ತಮಿಳುನಾಡು : ಮರು ಮದುವೆಗೆ ಅಡ್ಡಿಯಾಗಿದ್ದ 9 ತಿಂಗಳ ಮಗುವನ್ನು ಮಾರಾಟ ಮಾಡಿದ ದುರಂತ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತೂತುಕ್ಕುಡಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೂತುಕ್ಕುಡಿಯ ಜೆಬಮಲಾರ್ ( 28) ಹಾಗೂ ಮಣಿಕಂಠನ್ (38) ವಿವಾಹ 2019ರಲ್ಲಿ ನಡೆದಿತ್ತು. ಒಂದಿಷ್ಟು ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಮನಸ್ತಾಪ ಉಂಟಾಯ್ತು. ಈ ನಡುವೆ ಜೆಬಮಲಾರ್ ಗರ್ಭಿಣಿಯಾದಳು, ಮಗುವಿಗೂ ಜನ್ಮ ನೀಡಿದಳು. ಆದರೆ ಸಂಸಾರದ ಮನಸ್ತಾಪ ಮಾತ್ರ ಸರಿ ಹೋಗಲಿಲ್ಲ. ಹೀಗಾಗಿ ಗಂಡನ ಮನೆ ತೊರೆದು ಬಂದ ಜೆಬಮಲಾರ್ ತವರು ಮನೆ ಸೇರಿದಳು.
ಪತ್ನಿ ಹಾಗೂ ಮಗು ಮನೆ ಬಿಟ್ಟು ಹೋದರೂ ತಲೆ ಕೆಡಿಸಿಕೊಳ್ಳದ ಮಣಿಕಂಠನ್ ತನ್ನ ಪಾಡಿಗೆ ತಾನಿದ್ದ. ಹೀಗಾಗಿ ಮಗಳಿಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ ಪೋಷಕರು 9 ತಿಂಗಳ ಮಗುವನ್ನು ಏನು ಮಾಡೋದು ಅನ್ನುವ ಸಮಸ್ಯೆಗೆ ಸಿಲುಕಿದರು. ಹೀಗಾಗಿ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ ಅವರು ಇದಕ್ಕಾಗಿ ಸಂಚು ರೂಪಿಸಿದರು.
ಈ ನಡುವೆ ಮಕ್ಕಳ ಖರೀದಿಗಾಗಿ ಓಡಾಡುತ್ತಿದ್ದ ಸೆಲ್ವಮಣಿ ಹಾಗೂ ಶ್ರೀದೇವಿ ಇವರಿಗೆ ಪರಿಚಯವಾಗಿದ್ದಾರೆ. ಹೀಗಾಗಿ ಅಲ್ಲೆ ವ್ಯವಹಾರ ಕುದುರಿಸಿದ ಜೆಬಮಲಾರ್ ಪೋಷಕರು 3 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಿದ್ದಾರೆ. ಆದರೆ ವಿಷಯ ಅದು ಹೇಗೋ ಮಣಿಕಂಠನ್ ಕಿವಿಗೆ ಬಿದ್ದಿದೆ. ತಕ್ಷಣ ಅತ್ತೆ ಮನೆಗೆ ದೌಡಾಯಿಸಿ ಮಗುವಿನ ಬಗ್ಗೆ ಪ್ರಶ್ನಿಸಿದ್ದಾನೆ. ಉತ್ತರ ಸಿಗದೇ ಹೋದಾಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.
ಸಪ್ಟಂಬರ್ 28 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಮಗು ಖರೀದಿಸಿದ ದಂಪತಿ, ಇದಕ್ಕೆ ಸಹಕರಿಸಿದ ಬ್ರೋಕರ್ ಹಾಗೂ ಮಗು ಮಾರಾಟ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ.
A case was registered against a 28-year-old woman and five others for allegedly selling a baby boy. Sources said S Jebamalar (28), the mother of the baby, got married to one R Manikandan of Kothanar Colony in 2019. In shocking case, a woman from Tamil Nadu’s Tuticorin district allegedly sold off her nine-month-old son after separating from her husband as she wanted to marry again but the child was proving to be a hurdle in finding a match for her.
Discussion about this post