ಹುಬ್ಬಳ್ಳಿ : ಸರಳ ವಾಸ್ತು (saral Vaastu) ಸಂಸ್ಥೆಯ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ( chandrashekhar guruji Murder case ) ಅವರ ಕೊಲೆ ಪ್ರಕರಣ ಸಂಬಂಧದ ತನಿಖೆಯಲ್ಲಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಈ ನಡುವೆ ಕೊಲೆ ಕುರಿತಂತೆ ಮಾತನಾಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಂ ಮಾತನಾಡಿದ್ದು, ಹಂತಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಅಂದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಪೊಲೀಸ್ ಆಯುಕ್ತ ಲಾಬೂರಾಂ ( Hubballi police commissioner Labhu Ram ) ಹೊಟೇಲ್ ನ ರೂಮ್ ನಲ್ಲಿದ್ದ ( saral Vaastu) ಚಂದ್ರಶೇಖರ ಗುರೂಜಿಯವರನ್ನು ಯಾರೋ ಫೋನ್ ಮಾಡಿ ಕೆಳಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅವರು ಹೋಟೆಲ್ ನ ರಿಸೆಪ್ಸನ್ ಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಎಸಿಪಿ 5 ಪೊಲೀಸರ ಐದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಲಾಬೂರಾಮ್ ತಿಳಿಸಿದ್ದಾರೆ.
ಜುಲೈ 2ರಂದು ಹೋಟೆಲ್ ಗೆ ಬಂದಿದ್ದ ಚಂದ್ರಶೇಖರ ಗುರೂಜಿ ( chandrashekhar guruji ) ನಾಳೆ ಕೊಠಡಿ ಖಾಲಿ ಮಾಡುವವರಿದ್ದರು. ಅಷ್ಟು ಹೊತ್ತಿಗೆ ಇವರ ಕೊಲೆ ಮಾಡಲಾಗಿದೆ.
ಇದನ್ನೂ ಓದಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ : ಹುಬ್ಬಳ್ಳಿ ಹೋಟೆಲ್ ನಲ್ಲಿ ದುರ್ಘಟನೆ
ಪ್ರಾಥಮಿಕ ಮಾಹಿತಿಗಳ ಪ್ರಕಾರ ಪರಿಚಿತರೇ ಈ ಕೃತ್ಯ ಮಾಡಿರುವ ಸಾಧ್ಯತೆಗಳಿದೆ. ಸಿಸಿಟಿವಿಯಲ್ಲಿ ದಾಖಲಾದ ಕೊಲೆ ಪ್ರಕರಣದ ದೃಶ್ಯಗಳನ್ನು ಗಮನಿಸಿದರೆ, ಗುರೂಜಿಗೆ ಇವರು ಪರಿಚಿತರು ಅನ್ನುವಂತಿದೆ. ರೂಮ್ ನಿಂದ ರಿಸೆಪ್ಸನ್ ಗೆ ಬಂದ ಗುರೂಜಿ ನಡೆದುಕೊಳ್ಳುವ ರೀತಿ, ಅವರು ಕಾಲಿಗೆ ಬಿದ್ದ ದೃಶ್ಯಗಳು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹೆಸರಿಗೆ ಬಕ್ ಸ್ಟಾಲ್ : ಕೆಲಸ ಅಪ್ರಾಪ್ತರಿಗೆ ವೈಟರ್ ಮಾರಾಟ
ಬೆಂಗಳೂರು : ಹೆಸರಿಗೆ ಇದೊಂದು ಬುಕ್ ಸ್ಟಾಲ್, ಆದರೆ ಮಾಡುತ್ತಿದ್ದದ್ದು ಮಾತ್ರ ಸಮಾಜ ಘಾತುಕ ಕಾರ್ಯ. ಹೌದು ಬುಕ್ ಸ್ಟಾಲ್ ಹೆಸರಿನಲ್ಲಿ Whitener and solution ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಯಶವಂತಪುರದ ಲೋಕೇಶ್ (35) ಎಂದು ಗುರುತಿಸಲಾಗಿದೆ.
ರಾಬರಿ ಪ್ರಕರಣವೊಂದರಲ್ಲಿ ಸದಾಶಿವನಗರ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾಗ, ಈ ಸೆಲೂಷನ್ ಮಾರಾಟದ ವಿಚಾರ ಬೆಳಕಿಗೆ ಬಂದಿದೆ. ಅಪ್ರಾಪ್ತರಿಗೆ ಮತ್ತು ಬರಿಸೋ ಈ ನಿಧಾನ ವಿಷದ ಮಾರಾಟದ ಮಾಹಿತಿ ಸಿಗುತ್ತಿದ್ದಂತೆ ಯಶವಂತಪುರ RTO ಕಚೇರಿಯ ಬಳಿ ಇರುವ ಪುಟ್ಟಪ್ಪ ಬುಕ್ ಸ್ಟಾಲ್ ಗೆ ದಾಳಿ ಮಾಡಿದ್ದಾರೆ.
ಬಂಧಿತ ಆರೋಪಿ ಲೋಕೇಶ್ ದುಬಾರಿ ದರಕ್ಕೆ ಅಪ್ರಾಪ್ತರಿಗೆ ಸಲೂಷನ್ ಮಾರಾಟ ಮಾಡುತ್ತಿದ್ದ, ಈ ಮೂಲಕ ಅಕ್ರಮವಾಗಿ ಹಣ ಗಳಿಸುತ್ತಿರುವುದರ ಜೊತೆಗೆ ನಿಯಮ ಬಾಹಿರವಾಗಿ ಈ ವಸ್ತುವನ್ನು ಮಾರಾಟ ಮಾಡಿ ಅಕ್ರಮ ಕೆಲಸಗಳಿಗೆ ಸಾಥ್ ನೀಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ Whitener and solution ಅನ್ನುವುದು Slow poison. ಕಾಗದದ ಮೇಲಿನ ಅಕ್ಷರ ಅಳಿಸಲು ಬಳಸುವ ಈ ಸಾಧನ ಮನುಷ್ಯನ ನೆನಪಿನ ಶಕ್ತಿಯನ್ನೇ ಅಳಿಸುತ್ತದೆ. ಅಷ್ಟರ ಮಟ್ಟಿಗೆ ಇದು ವಿಷ ಅನ್ನುವುದು ಅನೇಕರಿಗೆ ಗೊತ್ತಿಲ್ಲ.
Discussion about this post