲ್ಲಾ ಸುತ್ತಾಡಿದ ಬಳಿಕ ಡಿಸೇಲ್ ಖಾಲಿಯಾಗಿದೆ ಹೀಗಾಗಿ ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸನ್ನು ಒಯ್ದ ಕಳ್ಳರು ಕುಣಿಗಲ್, ಅಮೃತೂರು, ಯಡಿಯೂರು ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಓಡಿಸಿದ್ದಾರೆ. ಅಷ್ಟು ಹೊತ್ತಿಗೆ ಡೀಸೆಲ್ ಖಾಲಿಯಾಗಿದೆ ಎಂದು ಜನ್ನೇನಹಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದು ತನಿಖೆಗೆ ಪ್ರಾಥಮಿಕ ಹಂತದಲ್ಲೇ ಅಡ್ಡಿಯಾಗಿದೆ. ಹಾಗಂತ ಬಸ್ ಕಳ್ಳತನ ಮೊದಲ ಸಲವಲ್ಲ, ಈ ಹಿಂದೆ ಬೆಂಗಳೂರಿನಲ್ಲಿ BMTC ಬಸ್ ಅನ್ನು ಕದಿಯಲಾಗಿತ್ತು.
Discussion about this post