ಮಾರುಕಟ್ಟೆಯಲ್ಲಿ ಏನೆಲ್ಲಾ ಬಾಡಿಗೆಗೆ ಸಿಗುತ್ತದೋ ಗೊತ್ತಿಲ್ಲ…ಇದೀಗ ಬಾಯ್ ಫ್ರೆಂಡ್ ಸರದಿ. ಹೌದು ಇತ್ತೀಚೆಗೆ ಭಾರತದ ಕೌಶಲ್ ಪ್ರಕಾಶ್ ಎಂಬಾತ ರೆಂಟ್ ಎ ಬಾಯ್ ಫ್ರೆಂಡ್ (RABF) ಹೆಸರಿನ ಆ್ಯಪ್ ನ್ನು ಸಿದ್ದಪಡಿಸಿ ಬಿಡುಗಡೆ ಮಾಡಿದ್ದಾನೆ. ಮುಂಬೈ ಮತ್ತು ಪುಣೆಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದ್ದು, ಹುಡುಗಿಯರಲ್ಲಿ ಒಂಟಿತನ ಹಾಗೂ ಖಿನ್ನತೆ ಕಡಿಮೆ ಮಾಡುವುದು ಈ ಆ್ಯಪ್ ಉದ್ದೇಶವಂತೆ
ಬಾಯ್ ಫ್ರೆಂಡ್ ಇಲ್ದೆ ಇರುವ ಹುಡುಗಿಯರು ಈ ಆ್ಯಪ್ ನಲ್ಲಿ ಸೇರಿಕೊಂಡು ಉಪಹಾರ, ಊಟ, ಪಾರ್ಟಿಗಳಿಗೆ ಬಾಡಿಗೆ ಬಾಯ್ ಫ್ರೆಂಡ್ ಕರೆದುಕೊಂಡು ಹೋಗಬಹುದು. ಹುಡುಗಿಯರ ಜೊತೆ ಬರುವ ಬಾಡಿಗೆ ಹುಡುಗ್ರು ಯಾವುದೇ ಖಾಸಗಿ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಹಾಗೆ ಶಾರೀರಿಕ ಸಂಬಂಧ ಬೆಳೆಸುವುದಿಲ್ಲ. ಹುಡುಗಿಯರ ಖಿನ್ನತೆ ದೂರ ಮಾಡುವುದು ಮಾತ್ರ ಅವ್ರ ಉದ್ದೇಶ ಎಂದು APP ಹೇಳುತ್ತಿದೆ. 22-25 ವರ್ಷದೊಳಗಿನ ಹುಡುಗರು ಇದರಲ್ಲಿ ಕೆಲಸ ಮಾಡುತ್ತಿದ್ದು, ಹುಡುಗಿಯರು ಮನೋವೈದ್ಯರ ಜೊತೆಯೂ ಮಾತನಾಡಬಹುದಂತೆ
APP ಲಾಂಚ್ ಆದ ಕೆಲವೇ ದಿನಗಳಲ್ಲಿ ವೈರಲ್ ಆಗಿದೆ. ಪ್ಲೇ ಸ್ಟೋರಿನಿಂದ APP ಡೌನ್ ಲೋಡ್ ಮಾಡಿಕೊಂಡ ನಂತರ ಬಾಯ್ ಫ್ರೆಂಡ್ ನಲ್ಲಿ ರಿಜಿಸ್ಟರ್ ಆಗಬೇಕು . ಇದಾದ ನಂತರ ಕೆಲಸ ಖಾಸಗಿ ವಿಚಾರಗಳನ್ನು ಆಪ್ ಲೋಡ್ ಮಾಡಬೇಕು.
ಬಾಯ್ ಫ್ರೆಂಡ್ ಅನ್ನು ಬಾಡಿಗೆಗೆ ಪಡೆದವರು ಹೊರಗೆ ಸುತ್ತಾಡಿಸುವುದಲ್ಲದೇ, ಹಣವನ್ನೂ ಕೊಡುತ್ತಾರೆ ಎನ್ನಲಾಗಿದೆ.
ಆದರೆ ಈ APP ನೋಡಿದರೆ ದೊಡ್ಡದೊಂದು ಮೋಸ ಜಾಲ ಇದು ಅನ್ನಿಸುತ್ತಿದೆ.ರಿಜಿಸ್ಟರ್ ಮಾಡಿಕೊಳ್ಳ ಬಯಸುವ ಹುಡುಗರು 5000 ಸಾವಿರ ರೂಪಾಯಿ ಕಾಸು ಕಟ್ಟಬೇಕು ಎಂದು ನಿಬಂಧನೆ ಕೂಡಾ ವಿಧಿಸಲಾಗಿದೆ. ಒಂದಿಷ್ಟು ಕಾಸು ಮಾಡಿಕೊಂಡು ಇದು ಬಾಗಿಲು ಮುಚ್ಚಿದರೂ ಅಚ್ಚರಿಯಿಲ್ಲ.
ಹುಡುಗ ಹುಡುಗಿ ಭೇಟಿಯಾದ ನಂತರ ದೈಹಿಕ ಸಂಬಂಧ ಬೆಳೆಸುವಂತಿಲ್ಲ, ರೊಮ್ಯಾಂಟಿಕ್ ಸಂಬಂಧ ಬೆಳೆಸುವಂತಿಲ್ಲ ಅಂದಿದೆ. ಒಂದ್ಸಲ ಹುಡುಗ ಹುಡುಗಿ ಭೇಟಿಯಾದ ನಂತರ ಏನಾಗುತ್ತದೆ ಅನ್ನುವುದನ್ನು ನೋಡುವುದು ಭಗವಂತನೊಬ್ಬನೇ ತಾನೇ…
ಜೊತೆಗೆ ಹುಡುಗಿಯರನ್ನು ಭೇಟಿಯಾಗುವ ಹುಡುಗರು ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ ಎಂದು ಯಾವ ಗ್ಯಾರಂಟಿ, ನಾಳೆ ಯಾವುದಾದರೂ ಅನಾಹುತವಾದರೆ ಸಮಾಜ ಪೊಲೀಸ್ ವ್ಯವಸ್ಥೆಯನ್ನು ದೂರುತ್ತದೆ. ಪಾಪ ಪೊಲೀಸರೇನು ಮಾಡಲು ಸಾಧ್ಯ. ನಾಳೆ ಮೋಸ ಹೋಗಿ ಪೊಲೀಸ್ ಠಾಣೆಗೆ ದೂರು ಕೊಡುವ ಬದಲು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
ಇನ್ನು APP ನಲ್ಲಿ ಭೇಟಿಯಾದ ಹುಡುಗರು ಹುಡುಗಿಯರಿಗೆ ಸಮಾಧಾನ ಹೇಳುತ್ತಾರೆ. ಮಾನಸಿಕ ನೆಮ್ಮದಿ ನೀಡುತ್ತಾರೆ ಅನ್ನುವುದು ದೊಡ್ಡದೊಂದು ಜೋಕ್. ಇದನ್ನು ಮಾನಸಿಕ ರೋಗ ತಜ್ಞರು ಕೂಡಾ ಹೇಳಿದ್ದಾರೆ.
ಏನಿವೇ ಮೇಲ್ನೋಟಕ್ಕೆ ಈ APP ದೊಡ್ಡದೊಂದು ಅಪಾಯವನ್ನು ಹೊದ್ದು ಮಲಗಿದೆ ಅನ್ನುವುದು ಸ್ಪಷ್ಟ. ಒಂದು ಸಲ ಈ ಹೊಂಡಕ್ಕೆ ಬಿದ್ದರೆ ಎದ್ದೇಳುವುದು ಕಷ್ಟ.
ಆದರೂ ಕೆಲವೊಂದು ಸೆಲೆಬ್ರೆಟಿಗಳು ಈ APP ಅನ್ನು ಹೊಗಳುತ್ತಿರುವುದು ದುರಂತವೇ ಸರಿ.
[youtube https://www.youtube.com/watch?v=_7xxScTkwcs&w=853&h=480]
Discussion about this post