ದುನಿಯಾ ವಿಜಿ ಅಟ್ಟಹಾಸಗಳು ಬೆಳಕಿಗೆ ಬರತೊಡಗಿದೆ. ಹೊರಗಡೆ ಹಿರೋ ಆಗಿ ಕಾಣಿಸಿಕೊಂಡಿರುವ ವಿಜಿ ತನ್ನೊಳಗಡೆ ಅಡಗಿಸಿಕೊಂಡಿರುವುದು ಬೇರೆ ಅನ್ನುವುದನ್ನು ಬಹಿರಂಗಪಡಿಸತೊಡಗಿದ್ದಾರೆ.
ಇನ್ನು ದುನಿಯಾ ಅಟ್ಟಹಾಸದ ನಡುವೆ ಪ್ರಸ್ತಾಪವಾಗುತ್ತಿರುವುದು ಪಾನಿಪೂರಿ ಕಿಟ್ಟಿ ಅನ್ನುವ ಹೆಸರು.ಬಾಡಿ ಬಿಲ್ಡರ್ ಅನ್ನಿಸಿಕೊಂಡಿರುವ ಕಿಟ್ಟಿ ಅಲಿಯಾಸ್ ಕೃಷ್ಣಮೂರ್ತಿ ಮುಂದೆ ಅದ್ಯಾಕೆ ಪಾನಿಪೂರಿ ಹೆಸರು ಸೇರಿಕೊಂಡಿದೆ ಅನ್ನುವುದೇ ಕುತೂಹಲ.
ಜೊತೆಗೆ ಪಾನಿಪೂರಿ ಕಿಟ್ಟಿ ಅನ್ನುವ ಹೆಸರನ್ನು ಜಾಲಾಡಿದಾರೆ ಎಲ್ಲೂ ಅಪರಾಧ ಹಿನ್ನಲೆ ಕಾಣಿಸಿಕೊಳ್ಳುತ್ತಿಲ್ಲ. ಅಂದ ಮೇಲೆ ಪಾನಿಪೂರಿ ಕಿಟ್ಟಿ ಹೆಸರು ಸದ್ದು ಮಾಡುತ್ತಿರುವುದ್ಯಾಕೆ ಎಂದು ನೋಡಿದರೆ, ಅವರು ಸೆಲೆಬ್ರೆಟಿ ಫಿಟ್ನೆಸ್ ಗುರು.
ಎಷ್ಟು ಮಂದಿಗೆ ಗೊತ್ತೋ, ಇಲ್ವೋ…ಸ್ಯಾಂಡಲ್ ವುಡ್ ನ ಸದ್ಯದ ಬಹು ಬೇಡಿಕೆಯ ಫಿಟ್ನೆಸ್ ಗುರು ಅಂದ್ರೆ ಪಾನಿ ಪೂರಿ ಕಿಟ್ಟಿ.
ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾನಿ ಪೂರಿ ಕಿಟ್ಟಿ ಸಾಧನೆ ಮಾಡಿದ್ದು, ಬರೋಬ್ಬರಿ 24 ಬಾರಿ ಮಿಸ್ಟರ್ ಕರ್ನಾಟಕ, 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್, 3 ಬಾರಿ ಚಾಂಪಿಯನ್ ಆಫ್ ಚಾಂಪಿಯನ್ ಮತ್ತು ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ 3ನೇ ಹಾಗೂ 4ನೇ ಸ್ಥಾನ ಪಡೆದಿರುವ ಹೆಮ್ಮೆ ಇವರದ್ದು.
ದುನಿಯಾ ವಿಜಯ್, ಪ್ರೇಮ್, ಯಶ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ಟಾಪ್ ನಟರಿಗೆ ಇದೇ ಪಾನಿ ಪೂರಿ ಕಿಟ್ಟಿ ಫಿಟ್ನೆಸ್ ಗುರುವಾಗಿರುವ ಕಾರಣ ಇವರ ಹೆಸರು ಇದೀಗ ಸದ್ದು ಮಾಡುತ್ತಿದೆ.
ಅದ್ಯಾಕೆ ಪಾನಿಪೂರಿ…?
ಕಿಟ್ಟಿ ಕುಟುಂಬದ ಮೂಲ ಕಸುಬು ಪಾನಿ ಪೂರಿ. ಕಿಟ್ಟಿ ತಂದೆ ಹಾಗೂ ತಾತ ಪಾನಿ ಪೂರಿ ವ್ಯಾಪಾರದಲ್ಲೇ ಜೀವನ ಸಾಗಿಸಿದವರು. ಚಿಕ್ಕವಯಸ್ಸಿನಿಂದಲೂ ಕಿಟ್ಟಿ, ಪಾನಿ ಪೂರಿ ಮಾಡುವುದರಲ್ಲಿ ಎಕ್ಸ್ ಪರ್ಟ್ . ಈಗ್ಲೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಕಿಟ್ಟಿ ಅವರ ಪಾನಿ ಪೂರಿ ಅಂಗಡಿ ಇದೆ.
ಬಡತನದಲ್ಲೇ ಹುಟ್ಟಿ ಬೆಳೆದ ಪಾನಿ ಪೂರಿ ಕಿಟ್ಟಿಗೆ ಇದ್ದ ಏಕೈಕ ಆಸೆ ಅಂದ್ರೆ ಬಾಡಿ ಬಿಲ್ಡಿಂಗ್. ತಮ್ಮ ಪಾನಿ ಪೂರಿ ಅಂಗಡಿಗೆ ಬರುತ್ತಿದ್ದ ಪೊಲೀಸ್ ಆಫೀಸರ್ ಒಬ್ಬರ ಕಟ್ಟುಮಸ್ತಾದ ದೇಹ ಇವರಿಗೆ ಸ್ಫೂರ್ತಿ. ಮಲ್ಲೇಶ್ ಮಾಸ್ಟರ್ ಎಂಬುವರ ಮಾರ್ಗದರ್ಶನದಿಂದ ಬಾಡಿ ಬಿಲ್ಡ್ ಮಾಡಲು ಕಿಟ್ಟಿ ಶುರು ಮಾಡಿದರು. ಬಳಿಕ ಹಿಂತಿರುಗಿ ನೋಡಲಿಲ್ಲ.
Discussion about this post