ಶಿವಮೊಗ್ಗ : ಅತ್ಯಾಚಾರಿಗಳಿಗೆ ಮತ್ತಷ್ಟು ಕಠಿಣ ಶಿಕ್ಷೆ ಮತ್ತು ಶೀಘ್ರ ವಿಚಾರಣೆಯ ಬಗ್ಗೆ ನಮ್ಮನಾಳುವ ಮಂದಿ ತಲೆ ಕೆಡಿಸಿಕೊಳ್ಳದಿದ್ರೆ, ನಮ್ಮನೆಯ ಹೆಣ್ಣು ಮಕ್ಕಳನ್ನು ದೇವರೇ ರಕ್ಷಿಸಬೇಕು. ಪ್ರತೀ ನಿತ್ಯ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದರೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕನಿಷ್ಟ ಶಿಕ್ಷೆಯ ಭಯದಿಂದ ಕಾಮುಕರು ತಮ್ಮ ಅಟ್ಟಹಾಸವನ್ನು ನಿಲ್ಲಿಸಬಹುದು ಅನ್ನುವುದು ಎಲ್ಲರ ಆಶಯ.
ಈ ನಡುವೆ ಶಿವಮೊಗ್ಗ ಜಿಲ್ಲೆ.ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಪಕ್ಕದ ಮನೆಯ ವ್ಯಕ್ತಿಯೇ ಬಾಲೆಯ ಪಾಲಿಗೆ ಕಿರಾತಕನಾಗಿದ್ದು, ಬಾಲಕಿಯನ್ನು ಟಿವಿ ತೋರಿಸುತ್ತೇನೆ ಎಂದು ಹೇಳಿ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ.
ಮಗುವಿನ ಗುಪ್ತಾಂಗದಲ್ಲಿ ರಕ್ತವನ್ನು ಗಮನಿಸಿದಂತ ಪೋಷಕರು, ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಅತ್ಯಾಚಾರದ ವಿಷಯ ಗೊತ್ತಾಗಿದೆ. ಈ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Discussion about this post