ಅಮಾಯಕ ಪ್ರಾಣಿಗಳ ವಧೆ ಬಗ್ಗೆ ಈಗಾಗಲೇ ಕಾನೂನುಗಳಿದೆ. ಆದರೆ ಆ ಕಾನೂನು ಪಾಲನೆ ಯಾಕಾಗುತ್ತಿಲ್ಲ ಅನ್ನುವುದು ಪ್ರಶ್ನೆ
ಬೆಂಗಳೂರು : ಬಕ್ರೀದ್ ಹಬ್ಬದ ಸಲುವಾಗಿ ರಾಜ್ಯದ ಗಡಿಭಾಗ ಹೊಸೂರಿಗೆ ರಾಜಸ್ಥಾನದಿಂದ ಅಕ್ರಮ ಮಾರ್ಗದ ಮೂಲಕ ಕರೆ ತರಲಾಗಿದ್ದ 18 ಒಂಟೆಗಳನ್ನು ರಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಒಂಟೆ ಬಲಿ ನಿಷೇಧವಾಗಿರುವ ಕಾರಣ, ಹೇಗೋ ಕಳ್ಳಮಾರ್ಗದ ಮೂಲಕ ರಾಜ್ಯದ ಗಡಿಯೊಳಗೆ ಒಂಟೆಗಳನ್ನು ತಂದು ಬಿಡುತ್ತಾರೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈ ವ್ಯವಹಾರ ಜೋರಾಗಿರುತ್ತದೆ. ಹೀಗಾಗಿ ರಾಜಸ್ಥಾನದಿಂದ ತರಲಾಗಿದ್ದ 18 ಒಂಟೆಗಳನ್ನು ಹೊಸೂರಿನಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಸಮಯ ಸಿಕ್ಕ ವೇಳೆ ಒಂಟೆಗಳನ್ನು ಕರ್ನಾಟಕದ ಗಡಿ ದಾಟಿಸುವುದು ಅವರ ಉದ್ದೇಶವಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊಸೂರು ನಗರ ಪಾಲಿಕೆ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 18 ಒಂಟೆಗಳನ್ನು ರಕ್ಷಿಸಲಾಗಿದೆ. ಇದೀಗ ಈ ಒಂಟೆಗಳನ್ನು ಕೋರಮಂಗಲ ಸಮೀಪದ ಗೋಶಾಲೆಗೆ ಕಳುಹಿಸಲಾಗಿದೆ.
Discussion about this post