ಪ್ರೇಯಸಿ ಬೇರೆಯವನನ್ನು ಮದುವೆಯಾಗಿದ್ದನ್ನು ( shivaji nagar crime ) ಸಹಿಸಲು ಸಾಧ್ಯವಾಗದ ಭಗ್ನ ಪ್ರೇಮಿ ಕಿರಿಕ್ ತೆಗೆದಿದ್ದ. ಇದೀಗ ಪ್ರಾಣವನ್ನೂ ಕಳೆದುಕೊಂಡಿದ್ದಾನೆ
ಬೆಂಗಳೂರು : ಮಾಜಿ ಪ್ರೇಯಸಿಯ ಮನೆಗೆ ಬಂದು ಗಲಾಟೆ ಮಾಡಿದ ಭಗ್ನ ಪ್ರೇಮಿಯೊಬ್ಬನನ್ನು ಮಾಜಿ ಪ್ರೇಯಸಿ ಗಂಡನೇ ಕೊಲೆ ಮಾಡಿದ ಘಟನೆ ಶಿವಾಜಿನಗರದಲ್ಲಿ ( shivaji nagar crime ) ನಡೆದಿದೆ. ಮೃತನನ್ನು ಜಾವದ್ ಖಾನ್ (25) ಎಂದು ಗುರುತಿಸಲಾಗಿದೆ.
ಶಿವಾಜಿನಗರದ ನಿವಾಸಿಯಾಗಿದ್ದ ಸಿಮ್ರಾನ್ ಮತ್ತು ಮೃತ ಜಾವದ್ ಖಾನ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದ ಇವರು ವೈಮನಸ್ಸಿನ ಕಾರಣದಿಂದ ಇತ್ತೀಚೆಗೆ ಬೇರೆಯಾಗಿದ್ದರು. ಬಳಿಕ ಮೆಡಿಕಲ್ ರೆಪ್ ಜಿನಾಶ್ ಜೊತೆ ಸಿಮ್ರಾನ್ ವಿವಾಹವಾಗಿದ್ದಳು. ಈ ಮದುವೆಯಿಂದ ಕೆರಳಿದ್ದ ಜಾವದ್, ಮಾಜಿ ಪ್ರೇಯಸಿಯ ಮನೆ ಬಳಿ ಬಂದು ಪದೇ ಪದೇ ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ : Mangalsutra madras high court : ಮಾಂಗಲ್ಯ ಬಿಚ್ಚಿಡುವುದು ಪತಿಗೆ ನೀಡುವ ಮಾನಸಿಕ ಹಿಂಸೆ : ತಮಿಳುನಾಡು ಹೈಕೋರ್ಟ್
ಹಾಗೇ ಶುಕ್ರವಾರ ರಾತ್ರಿ ಮತ್ತೆ ಸಿಮ್ರಾನ್ ಮನೆ ಬಳಿ ಬಂದ ಜಾವದ್ ಖಾನ್, ಕಿರಿಕ್ ತೆಗೆದಿದ್ದಾನೆ. ಈ ವೇಳೆ ಸಿಮ್ರಾನ್ ಪತಿ ಜಿನಾಶ್ ಹಾಗೂ ಜಾವದ್ ಖಾನ್ ನಡುವೆ ಜಗಳವಾಗಿದೆ. ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆಗ ಜಿನಾಶ್ ಕೈಯಲ್ಲಿದ್ದ ಕತ್ತರಿಯಿಂದ ಖಾನ್ ಕುತ್ತಿಗೆಗೆ ಇರಿದಿದ್ದಾನೆ. ಹಲ್ಲೆಗೆ ಒಳಗಾದ ಖಾನ್ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ ಆಸ್ಪತ್ರೆ ಸೇರಿದ ಕೆಲವೇ ಕ್ಷಣದಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಆಸ್ಪತ್ರೆ ಮೆಟ್ಟಿಲಲ್ಲೇ ಕುಸಿದು ಬಿದ್ದ ಬಳಿಕ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ಸಿಮ್ರಾನ್ ಮತ್ತು ಆಕೆಯ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಖಾನ್ ಬರುವಾಗಲೇ ಕತ್ತರಿ ತಂದಿದ್ದ, ಆತನೇ ಸ್ವತ ಚುಚ್ಚಿಕೊಂಡಿದ್ದಾನೆ ಅನ್ನುವ ಮಾಹಿತಿಗಳು ಕೂಡಾ ಲಭ್ಯವಾಗಿದೆ. ಹೀಗಾಗಿ ಖಾನ್ ಸಾವಿಗೆ ಅಸಲಿ ಕಾರಣವೇನು ಅನ್ನುವುದನ್ನು ಪೊಲೀಸರೇ ಪತ್ತೆ ಹಚ್ಚಬೇಕಾಗಿದೆ.
ವಾಟ್ಸಾಪ್ ಮೆಸೇಜ್ ಮಾಡುವುದನ್ನು ನಿಲ್ಲಿಸಿದ ವಿವಾಹಿತ ಮಹಿಳೆಯ ಹತ್ಯೆಗೆ ಯತ್ನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಮೆಸೇಜ್ ಚಟ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ
ಬಂಟ್ವಾಳ : ಈ ಮೊಬೈಲ್ ಅನ್ನುವುದು ಈಗ ಸಂವಹನ ಸಾಧನವಾಗಿ ಉಳಿದಿಲ್ಲ. ಅದೊಂದು ಚಟವಾಗಿ ಪರಿಣಮಿಸಿದೆ. ಅದರಲ್ಲೂ ಗೇಮ್ಸ್, ವಿಡಿಯೋ ಕಥೆಗಳನ್ನು ಕೇಳುವುದೇ ಬೇಡ. ಆದರೆ ಬಂಟ್ವಾಳದ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿರುವುದು ಸ್ವಲ್ಪ ಡಿಫರೆಂಟ್ ಸ್ಟೋರಿ. ಸಂಬಂಧಿಕ ಮಹಿಳೆಯೊಬ್ಬಳು ಮೆಸೇಜ್ ಮಾಡುವುದನ್ನು ನಿಲ್ಲಿಸಿದಳು ಅನ್ನುವ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಕೊಲೆ ಮಾಡಲು ಮುಂದಾಗಿದ್ದಾನೆ. ಅಂದ್ರೆ ಮೆಸೇಜ್ ಚಟ ಎಷ್ಟರಮಟ್ಟಿಗೆ ಹತ್ತಿರಬೇಕು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೆಸೇಜ್ ಮಾಡಿಲ್ಲ ಅನ್ನುವ ಕಾರಣಕ್ಕೆ ಆಕೆಯ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲುವ ಯತ್ನ ನಡೆದಿದೆ.
ಪಿಲಮೊಗರು ನಿವಾಸಿ ಲತಾ ಹಾಗೂ ಪಲ್ಲಿಪಾಡಿ ನಿವಾಸಿ ರಮೇಶ್ ಸಂಬಂಧಿಗಳಾಗಿದ್ದು, ಇದೇ ಕಾರಣದಿಂದ ವಾಟ್ಸಾಪ್ ನಲ್ಲಿ ಪರಸ್ಪರ ಸಂದೇಶ ವಿನಿಮಯಗಳಾಗುತ್ತಿತ್ತು. ಲತಾ ಅವರಿಗೆ ಉಮೇಶ್ ಅನ್ನುವವರೊಂದಿಗೆ ಮದುವೆಯಾಗಿದ್ದು, ಸಂಸಾರ ಕೂಡಾ ಚೆನ್ನಾಗಿಯೇ ಸಾಗಿತ್ತು. ಈ ನಡುವೆ ರಮೇಶ್ ಕೆಲವೊಮ್ಮೆ ಉಮೇಶ್ ಮನೆಗೆ ಬಂದು ಹೋಗುತ್ತಿದ್ದ ಕೂಡಾ. ಆದರೆ ಆತನೇ ಸಂಸಾರಕ್ಕೆ ಕೊಳ್ಳಿ ಇಡ್ತಾನೆ ಅಂದುಕೊಂಡಿರಲಿಲ್ಲ.
ಇನ್ನು ಲತಾ ಮತ್ತು ರಮೇಶನ ಮೆಸೇಜ್ ವಿಚಾರದಲ್ಲಿ ಗಂಡ ಉಮೇಶ್ ಅಸಮಾಧಾನ ಹೊಂದಿದ್ದರು. ಹೀಗಾಗಿ ಹೆಂಡತಿಗೆ ಸಹಜವಾಗಿಯೇ ಬುದ್ದಿ ಮಾತು ಹೇಳಿದ್ದರು. ಗಂಡನ ಮಾತಿಗೆ ಗೌರವ ಕೊಟ್ಟು ಅವರು ಮೆಸೇಜ್ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ ಲತಾ ಅವರ ಮನೆಗೆ ಬಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಮನೆಯವರಿಗೆ ಇವೆಲ್ಲಾ ಇಷ್ಟ ಆಗೋದಿಲ್ಲ ಹೀಗಾಗಿ ನಾನು ಮೆಸೇಜ್ ಮಾಡೋದಿಲ್ಲ ಅಂದ್ರೆ ಕುಪಿತನಾದ ರಮೇಶ ಮನೆಯ ಒಳಗೆ ನುಗ್ಗಿ ಕತ್ತಿ ತೆಗೆದು ಲತಾ ಅವರಿಗೆ ಬೀಸಿದ್ದಾನೆ.
ಈ ವೇಳೆ ಲತಾ ಅವರ ಕೂಗು ಕೇಳಿದ ನೆರೆ ಹೊರೆಯವರು ಧಾವಿಸಿದ್ದು ಅಪಾಯದಿಂದ ಪಾರು ಮಾಡಿದ್ದಾರೆ ಈ ವೇಳೆ ಈ ಆರೋಪಿ ಓಡಿ ಹೋಗಿದ್ದು, ರಮೇಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Discussion about this post